ಹಸುಗೂಸಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಮಹಿಳೆ 
ದೇಶ

'ಹೆಣ್ಣೊಂದು ಕಲಿತರೆ..': 10 ದಿನದ ಮಗುವಿನೊಂದಿಗೆ 12ನೇ ತರಗತಿ ಪರೀಕ್ಷೆಗೆ ಹಾಜರಾದ ಮಹಿಳೆ; 'ಮಾತೃಸ್ನೇಹ್ ಕಕ್ಷಾ' ವ್ಯವಸ್ಥೆ!

ನಾಂದೇಡ್ ನಗರದಲ್ಲಿ 12ನೇ ತರಗತಿಯ ಮಹಾರಾಷ್ಟ್ರ ಮಂಡಳಿ ಪರೀಕ್ಷೆಗೆ ಹಾಜರಾಗುತ್ತಿದ್ದ ಮಹಿಳೆಯೊಬ್ಬರು ತನ್ನ 10 ದಿನಗಳ ಹಸುಗೂಸನ್ನು ಹೊತ್ತು ಬಂದು, ಪೊಲಿಟಕಲ್ ಸೈನ್ಸ್ ವಿಷಯದ ಪರೀಕ್ಷೆಗೆ ಹಾಜರಾಗಿದ್ದಾರೆ.

ನಾಂದೇಡ್: ಮನೆಯೇ ಮೊದಲ ಪಾಠಶಾಲೆ.. ತಾಯಿಯೇ ಮೊದಲ ಗುರು ಎಂಬ ಸಾಲುಗಳಿಗೆ ನಾಂದೇಡ್ ಮಹಿಳೆ ಅರ್ಥ ನೀಡಿದ್ದು, 10 ದಿನಗಳ ಮಗುವಿನ ಸಹಿತ 12ನೇ ತರಗತಿ ಪರೀಕ್ಷೆಗೆ ಹಾಜರಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12ನೇ ತರಗತಿಯ ಮಹಾರಾಷ್ಟ್ರ ಮಂಡಳಿ ಪರೀಕ್ಷೆಗೆ ಹಾಜರಾಗುತ್ತಿದ್ದ ಮಹಿಳೆಯೊಬ್ಬರು ತನ್ನ 10 ದಿನಗಳ ಹಸುಗೂಸನ್ನು ಹೊತ್ತು ಬಂದು, ಪೊಲಿಟಕಲ್ ಸೈನ್ಸ್ ವಿಷಯದ ಪರೀಕ್ಷೆಗೆ ಹಾಜರಾಗಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ತಾಯಂದಿರ ಸ್ನೇಹಿ ಸೌಲಭ್ಯವನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀತಲ್ ಚಂದ್ರಕಾಂತ್ ಚಿಟ್ಟೆ (21) ತನ್ನ 10 ದಿನಗಳ ನವಜಾತ ಶಿಶುವಿನೊಂದಿಗೆ ಬುಧವಾರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಇದಕ್ಕೂ ಮೊದಲು, ಹೆರಿಗೆಯಾದ ಕೇವಲ ಎರಡು ದಿನಗಳ ನಂತರ, ಫೆಬ್ರವರಿ 10 ರಂದು ತನ್ನ ಸಹೋದರಿಯೊಂದಿಗೆ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದರು.

ತತ್ ಕ್ಷಣದ ಕ್ರಮ

ಇನ್ನು ಶೀತಲ್ ಅವರ ಶಿಕ್ಷಣದ ಬಗೆಗಿನ ದೃಢಸಂಕಲ್ಪವನ್ನು ಮೆಚ್ಚಿದ ಪೀಪಲ್ಸ್ ಕಾಲೇಜು ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಮೀಸಲಾದ 'ಮಾತೃಸ್ನೇಹ್ ಕಕ್ಷಾ' (ತಾಯಂದಿರ ಸ್ನೇಹಿ ಕೊಠಡಿ) ಅನ್ನು ಸಿದ್ಧಪಡಿಸಿದರು. ಪರೀಕ್ಷಾ ಕೊಠಡಿಯಲ್ಲಿ ಮಗುವಿಗೆ ತೊಟ್ಟಿಲು ವ್ಯವಸ್ಥೆ ಮಾಡಿ, ಮಗು ವಿಶ್ರಾಂತಿ ಪಡೆಯುತ್ತಿರುವಾಗ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು.

ಎರಡು ವರ್ಷಗಳ ಹಿಂದೆ ವಿವಾಹವಾದ ಇಲ್ಲಿನ ಶ್ರೀ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿ ಶೀತಲ್ ಚಿಟ್ಟೆ, ತನ್ನ ಪತಿ ಹಗಲಿನಲ್ಲಿ ಕೆಲಸಕ್ಕೆ ಹೋಗುವುದರಿಂದ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ. 12ನೇ ತರಗತಿ ಪರೀಕ್ಷೆಯು ತನ್ನ ಭವಿಷ್ಯಕ್ಕೆ ನಿರ್ಣಾಯಕವಾಗಿರುವುದರಿಂದ, ಅದನ್ನು ತಪ್ಪಿಸಿಕೊಳ್ಳದಿರಲು ನಾನು ನಿರ್ಧರಿಸಿದೆ. ಆಕೆಯ ಶಿಕ್ಷಣವನ್ನು ಮುಂದುವರಿಸುವ ನಿರ್ಧಾರವನ್ನು ಆಕೆಯ ಕುಟುಂಬವು ಬೆಂಬಲಿಸಿದೆ ಎಂದು ಶೀತಲ್ ಹೇಳಿದರು.

ಶಿಕ್ಷಣಾಧಿಕಾರಿ ಶ್ಲಾಘನೆ

ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿನಿ ಶೀತಲ್ ಗೆ ಪ್ರತ್ಯೇಕ ಸೌಲಭ್ಯವನ್ನು ರೂಪಿಸುವ ಕಾಲೇಜಿನ ಕ್ರಮವನ್ನು ನಾಂದೇಡ್ ಶಿಕ್ಷಣ ಅಧಿಕಾರಿ ಮಾಧವ್ ಸಲ್ಗರ್ ಶ್ಲಾಘಿಸಿದರು.

"ಇನ್ನು ಮುಂದೆ, ಆಡಳಿತದ ಪರವಾಗಿ, ಅಂತಹ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ನಾವು ಪರೀಕ್ಷಾ ಕೇಂದ್ರಗಳಲ್ಲಿ ವಿಶೇಷ ವ್ಯವಸ್ಥೆ ಮಾಡುತ್ತೇವೆ" ಎಂದು ಅವರು ತಿಳಿಸಿದರು.

ಅಂತೆಯೇ ಮಹಾರಾಷ್ಟ್ರ ಮಂಡಳಿಯ ಲಾತೂರ್ ವಿಭಾಗೀಯ ಅಧ್ಯಕ್ಷ ಸುಧಾಕರ್ ತೆಲಾಂಗ್ ಅವರು ರಾಜ್ಯದಲ್ಲಿ ಇದು ಮೊದಲ ಇಂತಹ ಉಪಕ್ರಮ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಮಂಡಳಿಯ ಹೈಯರ್ ಸೆಕೆಂಡರಿ ಸರ್ಟಿಫಿಕೇಟ್ (ಎಚ್‌ಎಸ್‌ಸಿ) ಪರೀಕ್ಷೆಗಳು ಫೆಬ್ರವರಿ 10 ರಂದು ಪ್ರಾರಂಭವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ