ರಾಜ್ ಸಿಂಗ್ , ರಾಹುಲ್ ಗಾಂಧಿ 
ದೇಶ

'ರಾಹುಲ್ ಗಾಂಧಿಯನ್ನು ಶೂಟ್ ಮಾಡುತ್ತೇನೆ': ಬೆದರಿಕೆ ಹಾಕಿದ ರಾಜಸ್ಥಾನ ಮೂಲದ ವ್ಯಕ್ತಿ ಬಂಧನ; Video

ಪೊಲೀಸರ ಪ್ರಕಾರ, ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ತನ್ನನ್ನು ರಾಜ್ ಸಿಂಗ್ ಎಂದು ಪರಿಚಯಿಸಿಕೊಂಡು, ಕರಣಿ ಸೇನೆಯ ಕೋಟಾ ಘಟಕದ ವಕ್ತಾರ ಎಂದು ಹೇಳಿಕೊಂಡಿದ್ದಾನೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ ಸಂಸದರನ್ನು ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಕೋಟಾದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ತನ್ನನ್ನು ರಾಜ್ ಸಿಂಗ್ ಎಂದು ಪರಿಚಯಿಸಿಕೊಂಡು, ಕರಣಿ ಸೇನೆಯ ಕೋಟಾ ಘಟಕದ ವಕ್ತಾರ ಎಂದು ಹೇಳಿಕೊಂಡಿದ್ದಾನೆ. ಲೋಕಸಭೆಯಲ್ಲಿ ಸ್ಪೀಕರ್ ಹಾಗೂ ಕೋಟಾ ಸಂಸದ ಓಂ ಬಿರ್ಲಾ ಅವರ ವಿರುದ್ಧ ಕಾಂಗ್ರೆಸ್ ಸಂಸದರು ತೋರಿದ ವರ್ತನೆ ಆಕ್ರೋಶ ತಂದಿದೆ ಎಂದಿದ್ದಾನೆ.

ವಿಡಿಯೋದಲ್ಲಿ ಸಿಂಗ್, ಇತ್ತೀಚೆಗೆ ಮುಗಿದ ಸಂಸತ್ ಅಧಿವೇಶನದ ಮೊದಲ ಭಾಗದಲ್ಲಿ 25 ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ “ಅಪಮಾನಕಾರಿ ಮಾತುಗಳನ್ನು ಹೇಳಿದ್ದಾರೆ” ಎಂದು ಕರಣಿ ಸೇನೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ಹೇಳುತ್ತಾನೆ.

ಇದನ್ನು ರಾಹುಲ್ ಗಾಂಧಿಯ ಆದೇಶದ ಮೇರೆಗೆ ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದರು ಓಂ ಬಿರ್ಲಾ ಅವರಿಗೆ ಕ್ಷಮೆ ಕೇಳದಿದ್ದರೆ, ಅವರನ್ನು ಅವರ ಮನೆಗಳ ಮುಂದೆ ಗುಂಡಿಕ್ಕಲಾಗುವುದು ಎಂದು ವಿಡಿಯೋದಲ್ಲಿ ಬೆದರಿಕೆ ಹಾಕಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಕೋಟಾ ಪೊಲೀಸರು ಆರೋಪಿಯನ್ನು ಬಂಧಿಸಿದರು. ಆರೋಪಿಯನ್ನು ಬೋರ್ಕೆಡಾ ಪೊಲೀಸ್ ಠಾಣೆಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕೋಟಾದ ಕಾಂಗ್ರೆಸ್ ನಾಯಕರಿಂದ ನಾವು ದೂರು ಪಡೆದಿದ್ದೇವೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ಕಲಂ 170 ಅಡಿಯಲ್ಲಿ ಆರೋಪಿಯನ್ನು ಮುಂದಿನ ತನಿಖೆಗಾಗಿ ಬಂಧಿಸಲಾಗಿದೆ. ಕೋಟಾದ ಕರಣಿ ಸೇನೆಯ ಸದಸ್ಯರು ಈ ವ್ಯಕ್ತಿ ಅವರ ವಕ್ತಾರನಲ್ಲ ಎಂದು ಹೇಳಿದ್ದು, ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ ಎಂದು ಗೌತಮ್ ಹೇಳಿದರು.

ಬಿಜೆಪಿ ಮತ್ತು ಕರಣಿ ಸೇನೆ ಎರಡೂ ಈ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿವೆ. ಬಿಜೆಪಿ ಕೋಟಾ ನಗರ ಅಧ್ಯಕ್ಷ ರಾಕೇಶ್ ಜೈನ್ ಅವರು, ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾಣಾ ಅವರು ವಿಡಿಯೋ ಬಿಡುಗಡೆ ಮಾಡಿ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ಸಂಸದರಿಗೆ ಬೆದರಿಕೆ ಹಾಕಿದ ವ್ಯಕ್ತಿಗೆ ಕರಣಿ ಸೇನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕರಣಿ ಸೇನೆಯ ಸದಸ್ಯರಾಗಿ, ನಾವು ಸಾಮಾನ್ಯವಾಗಿ ಪ್ರತಿಭಟನೆ ನಡೆಸುತ್ತೇವೆ ಅಥವಾ ಕಪ್ಪು ಧ್ವಜ ತೋರಿಸುತ್ತೇವೆ. ಆದರೆ ಯಾರನ್ನಾದರೂ ಕೊಲ್ಲುವ ಬೆದರಿಕೆ ಹಾಕುವುದು ಅಥವಾ ದಾಳಿ ಮಾಡುವುದು ನಮ್ಮ ಸಂಘಟನೆಯ ವಿಧಾನವಲ್ಲ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರೂ ದೇಶದ ಗೌರವಾನ್ವಿತ ವ್ಯಕ್ತಿಗಳು. ನಾವು ಅವರಿಗೆ ಗೌರವ ಕೊಡುತ್ತೇವೆ, ಈ ರೀತಿಯ ವಿಡಿಯೋವನ್ನು ಖಂಡಿಸುತ್ತೇವೆ ಎಂದು ಮಕ್ರಾಣಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ