ಮದುವೆ (ಸಾಂದರ್ಭಿಕ ಚಿತ್ರ) 
ದೇಶ

ಮದುವೆಯಾದ ಎರಡೇ ದಿನಕ್ಕೆ ವಧು ನಿಗೂಢ ಸಾವು; ವರದಕ್ಷಿಣೆ ಹತ್ಯೆ ಎಂದು ಕುಟುಂಬ ಆರೋಪ

ಮೃತ ಯುವತಿ ಸೀಮಾ ಫೆಬ್ರವರಿ 20 ರಂದು ಪಿ ಪಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಧ್ನಿ ಗ್ರಾಮದ ನಿವಾಸಿ ಮನೋಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಪಿ ಪಿ ಗಂಜ್ ಪ್ರದೇಶದಲ್ಲಿ 21 ವರ್ಷದ ಯುವತಿ ಮದುವೆಯಾದ ಕೇವಲ ಎರಡು ದಿನಗಳ ನಂತರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ. ಯುವತಿಯ ಕುಟುಂಬ, ಅತ್ತೆ ಮಾವಂದಿರರೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮೃತ ಯುವತಿ ಸೀಮಾ ಫೆಬ್ರವರಿ 20 ರಂದು ಪಿ ಪಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಧ್ನಿ ಗ್ರಾಮದ ನಿವಾಸಿ ಮನೋಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಪಿಪ್ರೈಚ್ ಪ್ರದೇಶದ ರತನ್‌ಪುರ ಗ್ರಾಮದ ಕಮಲ್ ಪ್ರಭಾ ದೇವಿ ಅವರ ಪುತ್ರಿ ಸೀಮಾ ಫೆಬ್ರವರಿ 21 ರಂದು ತನ್ನ ಅತ್ತೆ ಮಾವನ ಮನೆಗೆ ಹೋಗಿದ್ದರು ಮತ್ತು ಫೆಬ್ರವರಿ 22 ರಂದು ಸಂಜೆ, ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯ ಕುಟುಂಬಕ್ಕೆ ತಿಳಿಸಲಾಗಿದೆ.

ಆಕೆಯನ್ನು ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೀಮಾ ನಿಧನರಾದರು.

ಸೀಮಾ ಅವರ ಪೋಷಕರು ಆಸ್ಪತ್ರೆಗೆ ತಲುಪುವ ಹೊತ್ತಿಗೆ, ಆಕೆಯ ಅತ್ತೆ ಮಾವಂದಿರು ಶವವನ್ನು ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಸೀಮಾ ಅವರ ತಾಯಿ ಮಂಗಳವಾರ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾದಾಗಿನಿಂದ ಪತಿ ಮತ್ತು ಅವರ ಕುಟುಂಬದವರು ಸೀಮಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ಈಗ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕುಟುಂಬದವರ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!