ಎಂಬಿಬಿಎಸ್ ಪದವಿ ಪಡೆದ ನಟಿ ಶ್ರೀಲೀಲಾ 
ದೇಶ

Dr Sreeleela: ನಟನೆ ಜೊತೆಗೇ MBBS ಪದವಿ ಪಡೆದ ಶ್ರೀಲೀಲಾ; ಪೋಷಕರ ತಬ್ಬಿ ಆನಂದ ಭಾಷ್ಮ! Video

ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ಆಯೋಜಿಸಲಾಗಿದ್ದ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕಾರ ಮಾಡಿದ್ದಾರೆ.

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಕನ್ನಡತಿ ಶ್ರೀಲೀಲಾ ನಟನೆಯ ಜೊತೆಗೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಎಂಬಿಬಿಎಸ್ ಪದವಿ ಪಡೆದು ವೈದ್ಯೆಯಾಗಿದ್ದಾರೆ.

ಶ್ರೀಲೀಲಾ ನಿನ್ನೆಯಷ್ಟೆ ತಮ್ಮ ವೈದ್ಯ ಪದವಿಯನ್ನು ಗಳಿಸಿಕೊಂಡಿದ್ದು, ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ಆಯೋಜಿಸಲಾಗಿದ್ದ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕಾರ ಮಾಡಿದ್ದಾರೆ.

ಶ್ರೀಲೀಲಾ ವೈದ್ಯಕೀಯ ಪದವಿ ಸ್ವೀಕಾರ ಮಾಡುತ್ತಿರುವ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ಪ್ರತಿಜ್ಞೆ ಬೋಧಿಸಿದ ಬಳಿಕ ‘ನೀವುಗಳು ಇದೀಗ ಅಧಿಕೃತವಾಗಿ ವೈದ್ಯರು’ ಎಂಬ ಘೋಷಣೆ ಬಂದ ಕೂಡಲೇ ಖುಷಿಯಾಗಿ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋ ಇದೀಗ ವೈರಲ್ ಆಗಿದೆ.

ಕನ್ನಡದ ʼಕಿಸ್ʼ ಚಿತ್ರದ ಮೂಲಕ 2019ರಲ್ಲಿ ಸಿನಿ ಜರ್ನಿಯನ್ನು ಆರಂಭಿಸಿದ ಶ್ರೀಲೀಲಾ, 2021ರಲ್ಲಿ ʼಪೆಲ್ಲಿ ಸಂಡಾಡ್ʼ ಎನ್ನುವ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡು ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ಬಳಿಕ ಟಾಲಿವುಡ್‌ನ ಧಮಾಕಾ (2022),ಭಗವಂತ ಕೇಸರಿ (2023), ಗುಂಟೂರ್ ಕಾರಮ್ (2024) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

ಮುಂದೆ ಅವರು ʼಉಸ್ತಾದ್ ಭಗತ್ ಸಿಂಗ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಬಾಲಿವುಡ್‌ನಲ್ಲಿ ಅವರು ಅನುರಾಗ್‌ ಬಸು – ಕಾರ್ತಿಕ್‌ ಆರ್ಯನ್‌ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಲಿವುಡ್‌ ನಟ ಧನುಷ್‌ ಅವರ 55ನೇ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್, ಭಾರತದ ಮೇಲೂ ಪರಿಣಾಮ ಸಾಧ್ಯತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!

SSLC ಯಲ್ಲಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಭಾರೀ ಮುಖಭಂಗ: ಅಂಕಗಳನ್ನೇ ನೀಡಲು ಹೈಕೋರ್ಟ್ ಮಹತ್ವದ ಆದೇಶ

ದ್ವಿಪಕ್ಷೀಯ ವಾಣಿಜ್ಯ ಒಪ್ಪಂದ: ಜಂಟಿ ಕಾರ್ಯದರ್ಶಿ ದರ್ಪಣ್ ಜೈನ್ ನೇತೃತ್ವದ ನಿಯೋಗ ಏ.20ಕ್ಕೆ ಅಮೆರಿಕಾಕ್ಕೆ..!

ನಾನೇನು ಕೇರಳದಲ್ಲಿ ಮೋಜು- ಮಸ್ತಿಗೆ ಹೋಗಿರಲಿಲ್ಲ: ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ; ಆಪ್ತರ ತಲೆದಂಡ- ಜಮೀರ್ ಕೆಂಡ!

SCROLL FOR NEXT