ದೇಶ

AI ಶೃಂಗಸಭೆ: ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಲಿನಿಂದ ಒದ್ದು ಓಡಿಸಿದ ಸಾರ್ವಜನಿಕರು, Video!

ದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ AI ಇಂಪ್ಯಾಕ್ಟ್ 2026ರ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಈ ಘಟನೆ ಕುರಿತಂತೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನವದೆಹಲಿ: ದೆಹಲಿಯಲ್ಲಿರುವ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ AI ಇಂಪ್ಯಾಕ್ಟ್ 2026ರ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದರು. ಈ ಘಟನೆ ಕುರಿತಂತೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಫೆಬ್ರವರಿ 19-21ರವರೆಗೆ ನಡೆಯುತ್ತಿರುವ AI ಇಂಪ್ಯಾಕ್ಟ್ 2026ರ ಶೃಂಗಸಭೆಗೆ ಸುಮಾರು 10 ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ತಮ್ಮ ಶರ್ಟ್‌ಗಳನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರತ-ಯುಎಸ್ ಒಪ್ಪಂದದ ಮೂಲಕ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಘಟನೆಯಿಂದ ಹೌರಾರಿದ ಶೃಂಗಸಭೆಗೆ ಬಂದಿದ್ದ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಲಿನಿಂದ ಒದ್ದು, ಅಟ್ಟಾಟಿಸಿ ಭಾರತ್ ಮಂಟಪದ ಆವರಣದಿಂದ ಹೊರಕ್ಕೆ ಓಡಿಸಿದ್ದಾರೆ.

ಈ ವಿಷಯವು AI ಶೃಂಗಸಭೆಯಲ್ಲಿ ಭದ್ರತಾ ಲೋಪಕ್ಕೂ ಸಂಬಂಧಿಸಿದೆ. ಪ್ರತಿಭಟನಾಕಾರರು QR-ಕೋಡೆಡ್ ಪಾಸ್‌ಗಳನ್ನು ಬಳಸಿಕೊಂಡು ಸ್ಥಳಕ್ಕೆ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ. ಇದು ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೆಲವು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ನೇತೃತ್ವದ 'Pax Silica' ಕೂಟಕ್ಕೆ ಭಾರತ ಸೇರ್ಪಡೆ: ಚೀನಾದ ಆರ್ಥಿಕತೆಗೆ ಭಾರೀ ಹೊಡೆತ!

'ದೊಡ್ಡ ಕಾರ್ಯಕ್ರಮ, ಸಣ್ಣಪುಟ್ಟ ಲೋಪಗಳು ಸಹಜ..': Congress ಟೀಕಿಸಿದ್ದ AI Summit ಶ್ಲಾಘಿಸಿದ ಸಂಸದ ಶಶಿತರೂರ್!

ಸೈಬರ್ ವಂಚನೆ: ರಾಜ್ಯದಲ್ಲಿ ಮ್ಯೂಲ್ ಅಕೌಂಟ್ ಗಳ ಸ್ಥಗಿತ; 68 ಜನರ ಬಂಧನ

ಕಾಂಗ್ರೆಸ್ಸಿಗರಿಂದ ನಾಚಿಕೆಗೇಡಿನ ಕೃತ್ಯ: AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ, Video!

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಸಿಎಂ ತೀವ್ರ ಖಂಡನೆ, ಶಾಂತಿ-ಸೌಹರ್ದ ಕಾಪಾಡುವಂತೆ ಜನತೆಗೆ ಮನವಿ

SCROLL FOR NEXT