ಸಾಂದರ್ಭಿಕ ಚಿತ್ರ 
ದೇಶ

ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆ!

ಜಪಾನಿ ಪ್ರವಾಸಿಗರು ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಯ ಚಾಲಕ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಶೋಕ್ ನಗರ ಸ್ಟೇಷನ್ ಹೌಸ್ ಆಫೀಸರ್(SHO) ಮೋತಿ ಲಾಲ್ ಶರ್ಮಾ ಅವರು ಹೇಳಿದ್ದಾರೆ.

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಜಪಾನಿ ಪ್ರವಾಸಿಗರು ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಯ ಚಾಲಕ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಶೋಕ್ ನಗರ ಸ್ಟೇಷನ್ ಹೌಸ್ ಆಫೀಸರ್(SHO) ಮೋತಿ ಲಾಲ್ ಶರ್ಮಾ ಅವರು ಹೇಳಿದ್ದಾರೆ.

ಫೆಬ್ರವರಿ 7 ರಂದು ಜಪಾನಿನ ಇಬ್ಬರು ಪುರುಷರು ನವದೆಹಲಿಯಿಂದ ಜೈಪುರಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಟ್ಯಾಕ್ಸಿ ಚಾಲಕ ಫೆಬ್ರವರಿ 7 ರ ರಾತ್ರಿ ಈ ಇಬ್ಬರನ್ನೂ ಅಶೋಕ್ ನಗರ ಪ್ರದೇಶದ ರೆಸ್ಟೋರೆಂಟ್‌ಗೆ ಕರೆದೊಯ್ದರು. ಆದರೆ ಅವರು ವಾಪಸ್ ಬರಲಿಲ್ಲ ಎಂದು SHO ಹೇಳಿದ್ದಾರೆ.

"ಚಾಲಕ ಫೆಬ್ರವರಿ 8 ರ ಬೆಳಗ್ಗೆತನಕ ಅವರಿಗಾಗಿ ಕಾಯುತ್ತಿದ್ದನು. ಆದರೆ ಅವರು ಚಾಲಕನನ್ನು ಸಂಪರ್ಕಿಸಲಿಲ್ಲ ಮತ್ತು ಅವರು ತಾವು ತಂಗಿದ್ದ ಹೋಟೆಲ್ ಅನ್ನು ಸಹ ತಲುಪಿಲ್ಲ. ಹೀಗಾಗಿ ಚಾಲಕ ಸೋಮವಾರ ಪೊಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ದಾಖಲಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು SHO ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ಬಾರಿ ಮುಂಗಾರು ಕೊರತೆ: ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ, ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ

username feature: ವಾಟ್ಸಾಪ್ ಬಳಿಕ ಟೆಲಿಗ್ರಾಮ್, ಸಿಗ್ನಲ್ ಗೆ ಕೇಂದ್ರದ ನೋಟಿಸ್!

ಬಂಡಾಯ ಬಣದಿಂದ ECI ಮುಂದೆ ಪಕ್ಷದ ಮೇಲೆ ಹಕ್ಕು ಮಂಡನೆ: ತೀವ್ರಗೊಂಡ ಟಿಎಂಸಿ ಆಂತರಿಕ ಕಲಹ

ಪಾಕ್ ಸೇನೆ ಕಾಶ್ಮೀರಿಗಳಿಗೆ ಕೈಗೆ ಬಂದೂಕು ನೀಡಿ, ಈಗ ಅವರನ್ನು ಉಗ್ರರು ಎಂದು ಕರೆಯುತ್ತಿದೆ: POK ನಾಯಕ

ಮಂಡ್ಯ: ಶೀಲ ಶಂಕಿಸಿ ಜಗಳ, ಪತ್ನಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದ ಪತಿ!