ಅನಿಲ್ ಅಂಬಾನಿಯ ಮನೆ 
ದೇಶ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ ಬೆಲೆಬಾಳುವ 17 ಅಂತಸ್ತಿನ ಕಟ್ಟಡ Abode ಇಡಿ ವಶಕ್ಕೆ!

ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮೇಲಿರುವ ಬ್ಯಾಂಕ್ ಸಾಲದ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ 66 ವರ್ಷದ ಅನಿಲ್ ಅಂಬಾನಿ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಯು ವಿಚಾರಣೆ ನಡೆಸುತ್ತಿದೆ.

ಮುಂಬೈ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಬದುಕು ಬೀದಿಗೆ ಬಿದ್ದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಸುಮಾರು 3,716 ಕೋಟಿ ಬೆಲೆಬಾಳುವ ಮುಂಬೈಯಲ್ಲಿನ ಅವರ ಐಷರಾಮಿ ಬಂಗಲೆ 'ಅಬೋಡ್' ಅನ್ನು ಇಡಿ ಜಪ್ತಿ ಮಾಡಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮೇಲಿರುವ ಬ್ಯಾಂಕ್ ಸಾಲದ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ 66 ವರ್ಷದ ಅನಿಲ್ ಅಂಬಾನಿ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಯು ವಿಚಾರಣೆ ನಡೆಸುತ್ತಿದೆ. ಇದೇ ಆಸ್ತಿಯಲ್ಲಿನ 473.17 ಕೋಟಿ ರೂಪಾಯಿ ಮೌಲ್ಯದ ಒಂದು ಭಾಗವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಇಡಿ ಜಪ್ತಿ ಮಾಡಿತ್ತು.

3,716 ಕೋಟಿ ರೂಪಾಯಿ ಮೌಲ್ಯದ ಅನಿಲ್ ಅಂಬಾನಿ ಅವರ ಮನೆ ಅಬೌಡ್, 17 ಅಂತಸ್ತುಗಳನ್ನು ಹೊಂದಿರುವ 66 ಮೀಟರ್ ಬಹುಮಹಡಿ ಕಟ್ಟಡವಾಗಿದೆ. ಇದು ಮುಂಬೈನ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಪಾಲಿ ಹಿಲ್‌ನಲ್ಲಿದೆ. ಅವರ ಮನೆಯಲ್ಲಿ ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ದೊಡ್ಡ ಪಾರ್ಕಿಂಗ್ ಪ್ರದೇಶ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯ ಹೊಂದಿದೆ. ದುಬಾರಿ ಕಾರುಗಳಿರುವ ಲಾಂಜ್ ಕೂಡ ಇದೆ. ಅವರು ರೋಲ್ಸ್ ರಾಯ್ಸ್, ಲೆಕ್ಸಸ್, ಪೋರ್ಷೆ, ಆಡಿ ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ. ಆದಾಗ್ಯೂ, ಕೇವಲ ಒಂದು ಕಾರು ಹೊಂದಿರುವುದಾಗಿ ಅವರು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇಡಿ ಹೇಳಿದ್ದೇನು? ಇತರ ಆಸ್ತಿಗಳ ಜೊತೆಗೆ ಪಾಲಿ ಹಿಲ್ ನ ಮನೆಯನ್ನು ಅನಿಲ್ ಅಂಬಾನಿ ಕುಟುಂಬದ ಸದಸ್ಯರ ಖಾಸಗಿ ಕುಟುಂಬದ ಟ್ರಸ್ಟ್ - ರೈಸ್ಇ ಟ್ರಸ್ಟ್‌ಗೆ ಒಟ್ಟುಗೂಡಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಹೇಳಿದೆ.

ಅನಿಲ್ ಅಂಬಾನಿ ಇದರಲ್ಲಿ ತೊಡಗಿಸಿಕೊಂಡಿಲ್ಲ ಎಂದು ತೋರಿಸಲು ಇದನ್ನು ಮಾಡಲಾಗಿದೆ. RiseE ಟ್ರಸ್ಟ್‌ನಲ್ಲಿ ಆಸ್ತಿಯನ್ನು ಒಟ್ಟುಗೂಡಿಸುವ ಮೂಲಕ ಸಂಪತ್ತಿನ ಸಂರಕ್ಷಣೆ ಮಾಡುವುದು ಮತ್ತು ರಿಲಯನ್ಸ್ ಕಮ್ಯೂನಿಕೇಷನ್ ಪಡೆದಿದ್ದ ಮರುಪಾವತಿಸದ ಸಾಲದಿಂದ ಅನಿಲ್ ಅಂಬಾನಿಯನ್ನು ಬಚಾವ್ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಇಡಿ ಹೇಳಿದೆ.

RCOM ಮತ್ತು ಅದರ ಸಮೂಹ ಕಂಪನಿಗಳು ದೇಶೀಯ ಮತ್ತು ವಿದೇಶಿ ಸಾಲದಾತರಿಂದ 40,185 ಕೋಟಿ ರೂಪಾಯಿಯಷ್ಟು ಸಾಲವನ್ನು ಪಡೆದಿವೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ 15, 700 ಕೋಟಿ ರೂ. ಮೊತ್ತದಷ್ಟು ಆಸ್ತಿ ಜಪ್ತಿ ಮಾಡಲಾಗಿದೆ.

ಅನಿಲ್ ಅಂಬಾನಿ ಇಂದು ಎರಡನೇ ಸುತ್ತಿನ ವಿಚಾರಣೆಗಾಗಿ ದೆಹಲಿಯ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿದ್ದರು. ಈ ಹಿಂದೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅವರನ್ನು ಗ್ರಿಲ್ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ನವದೆಹಲಿ: ಸಂಪುಟ ಪುನರ್ ರಚನೆಗೆ ಪಟ್ಟು, ಹಿರಿಯ ನಾಯಕರೊಂದಿಗೆ ಚರ್ಚಿಸದೆ ಬೆಂಗಳೂರಿಗೆ ವಾಪಸ್ ಆಗಲ್ಲ: ಅಶೋಕ್ ಪಟ್ಟಣ್

ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ನಮ್ಮ ಬೆಕ್ಕು ಪ್ರೆಗ್ನೆಂಟ್ ಆಗಲು ನಿಮ್ಮ ಗಂಡು ಬೆಕ್ಕೇ ಕಾರಣ; ಮಾರಾಮಾರಿ! Video ನೋಡಿ

SCROLL FOR NEXT