Unitree Go2 – AI ಸಾಮರ್ಥ್ಯ ಹೊಂದಿದ ರೋಬೋಟಿಕ್ ನಾಯಿ 
ದೇಶ

India AI Impact Summit: ಚೀನಾದ ರೋಬೋಡಾಗ್ ವಿವಾದ; ಸ್ಟಾಲ್ ತೆರವುಗೊಳಿಸಲು ಗಾಲ್ಗೋಟಿಯಾಸ್ ವಿವಿಗೆ ಸೂಚನೆ; Video

“ಒರಿಯನ್” ಎಂಬ ಹೆಸರಿನಲ್ಲಿ ಪ್ರದರ್ಶಿಸಲಾದ ರೋಬೋಟ್ ಡಾಗ್ ವಿಶ್ವವಿದ್ಯಾಲಯದ ಸ್ವಂತ ಆವಿಷ್ಕಾರವಲ್ಲ, ಚೀನಾದ Unitree ಕಂಪನಿಯ Go2 ಮಾದರಿಯಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

AI ಸಮಿಟ್ ವಿವಾದ: ರೋಬೋಟ್ ಡಾಗ್ ಪ್ರದರ್ಶನದ ಹಿನ್ನೆಲೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸ್ಟಾಲ್ ತೆರವು

AI ಸಮಿಟ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ರೋಬೋಟ್ ಡಾಗ್ ಮೂಲ ಮತ್ತು ಮಾಲೀಕತ್ವ ಕುರಿತು ವಿವಾದ ಉಂಟಾದ ಹಿನ್ನೆಲೆಯಲ್ಲಿ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ತನ್ನ ಸ್ಟಾಲ್ ನ್ನು ತಕ್ಷಣ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

“ಒರಿಯನ್” ಎಂಬ ಹೆಸರಿನಲ್ಲಿ ಪ್ರದರ್ಶಿಸಲಾದ ರೋಬೋಟ್ ಡಾಗ್ ವಿಶ್ವವಿದ್ಯಾಲಯದ ಸ್ವಂತ ಆವಿಷ್ಕಾರವಲ್ಲ, ಚೀನಾದ Unitree ಕಂಪನಿಯ Go2 ಮಾದರಿಯಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ವಿವಾದದ ನಂತರ ಇದಕ್ಕೆ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದ್ದು, ಪ್ರದರ್ಶಿಸಲಾದ ರೋಬೋಟ್ ಡಾಗ್ ನ್ನು ಸಂಸ್ಥೆ ಅಭಿವೃದ್ಧಿಪಡಿಸಿದ್ದಾಗಿ ಯಾವುದೇ ಹೇಳಿಕೆ ನೀಡಿಲ್ಲ. ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕಾಗಿ ಚೀನಾದ Unitree Robotics ಕಂಪನಿಯಿಂದ ಅದನ್ನು ಖರೀದಿಸಲಾಗಿದೆ ಎಂದು ಹೇಳಿದೆ. Greater Noida ಮೂಲದ ಈ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಪರೀಕ್ಷಿಸಿ ಅದರ ಮಿತಿಗಳನ್ನು ಅರಿತುಕೊಳ್ಳಲು ಇದನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.

ಆದರೆ, ಎಐ ಶೃಂಗಸಭೆಯಲ್ಲಿ ನಡೆದ ಮಾಧ್ಯಮ ಸಂವಾದದ ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು “ಒರಿಯನ್” ನ್ನು ಸಂಸ್ಥೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಯಿತು. ವಿಡಿಯೋದಲ್ಲಿ ಈ ರೋಬೋಟ್ ನಿಗಾವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಗಳಿಗೆ ಬಳಸಬಹುದು ಎಂದು ವಿವರಿಸಲಾಗಿತ್ತು. ಬಳಿಕ ಇದು ಸುಮಾರು 2–3 ಲಕ್ಷ ರೂಪಾಯಿ ಬೆಲೆಯ Unitree Go2 ಮಾದರಿಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಹಲವರು ಹೇಳಿದ್ದರು.

ವಿಶ್ವವಿದ್ಯಾಲಯದ ಸ್ಪಷ್ಟನೆಗೂ ಎಕ್ಸ್ ಖಾತೆಯಲ್ಲಿ ಹಲವರು, ಸಂಸ್ಥೆಯು ಈ ಸಾಧನವನ್ನು ತನ್ನದೇ ಆವಿಷ್ಕಾರ ಎಂದು ಪ್ರದರ್ಶಿಸಿಲ್ಲ ಎಂಬ ಹೇಳಿಕೆ ಗೊಂದಲಕಾರಿ ಮತ್ತು ತಪ್ಪು ದಾರಿಗೆಳೆಯುವ ಪ್ರಯತ್ನ ಎಂದು ಹೇಳಿದೆ.

ವಿಶ್ವವಿದ್ಯಾಲಯ ತನ್ನ ಉದ್ದೇಶವು ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುವುದೇ ಆಗಿದ್ದು, ಅಮೆರಿಕಾ, ಚೀನಾ ಮತ್ತು ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಿಂದ ಸಾಧನಗಳನ್ನು ತರಲಾಗುತ್ತಿದೆ ಎಂದು ತಿಳಿಸಿದೆ. ನವೀನತೆಗೆ ಗಡಿಗಳಿಲ್ಲ; ಕಲಿಕೆಗೆ ಕೂಡ ಗಡಿಗಳಿರಬಾರದು ಎಂದು ಹೇಳಿ, ಭವಿಷ್ಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ಪ್ರೇರೇಪಿಸುವುದೇ ಉದ್ದೇಶ ಎಂದು ಸ್ಪಷ್ಟಪಡಿಸಿದೆ.

ಇದರ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ X ನಲ್ಲಿ ಪ್ರತಿಕ್ರಿಯಿಸಿ, AI ಸಮಿಟ್ ನ್ನು “ಅವ್ಯವಸ್ಥಿತ ಪಿಆರ್ ಪ್ರದರ್ಶನ” ಎಂದು ಟೀಕಿಸಿದ್ದಾರೆ. ಚೀನಾದ ಉತ್ಪನ್ನಗಳನ್ನು ಪ್ರದರ್ಶಿಸಿರುವುದರಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಾಸ್ಯಕ್ಕೆ ಗುರಿಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಚೀನಾದ ರೋಬೋಟ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

Unitree Robotics ಕಂಪನಿ ಪ್ರಾಣಿಗಳ ಚಲನವಲನವನ್ನು ಅನುಕರಿಸುವ ನಾಲ್ಕುಕಾಲಿನ ರೋಬೋಟ್‌ಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದು, ಪರಿಶೀಲನೆ, ಸಂಶೋಧನೆ ಮತ್ತು ನಿಗಾವಹಣೆ ಸೇರಿದಂತೆ ಹಲವು ಕಾರ್ಯಗಳಿಗೆ ಅವುಗಳನ್ನು ಬಳಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್!

ಯೋಗೇಶ್ ಗೌಡ ಕೊಲೆ ಕೇಸ್ ಶಿಕ್ಷೆ ಪ್ರಕಟಕ್ಕೂ ಮೊದಲೇ ಜಡ್ಜ್ ಸಂತೋಷ್ ಗಜಾನನ ಭಟ್ ವರ್ಗಾವಣೆ!

North to South, ಯಾವುದೇ ತಾರತಮ್ಯ, ಅನ್ಯಾಯವಾಗಲ್ಲ: ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಬಗ್ಗೆ ಪ್ರಧಾನಿ ಮೋದಿ ಗ್ಯಾರಂಟಿ!

ಲೋಕಸಭಾ ಕ್ಷೇತ್ರ ಮರು ವಿಂಗಡಣೆ: 'ದಕ್ಷಿಣ ರಾಜ್ಯಗಳಿಗೆ ಇದಕ್ಕಿಂತ ಉತ್ತಮ ಡೀಲ್ ಸಿಗಲು ಸಾಧ್ಯವಿಲ್ಲ'; ತೇಜಸ್ವಿ ಸೂರ್ಯ

ದಾವಣಗೆರೆ ದಂಗಲ್: ಶಾಮನೂರು ವಿರುದ್ಧ ಕ್ರಮ ಯಾಕಿಲ್ಲ? ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ಇಡೀ ಅಹಿಂದ ವಿರೋಧ ಕಟ್ಟಿಕೊಳ್ಳುತ್ತಿದೆ!

SCROLL FOR NEXT