ತಂದೆಯ ಕನಸು ಕೊನೆಗೂ ನನಸು: PhD ಪದವಿ ಪಡೆದ ನಟಿ ಮೇಘನಾ ಗಾಂವ್ಕರ್!

ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಮೇಘನಾ ಗಾಂವ್ಕರ್‌ ಅವರು ಪಿಎಚ್ ಡಿ ಪದವಿ ಪಡೆದಿದ್ದಾರೆ.
Meghna Gaonkar
ನಟಿ ಮೇಘನಾ ಗಾಂವ್ಕರ್
Updated on

ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟಿ ಮೇಘನಾ ಗಾಂವ್ಕರ್ ಸ್ನಾತಕೋತ್ತಕ ಪದವಿ ಪಡೆದಿದ್ದು ಆ ಮೂಲಕ ತಮ್ಮ ತಂದೆಯ ಬಹುದಿನಗಳ ಕನಸ ನನಸು ಮಾಡಿದ್ದಾರೆ.

ಹೌದು.. ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಮೇಘನಾ ಗಾಂವ್ಕರ್‌ ಅವರು ಪಿಎಚ್ ಡಿ ಪದವಿ ಪಡೆದಿದ್ದು, ಈ ಬಗ್ಗೆ ಸ್ವತಃ ನಟಿಯೇ ಮಾಹಿತಿ ನೀಡಿದ್ದಾರೆ.

ನಟಿ ಮೇಘನಾ ಅಭಿನಯದಲ್ಲಿ ಸಕ್ರಿಯವಾಗಿದ್ದರೂ ನಟಿ ಮೇಘನಾ ಗಾಂವ್ಕರ್‌ ತಮ್ಮ ಓದನ್ನು ಮುಂದುವರೆಸಿ, ಇಂಗ್ಲಿಷ್‌ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಪಿಎಚ್‌ಡಿ ಮಾಡಿದ್ದರು. ಇದೀಗ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸಿದ್ದಾರೆ.

Meghna Gaonkar
ತಮಿಳು ನಟ ಧನುಷ್ ಜೊತೆಗೆ ಮದುವೆ ವದಂತಿ; ರಹಸ್ಯ ಪೋಸ್ಟ್ ಹಂಚಿಕೊಂಡ ನಟಿ ಮೃಣಾಲ್ ಠಾಕೂರ್!

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ನಟಿ ಮೇಘನಾ ಗಾಂವ್ಕರ್, 'ಈ ದಿನ ನನ್ನ ತಂದೆಯ ಕನಸು ನನಸಾಗಿದೆ. ಅವರು ಯಾವಾಗಲೂ ನಾನು ಪಿಎಚ್‌ಡಿ ಮಾಡಬೇಕೆಂದು ಬಯಸುತ್ತಿದ್ದರು. ನಿನ್ನೆ, ನಾನು ಅಧಿಕೃತವಾಗಿ ನನ್ನ ಡಾಕ್ಟರೇಟ್ ಪಡೆದಿದ್ದೇನೆ.

ನನ್ನ ಪೋಷಕರು ಅದನ್ನು ವೀಕ್ಷಿಸಲು ಬಂದಿದ್ದರು. ಇದು ತುಂಬಾ ವಿಶೇಷ ಕ್ಷಣ. ನಿಮ್ಮ ಪ್ರೋತ್ಸಾಹದಾಯಕ ಶುಭಾಶಯಗಳು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಹಲವು ವರ್ಷಗಳ ಈ ಪ್ರಯಾಣವು ಕೊನೆಗೂ ಪೂರ್ಣಗೊಂಡಿದೆ' ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com