ಪ್ರಧಾನಿ ಮೋದಿ 
ದೇಶ

AI ಬಳಕೆಯಲ್ಲಿ ಮುಂಚೂಣಿಯಲ್ಲಿ ಭಾರತ: ಜಗತ್ತಿಗೆ ಪರಿಹಾರ ರೂಪಿಸುತ್ತೇವೆ- ಪ್ರಧಾನಿ ಮೋದಿ

ನವದೆಹಲಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋವನ್ನು ಪ್ರಧಾನಿ ಮೋದಿ ಸೋಮವಾರ ಸಂಜೆ ಉದ್ಘಾಟಿಸಿದರು. ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಪ್ರಧಾನಿ, ಎಕ್ಸ್‌ಪೋದಲ್ಲಿ ಭಾಗವಹಿಸಿದ್ದ ಕಂಪನಿಗಳೊಂದಿಗೆ ಮಾತನಾಡಿದರು.

ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಪ್ರದಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಎಐ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವುದು ದೇಶದ ಮಹತ್ವಾಕಾಂಕ್ಷೆ ಹಾಗೂ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋವನ್ನು ಪ್ರಧಾನಿ ಮೋದಿ ಸೋಮವಾರ ಸಂಜೆ ಉದ್ಘಾಟಿಸಿದರು. ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಪ್ರಧಾನಿ, ಎಕ್ಸ್‌ಪೋದಲ್ಲಿ ಭಾಗವಹಿಸಿದ್ದ ಕಂಪನಿಗಳೊಂದಿಗೆ ಮಾತನಾಡಿದರು.

ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ನಾವೀನ್ಯಕಾರರು, ಸಂಶೋಧಕರು ಮತ್ತು ಟೆಕ್ ಉತ್ಸಾಹಿಗಳ ನಡುವೆ ಇಲ್ಲಿ ಇರುವುದು AI, ಭಾರತೀಯ ಪ್ರತಿಭೆ ಮತ್ತು ನಾವೀನ್ಯತೆಯ ಅಸಾಧಾರಣ ಸಾಮರ್ಥ್ಯದ ಒಂದು ನೋಟವನ್ನು ನೀಡುತ್ತದೆ. ಒಗ್ಗಟ್ಟಾಗಿ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ಪರಿಹಾರಗಳನ್ನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.

ಎಐ ಕುರಿತ ಚರ್ಚೆಗಾಗಿ ಜಗತ್ತನ್ನು ಒಟ್ಟುಗೂಡಿಸಲಾಗಿದೆ. ಭಾರತವು ಶೃಂಗದ ಆತಿಥ್ಯ ವಹಿಸಿದೆ. ಜಾಗತಿಕ ನಾಯಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು, ಸಂಶೋಧಕರು ಮತ್ತು ತಂತ್ರಜ್ಞಾನ ಹಿಂಬಾಲಕರಿಗೆ ಸ್ವಾಗತ ಎಂದು ಮೋದಿ ಹೇಳಿದ್ದಾರೆ.

ಸರ್ವಜನ ಹಿತಾಯ: ಸರ್ವಜನ ಸುಖಾಯ: ಎಂದು ಧ್ಯೇಯವಾಕ್ಯದಡಿಯಲ್ಲಿ ಶೃಂಗಸಭೆ ಆಯೋಜಿಸಲಾಗಿದೆ. ಇದು ಮಾನವ ಕೇಂದ್ರೀತ ಪ್ರಗತಿಗಾಗಿ ಎಐ ಬಳಕೆ ಮಾಡುವ ನಮೆಲ್ಲರ ಬದ್ಧತೆಯ ಸಂಕೇತ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವದೆಹಲಿ: 'ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋ' ಗೆ ಪ್ರಧಾನಿ ಮೋದಿ ಚಾಲನೆ

T20 World Cup 2026: ಭಾರತ- ಪಾಕ್ ಹ್ಯಾಂಡ್ ಶೇಕ್ ವಿವಾದದ ನಡುವೆ ರೋಹಿತ್- ವಾಸೀಂ ಅಕ್ರಂ ಅಪ್ಪುಗೆ! Video

ಇಶಾ ಫೌಂಡೇಷನ್​​ನಲ್ಲಿ ಮಹಾ ಶಿವರಾತ್ರಿ: ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ತಮನ್ನಾ ಭಾಟಿಯಾ, ಸಾರಾ ಅರ್ಜುನ್, ಶ್ರೀನಿಧಿ ಶೆಟ್ಟಿ! Video

ಜಮ್ಕೊ: ಬೆಂಗಳೂರಿನಲ್ಲಿ ಉತ್ಪನ್ನ ಎಂಜಿನಿಯರಿಂಗ್‌ ಕೇಂದ್ರ

CM ಕುರ್ಚಿ ಕಾಳಗದ ನಡುವೆ ಸಿದ್ದರಾಮಯ್ಯ ಬಜೆಟ್​​ಗೆ ಮುಹೂರ್ತ ಫಿಕ್ಸ್

SCROLL FOR NEXT