ಗ್ಯಾಲ್ಗೋಟಿಯಾಸ್ ವಿವಿ ಹೇಳಿಕೆ 
ದೇಶ

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ 'ರೋಬೋಡಾಗ್' ವಿವಾದ: ಗ್ಯಾಲ್ಗೋಟಿಯಾಸ್ ವಿವಿ ಕ್ಷಮೆಯಾಚನೆ!

ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಪ್ರಾಧ್ಯಾಪಕಿ ನೇಹಾ ಸಿಂಗ್ ಮಂಗಳವಾರ ಡಿಡಿ ನ್ಯೂಸ್‌ಗೆ ರೋಬೋಡಾಗ್ ತೋರಿಸಿ, ಇದನ್ನು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ" ಎಂದು ಹೇಳಿದ ನಂತರ ವಿವಾದ ಭುಗಿಲೆದ್ದಿತ್ತು.

ನವದೆಹಲಿ: ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಚೀನಾ ತಯಾರಿಸಿದ ರೋಬೋಡಾಗ್ ಪ್ರದರ್ಶಿಸಿ, ತಾನೇ ಅನ್ವೇಷಿಸಿದ್ದು ಎಂದು ಹೇಳಿಕೊಂಡು ವಿವಾದ ಹುಟ್ಟುಹಾಕಿದ್ದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಬುಧವಾರ ಕ್ಷಮೆಯಾಚಿಸಿದೆ.ಪೆವಿಲಿಯನ್ ನಿರ್ವಹಿಸುವ ಅದರ ಪ್ರತಿನಿಧಿಯೊಬ್ಬರು "ಅಸಮರ್ಪಕ ಮಾಹಿತಿ" ನೀಡಿರುವುದಾಗಿ ಹೇಳಿದೆ.

ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಪ್ರಾಧ್ಯಾಪಕಿ ನೇಹಾ ಸಿಂಗ್ ಮಂಗಳವಾರ ಡಿಡಿ ನ್ಯೂಸ್‌ಗೆ ರೋಬೋಡಾಗ್ ತೋರಿಸಿ, ಇದನ್ನು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ" ಎಂದು ಹೇಳಿದ ನಂತರ ವಿವಾದ ಭುಗಿಲೆದ್ದಿತ್ತು.

ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು, ಇದು ಚೀನಾದ ಯುನಿಟ್ರೀ ರೊಬೊಟಿಕ್ಸ್ ತಯಾರಿಸಿದ ಯುನಿಟ್ರೀ Go2 ಆಗಿದ್ದು, ವಿಶ್ವಾದ್ಯಂತ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ತನ್ನ ಎಕ್ಸ್‌ಪೋ ಸ್ಟಾಲ್‌ನಿಂದ ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿತ್ತು.

ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಗೊಂದಲ ಸೃಷ್ಟಿಸಿದ್ದಕ್ಕೆ ಕ್ಷಮೆಯಾಚಿಸಲು ಬಯಸುತ್ತೇವೆ. ಪೆವಿಲಿಯನ್ ನಿರ್ವಹಿಸುತ್ತಿದ್ದ ನಮ್ಮ ಪ್ರತಿನಿಧಿಯೊಬ್ಬರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಹೇಳಿದ್ದಾರೆ.

ಆಕೆ ರೋಬೋಡಾಗ್ ನ ತಾಂತ್ರಿಕ ಮೂಲದ ಬಗ್ಗೆ ತಿಳಿದಿರಲಿಲ್ಲ ಮತ್ತು ಕ್ಯಾಮರಾದಲ್ಲಿರಲು ಕಾಣಿಸಿಕೊಳ್ಳುವ ಉತ್ಸಾಹದಿಂದ ಸುದ್ದಿಗಾರರೊಂದಿಗೆ ಮಾತನಾಡಲು ಅಧಿಕಾರವಿಲ್ಲದಿದ್ದರೂ ವಾಸ್ತವಿಕವಾಗಿ ತಪ್ಪಾದ ಮಾಹಿತಿಯನ್ನು ನೀಡಿದ್ದಾರೆ. ನಾವೀನ್ಯತೆಯನ್ನು ತಪ್ಪಾಗಿ ಪ್ರತಿನಿಧಿಸುವ ಯಾವುದೇ ಸಾಂಸ್ಥಿಕ ಉದ್ದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಐಟಿ ಕಾರ್ಯದರ್ಶಿ ಎಸ್ ಕೃಷ್ಣನ್ ಅವರು, ಯಾವುದೇ ಪ್ರದರ್ಶಕರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸಲು ಸರ್ಕಾರ ಬಯಸುವುದಿಲ್ಲ. ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಸ್ಟಾಲ್ ಅನ್ನು ಖಾಲಿ ಮಾಡಿಸುವಂತೆ ಆಯೋಜಕರು ಕೇಳಿಕೊಂಡ ನಂತರ, "ಇಂತಹ ಪ್ರದರ್ಶನಗಳು ಮುಂದುವರಿಯುವುದನ್ನು ನಾವು ಬಯಸುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ