ಅಬ್ದುಲ್ ಸತ್ತಾರ್ - ದೇವಾಲಯ 'ಶುದ್ಧೀಕರಿಸಿದ' ಬಿಜೆಪಿ! 
ದೇಶ

ಮಹಾಶಿವರಾತ್ರಿ: ಶಿವಸೇನಾ ಮುಸ್ಲಿಂ ಶಾಸಕರ ಭೇಟಿ ನಂತರ ಗೋಮೂತ್ರದಿಂದ ಶಿವ ದೇವಾಲಯ 'ಶುದ್ಧೀಕರಿಸಿದ' ಬಿಜೆಪಿ!

ಮಹಾಶಿವರಾತ್ರಿಯ ಸಂದರ್ಭದಲ್ಲಿ ಸತ್ತಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಸಿಲ್ಲೋದ್‌ನಲ್ಲಿರುವ ರಹಿಮಾಬಾದ್‌ನಲ್ಲಿರುವ ಶಿವ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಿಲ್ಲೋದ್‌ನಲ್ಲಿರುವ ಶಿವ ದೇವಾಲಯಕ್ಕೆ ಶಿವಸೇನೆಯ ಮುಸ್ಲಿಂ ಶಾಸಕ ಮತ್ತು ಮಾಜಿ ಸಚಿವ ಅಬ್ದುಲ್ ಸತ್ತಾರ್ ಅವರು ಭೇಟಿ ದರ್ಶನ ಪಡೆದಿದ್ದು, ನಂತರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಗೋಮೂತ್ರವನ್ನು ಬಳಸಿ ದೇವಾಸ್ಥಾನವನ್ನು 'ಶುದ್ಧೀಕರಸಿದ್ದಾರೆ'.

ಮಹಾಶಿವರಾತ್ರಿಯ ಸಂದರ್ಭದಲ್ಲಿ ಸತ್ತಾರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಸಿಲ್ಲೋದ್‌ನಲ್ಲಿರುವ ರಹಿಮಾಬಾದ್‌ನಲ್ಲಿರುವ ಶಿವ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ಮತ್ತು ಇತರ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ.

ನಂತರ, ಬಿಜೆಪಿ ಕಾರ್ಯಕರ್ತರು ದೇವಾಲಯವನ್ನು 'ಗೋಮೂತ್ರ'ದಿಂದ 'ಶುದ್ಧೀಕರಣ' ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಸಾರವಾಯಿತು.

"ಸತ್ತಾರ್ ಹಸುವಿನ ಮಾಂಸ ತಿನ್ನುತ್ತಾರೆ. ಹೀಗಾಗಿ ಅವರ ಭೇಟಿಯಿಂದ ದೇವಾಲಯದ ಪಾವಿತ್ರ್ಯಕ್ಕೆ ಹಾನಿಯಾಗಿದೆ. ಅದಕ್ಕಾಗಿಯೇ ನಾವು ಅದನ್ನು ಶುದ್ಧೀಕರಿಸಲು ಗೋಮೂತ್ರ ಸಿಂಪಡಿಸಿದ್ದೇವೆ. ಅವರು ಮುಸ್ಲಿಮರು ಮತ್ತು ಹಿಂದೂಗಳಿಬ್ಬರನ್ನೂ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ಹಜ್‌ಗೆ ಹೋಗಿದ್ದರು ಮತ್ತು ಈಗ ದೇವಾಲಯಕ್ಕೆ ಹೋಗುತ್ತಿದ್ದಾರೆ" ಎಂದು ಸಿಲ್ಲೋದ್ ಘಟಕದ ಬಿಜೆಪಿ ಮುಖ್ಯಸ್ಥ ಮನೋಜ್ ಮೊರೆಲ್ಲು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

ಜನಸಂಖ್ಯಾ ಬದಲಾವಣೆ ಪರಿಶೀಲಿಸಲು ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಗೆ ಕನ್ನ! ಚಿನ್ನದ ಗಟ್ಟಿ, ಆಭರಣಗಳನ್ನು ಕದ್ದ 9 ಕಾರ್ಮಿಕರ ಬಂಧನ

SCROLL FOR NEXT