ಲೋಕಸಭೆ 
ದೇಶ

ವಿಪಕ್ಷಗಳ ಗದ್ದಲ, ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ!

ಇಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದ ವಿಪಕ್ಷ ಸದಸ್ಯರು, ಶರಣಾದ ಮೋದಿ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.

ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಕೆಲವೊಂದು ಅಂಶಗಳನ್ನು ಉಲ್ಲೇಖಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಓಂ ಬಿರ್ಲಾ ಅನುಮತಿ ನಿರಾಕರಿಸಿದ್ದಕ್ಕಾಗಿ ವಿಪಕ್ಷಗಳು ಲೋಕಸಭೆಯಲ್ಲಿಂದು ತೀವ್ರ ಪ್ರತಿಭಟನೆ ನಡೆಸಿದವು.

ಇದರಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ತದನಂತರ 2 ಗಂಟೆಗೆ ಮುಂದೂಡಲಾಯಿತು. ಇಂದು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದ ವಿಪಕ್ಷ ಸದಸ್ಯರು, ಶರಣಾದ ಮೋದಿ ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.

ಸ್ಪೀಕರ್ ಕೇವಲ ಒಂದು ಪ್ರಶ್ನೆಯನ್ನಷ್ಟೇ ತೆಗೆದುಕೊಂಡರು. ತದನಂತರ ವಿಪಕ್ಷ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್ ವಿವಿಧ ರಂಗಗಳಲ್ಲಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಪ್ರಶ್ನೋತ್ತರ ಕಲಾಪ ವಿಪಕ್ಷಗಳಿಗೆ ನೆರವಾಗುತ್ತದೆ ಎಂದು ಹೇಳಿ ವಿಪಕ್ಷ ಸದಸ್ಯರನ್ನು ಮನವೊಲಿಸಲು ಯತ್ನಿಸಿದರು. ಆದರೆ, ವಿಪಕ್ಷ ಸದಸ್ಯರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಯೋಜಿತ ರೀತಿಯಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದು ಸಂಸದರಿಗೆ ಯೋಗ್ಯವಲ್ಲ ಎಂದು ಬಿರ್ಲಾ ಹೇಳಿದ ಸ್ಪೀಕರ್, ಸುಮಾರು ಒಂದು ಗಂಟೆಗಳ ಕಾಲ ಕಲಾಪವನ್ನು ಮುಂದೂಡಿದರು. ಬಳಿಕ ಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರೆದರಿಂದ ಕಲಾಪವನ್ನು ಮಧ್ಯಾಹ್ನ2 ಗಂಟೆಗೆ ಮುಂದೂಡಿದರು. ನಿನ್ನೆಯೂ ಇದೇ ವಿಚಾರವಾಗಿ ಲೋಕಸಭೆಯಲ್ಲಿ ಕೋಲಾಹಲವೇ ಉಂಟಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

'ಇನ್ನೊಂದ್ ವರ್ಷ ಖರೀದಿ ಮಾಡ್ಬೇಡಿ..'.: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದ ಚಿನ್ನಾಭರಣ ಷೇರು

ಎರಡು ವರ್ಷದವೆರೆಗಿನ 'ಸಮ್ಮತಿಯ ಲೈಂಗಿಕ ಸಂಬಂಧ' ಅತ್ಯಾಚಾರವೇ? ಕೋರ್ಟ್ ಹೇಳಿದ್ದೇನು!

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುತ್ತಲೇ ಅಸಭ್ಯ ವರ್ತನೆ ತೋರಿದ ಸ್ಟಾರ್ ಬ್ಯಾಟರ್ Tim David, ಬಿಸಿಸಿಐ ಕೆಂಗಣ್ಣು!

West Asia war ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,000 ಅಂಕ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ

SCROLL FOR NEXT