ಕುಪ್ವಾರಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಪಾಕಿಸ್ತಾನ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕುಪ್ವಾರಾದ(ಉತ್ತರ ಕಾಶ್ಮೀರದ) ನೌಗಮ್ ಸೆಕ್ಟರ್‌ನಲ್ಲಿರುವ ಟಿಎಂಜಿ(ಟೂಟ್ ಮಾರ್ ಗಲಿ)ನಲ್ಲಿ ಇಂದು ಮಧ್ಯಾಹ್ನ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಪಿಒಕೆ ಪೋಸ್ಟ್‌ಗಳಿಂದ ಭಾರತೀಯ ಪೋಸ್ಟ್‌ಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಪಾಕ್ ಸೇನೆ ಗುಂಡು ಹಾರಿಸಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಗುಂಡಿನ ದಾಳಿ ನಿಂತಿತು. ಯಾವುದೇ ಜೀವ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.