ಆತ್ಮಹತ್ಯೆಗೆ ಶರಣಾದ ಮಹಿಳಾ ಟೆಕ್ಕಿ 
ದೇಶ

ಹುಡುಗರು ಒಪ್ತಿಲ್ಲ.. ಮದುವೆ ವಿಳಂಬ, ತಾಯಿ ಅನಾರೋಗ್ಯ: ಹುಸೇನ್ ಸಾಗರ್ ಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ!

ಮದುವೆ ವಿಳಂಬ ಮತ್ತು ತಾಯಿ ಅನಾರೋಗ್ಯದಿಂದಾಗಿ ಬೇಸತ್ತು ಖಿನ್ನತೆಗೆ ಜಾರಿದ್ದ ವಿಜಯಲಕ್ಷ್ಮಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಹೈದರಾಬಾದ್: ಹುಡುಗರು ಒಪ್ತಿಲ್ಲ.. ಮದುವೆ ಆಗ್ತಿಲ್ಲ ಎಂದು ಖಿನ್ನತೆಗೊಳಗಾಗಿದ್ದ ಮಹಿಳಾ ಟೆಕ್ಕಿಯೊಬ್ಬರು ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೈದರಾಬಾದ್ ನ ಹುಸೇನ್ ಸಾಗರ್ ಕೆರೆಗೆ ಹಾರಿ ವಿಜಯಲಕ್ಷ್ಮಿ (26) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ವಿಳಂಬ ಮತ್ತು ತಾಯಿ ಅನಾರೋಗ್ಯದಿಂದಾಗಿ ಬೇಸತ್ತು ಖಿನ್ನತೆಗೆ ಜಾರಿದ್ದ ವಿಜಯಲಕ್ಷ್ಮಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ನಿಜಾಮಾಬಾದ್ ಬೈನ್ಸಾ ಮೂಲದ ವಿಜಯಲಕ್ಷ್ಮಿ ಮತ್ತು ಅವರ ತಾಯಿ ಸರಸ್ವತಿ ಅವರು ಹೈದರಾಬಾದ್ ನ ಕೂಕಟ್ಪಲ್ಲಿಯ ಮೈತ್ರಿ ನಗರದಲ್ಲಿ ವಾಸಿಸುತ್ತಿದ್ದರು. ವಿಜಯಲಕ್ಷ್ಮಿ ಐಟಿ ಸಂಸ್ಥೆಯಲ್ಲಿ ಸಾಫ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಚಿಕ್ಕವಳಿದ್ದಾಗ ತಂದೆ ತೀರಿಕೊಂಡಿದ್ದರು.

ದಿಢೀರ್ ನಾಪತ್ತೆ

ಜನವರಿ 31ರ ಬೆಳಗ್ಗೆ ವಿಜಯಲಕ್ಷ್ಮಿ ರ್ಯಾಪಿಡೊ ಬೈಕ್ ಕಾಯ್ದಿರಿಸಿ ತನ್ನ ತಾಯಿಗೆ ಎರಡು ದಿನಗಳಲ್ಲಿ ಹಿಂತಿರುಗುತ್ತೇನೆ ಎಂದು ಹೇಳಿ ಹೊರಟಿದ್ದರು. ಆದರೆ ವಿಜಯಲಕ್ಷ್ಮಿ ವಾಪಸ್ ಬರದಿದ್ದಾಗ ತಾಯಿ ಸರಸ್ವತಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು.

ಈ ವೇಳೆ ಶೋಧ ನಡೆಸಿದ್ದ ಪೊಲೀಸರಿಗೆ ಹುಸೇನ್ ಸಾಗರ್ ಕೆರೆಯಲ್ಲಿ ವಿಜಯಲಕ್ಷ್ಮಿ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಶವ ಹೊರತೆಗೆದ ಪೊಲೀಸರು ಗಾಂಧಿ ಆಸ್ಪತ್ರೆಗೆ ಸಾಗಿಸಿ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕುಕಟ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ್ದಾರೆ.

ಮದುವೆ ವಿಳಂಬ, ತಾಯಿಗೆ ಅನಾರೋಗ್ಯ

ಇತ್ತ ಪುತ್ರಿಗೆ ಮದುವೆ ಮಾಡಲು ಕುಟುಂಬಸ್ಥರು ಸಾಕಷ್ಟ ಪ್ರಯತ್ನ ಪಡುತ್ತಿದ್ದರು. ವಿಜಯಲಕ್ಷ್ಮಿಗಾಗಿ ಕುಟುಂಬಸ್ಥರು ಹಲವು ಯುವಕರನ್ನು ಆಯ್ಕೆ ಮಾಡಿದ್ದರು. ಪ್ರತೀಬಾರಿ ಬಂದವವರೂ ವಿಜಯಲಕ್ಷ್ಮಿಯನ್ನು ಒಪ್ಪುತ್ತಿದ್ದರಾದರೂ ಅವರು ಹಾಕುತ್ತಿದ್ದ ಷರತ್ತು ಒಪ್ಪುತ್ತಿರಲಿಲ್ಲ. ಹೀಗಾಗಿ ಪ್ರತೀ ಸಂಬಂಧ ಮದುವೆಯವರೆಗೂ ಹೋಗುತ್ತಿರಲಿಲ್ಲ.

ವಿಜಯಲಕ್ಷ್ಮಿ ಅವರ ತಾಯಿ ಸರಸ್ವತಿ ಒಂಟಿಯಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ವಿಜಯಲಕ್ಷ್ಮಿ ಮದುವೆ ಬಳಿಕ ತನ್ನೊಟ್ಟಿಗೆ ಕರೆದೊಯ್ಯುವುದಾಗಿ ಹೇಳುತ್ತಿದ್ದರು. ಇದನ್ನು ಆಕೆಯನ್ನು ನೋಡಲು ಬರುತ್ತಿದ್ದ ಯಾವುದೇ ಯುವಕ ಅಥವಾ ಆತನ ಪೋಷಕರು ಒಪ್ಪುತ್ತಿರಲಿಲ್ಲ. ಹೀಗಾಗಿ ಸಂಬಂಧ ಅಲ್ಲಿಗೇ ಮುರಿದು ಬೀಳುತ್ತಿತ್ತು.

ಇದೇ ವಿಚಾರವಾಗಿ ವಿಜಯಲಕ್ಷ್ಮಿ ಕುಟುಂಬದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ವಿಜಯಲಕ್ಷ್ಮಿ ಖಿನ್ನತೆಗೆ ಜಾರಿದ್ದರು. ಬಳಿಕ ಜನವರಿ 31ರಂದು ಹುಸೇನ್ ಸಾಗರ್ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ.., ಲೇ ಅರೆಸ್ಸೆಸ್ಸು.. ನಿಂಗೆ ಮಾನ ಮರ್ಯಾದೆ ಇದ್ಯಾ..': ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇಗೌಡ; Video

ಚುನಾವಣೆಗೂ ಮುನ್ನ SIRಗೆ ಆತುರ ಏಕೆ?: ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿದ ಮಮತಾ; ಹೊಸ ದಾಖಲೆ

ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ

'ಟ್ರಂಪ್ ಗೆ ಯಾರ ಬಗ್ಗೆಯೂ ಕಾಳಜಿ ಇಲ್ಲ.. ಅವರಿಗೇನು ಬೇಕೋ ಅದನ್ನೇ ಮಾಡುವುದು': ಉಧ್ಯಮಿ ಮೋಹನ್ ದಾಸ್ ಪೈ

VIDEO: ಅತ್ತಿಬೆಲೆ ಬಳಿ ಭಾರೀ ರಸ್ತೆ ಕುಸಿತ; ಬೆಂಗಳೂರು-ಹೊಸೂರು ವಾಹನ ಸಂಚಾರ ಅಸ್ತವ್ಯಸ್ತ!

SCROLL FOR NEXT