ನವದೆಹಲಿ: ಸುಮಾರು 5 ಕೋಟಿ ರೂ. ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್ ಅನ್ನು ಎರಡು ತಿಂಗಳ ನಂತರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಪಾಲ್ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರು, ಈ ಐಷಾರಾಮಿ ಕಾರುಗಳನ್ನು ಖರೀದಿಸುವ ಲೋಕಪಾಲ್ ನಿರ್ಧಾರವನ್ನು ಟೀಕಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಪಾಲ್‌ನ ಪೂರ್ಣ ಪೀಠದ ನಿರ್ಣಯದ ನಂತರ ಖರೀದಿ ಪ್ರಸ್ತಾಪವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಪಾಲ್ ಅಕ್ಟೋಬರ್ 16, 2025 ರಂದು ಏಳು ಬಿಎಂಡಬ್ಲ್ಯು 3 ಸಿರೀಸ್ 330Li ಕಾರುಗಳ ಪೂರೈಕೆಗಾಗಿ ಪ್ರತಿಷ್ಠಿತ ಕಂಪನಿಗಳಿಂದ ಬಿಡ್‌ಗಳನ್ನು ಕೋರುವ ಪ್ರಸ್ತಾವನೆ ಮಂಡಿಸಲಾಗಿತ್ತು.
ಲೋಕಪಾಲ್ ಅಧ್ಯಕ್ಷರು ಮತ್ತು ಆರು ಸದಸ್ಯರಿಗೆ ತಲಾ ಒಂದು ಬಿಎಂಡಬ್ಲ್ಯು ಕಾರು ಖರೀದಿಸುವ ಉದ್ದೇಶವನ್ನು ಈ ಪ್ರಸ್ತಾವನೆ ಹೊಂದಿತ್ತು. ಪ್ರಸ್ತುತ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್(ನಿವೃತ್ತ) ಅವರು ಲೋಕಪಾಲ್ ನೇತೃತ್ವ ವಹಿಸಿದ್ದಾರೆ.
ಟೆಂಡರ್‌ನಲ್ಲಿ ಬಿಳಿ ಬಣ್ಣದ "ಉದ್ದವಾದ ವೀಲ್‌ಬೇಸ್" ಹೊಂದಿರುವ BMW 330Li "M ಸ್ಪೋರ್ಟ್" ಮಾದರಿ ಕಾರುಗಳ ಖರೀದಿಯನ್ನು ನಿರ್ದಿಷ್ಟಪಡಿಸಲಾಗಿತ್ತು.
ನವದೆಹಲಿಯಲ್ಲಿ ಈ ಪ್ರಸ್ತಾವಿತ ಕಾರುಗಳ ಆನ್-ರೋಡ್ ಬೆಲೆ ಸುಮಾರು 5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಲೋಕಪಾಲರ ಈ ನಿರ್ಧಾರವು ವಿರೋಧ ಪಕ್ಷಗಳಿಂದ ಮತ್ತು ಸಾಮಾಜಿಕ ಹೋರಾಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.