ಸೀಮಾ ಹೈದರ್ ಮತ್ತು ಸಚಿನ್  
ದೇಶ

ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಗೆ 6ನೇ ಮಗು; 11 ತಿಂಗಳಲ್ಲಿ ಎರಡು ಮಗು ಸ್ವಾಗತಿಸಿದ Sachin-Seema ದಂಪತಿ!

ಪಾಕಿಸ್ತಾನದಿಂದ ಗಡಿ ದಾಟಿ ಭಾರತೀಯ ಪ್ರಿಯಕರ ಸಚಿನ್ ಮೀನಾನನ್ನು ಸೇರಿದ ಸೀಮಾ ಹೈದರ್ ಮತ್ತೊಮ್ಮೆ ತಾಯಿಯಾಗಿದ್ದು, 5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.

ಲಖನೌ: ಪಾಕಿಸ್ತಾನದಿಂದ ಬಂದು ಭಾರತದ ಸಚಿನ್ ಮೀನಾರನ್ನು ಮದುವೆಯಾಗಿದ್ದ ಸೀಮಾ ಹೈದರ್ ತಮ್ಮ ಆರನೇ ಹಾಗೂ ಸಚಿನ್ ಜೊತೆ ತಮ್ಮ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

ಹೌದು.. ಪಾಕಿಸ್ತಾನದಿಂದ ಗಡಿ ದಾಟಿ ಭಾರತೀಯ ಪ್ರಿಯಕರ ಸಚಿನ್ ಮೀನಾನನ್ನು ಸೇರಿದ ಸೀಮಾ ಹೈದರ್ ಮತ್ತೊಮ್ಮೆ ತಾಯಿಯಾಗಿದ್ದು, 5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.

ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ಸಚಿನ್ ಜೊತೆಗಿನ ಅವರ ಎರಡನೇ ಮಗುವಾಗಿದೆ. ಈ ಮೂಲಕ ಸೀಮಾ ಹೈದರ್ ಈಗ ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ. ಖಾಸಗಿ ಆಸ್ಪತ್ರೆ ನೀಡಿದ ಮಾಹಿತಿ ಪ್ರಕಾರ, ಇದು ಸಹಜ ಹೆರಿಗೆ ಆಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಸಚಿನ್ ಮದುವೆಯಾಗಲು ಭಾರತಕ್ಕೆ ನುಸುಳಿದ್ದ ಸೀಮಾ

ಇನ್ನು ಭಾರತೀಯ ಮೂಲದ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಲು ಸೀಮಾ ಹೈದರ್ ನೇಪಾಳ ಮೂಲಕ ಭಾರತ ಪ್ರವೇಶ ಮಾಡಿದ್ದರು.

ಪಾಕಿಸ್ತಾನಿ ಮೂಲದ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಆನ್‌ಲೈನ್‌ನಲ್ಲಿ ಪಬ್ಜಿ ಗೇಮ್ ಆಡುತ್ತಾ ಪರಸ್ಪರ ಪರಿಚಿತರಾಗಿ ಪ್ರೀತಿ ಮಾಡಲು ಶುರು ಮಾಡಿದ್ದು, ಪ್ರಿಯಕರ ಸಚಿನ್‌ಗಾಗಿ ಅವರು ನೇಪಾಳ ಮೂಲ ಅಕ್ರಮವಾಗಿ ಗಡಿದಾಟಿ ಬಂದಿದ್ದರು.

ಸೀಮಾ ಹೈದರ್‌ಗೆ ಪಾಕಿಸ್ತಾನದಲ್ಲಿ ಆಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು. 2023ರ ಮೇ ತಿಂಗಳಲ್ಲಿ ಆ ಮಕ್ಕಳ ಜೊತೆಗೆ ಸೀಮಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು.

ಸಚಿನ್ ಜೊತೆ ಮದುವೆಗೂ ಮುನ್ನ 4 ಮಕ್ಕಳು

ಮೂಲತಃ ಸೀಮಾ ಪಾಕಿಸ್ತಾನದ ಜಾಕೋಬಾದ್ ನಿವಾಸಿಯಾಗಿದ್ದು, ಆಕೆಯ ಮೂಲ ಹೆಸರು ಸೀಮಾ ಗುಲಾಮ್ ಹೈದರ್ ಎಂಬುದಾಗಿತ್ತು. 2019ರಲ್ಲಿ ಪಬ್ಜಿ ಆಡುತ್ತಾ ಸೀಮಾ ಹಾಗೂ ಸಚಿನ್‌ಗೆ ಪರಿಚಯವಾಗಿತ್ತು. ಕ್ರಮೇಣ ಅವರು ಪ್ರೀತಿಯಲ್ಲಿ ಬಿದ್ದಿದ್ದರು.

ಆದರೆ ಸಚಿನ್‌ಗಾಗಿ ಸೀಮಾ ಹೈದರ್ 2023ರಲ್ಲಿ ಭಾರತಕ್ಕೆ ಬಂದ ನಂತರ ಅವರು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರ ಲವ್ ಸ್ಟೋರಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೂ ಮೊದಲು ಸೀಮಾ ಹೈದರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್