ಬ್ಲಿಂಕಿಟ್ ಡೆಲಿವರಿ ಬಾಯ್  
ದೇಶ

ಮಧ್ಯರಾತ್ರಿ ಇಲಿ ಪಾಶಾಣ ಆರ್ಡರ್: ಸಮಯಪ್ರಜ್ಞೆ ಮೆರೆದ Blinkit ಡೆಲಿವರಿ ಬಾಯ್; ಸಾವಿನ ದವಡೆಯಿಂದ ಮಹಿಳೆ ಪಾರು..!

ತಡರಾತ್ರಿ ಬ್ಲಿಂಕಿಟ್ ಆ್ಯಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ 'ಇಲಿ ಪಾಷಾಣ' (Rat Poison) ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ.

ಚೆನ್ನೈ: ಕಾಲ ಬದಲಾದಂತೆ ಮಾನವೀಯತೆ ಅನ್ನೋದು ಮರೀಚಿಕೆಯಾಗುತ್ತಿದೆ. ಜನರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವಿದ್ದೇವೆ. ಹೀಗಾಗಿ ಇಲ್ಲಿ ಯಾರಿಗೂ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿಲ್ಲ.. ಸಹಾಯ ಮಾಡುವ ಮನಸ್ಸಿದ್ದರು ಸಮಯವೂ ಇಲ್ಲ.

ಹೀಗಾಗಿ ಎಲ್ಲರೂ ತಮ್ಮ ತಮ್ಮ ಕಷ್ಟಗಳನ್ನೇ ನೆನೆಸಿಕೊಂಡು, ಮತ್ತೊಬ್ಬರು ಕಷ್ಟವನ್ನು ಕಂಡು ಕಣ್ಮುಚ್ಚಿಕೊಂಡು ಹೋಗುತ್ತಾರೆ. ಇಂಥಾ ಸಂದರ್ಭದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಯೊಬ್ಬರು ತಮ್ಮ ಸಮಯಪ್ರಜ್ಞೆಯಿಂದ ಸಾವಿನ ಸುಳಿಗೆ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಡರಾತ್ರಿ ಬ್ಲಿಂಕಿಟ್ ಆ್ಯಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ 'ಇಲಿ ಪಾಷಾಣ' (Rat Poison) ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ. ತಕ್ಷಣವೇ ಆರ್ಡರ್ ಪಡೆದು ಮಹಿಳೆಯ ವಿಳಾಸಕ್ಕೆ ತೆರಳಿದಾಗ, ಆತನ ಅನುಮಾನ ನಿಜವಾಗಿದೆ.

ಡೆಲಿವರಿ ನೀಡಲು ಹೋದಾಗ ಮನೆಯ ಬಾಗಿಲು ತೆರೆದ ಮಹಿಳೆ ತೀವ್ರವಾಗಿ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾರೆ.

ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ.

ಮಹಿಳೆ ಮೊದಲು ತಾನು ಇಲಿಗಳನ್ನು ಕೊಲ್ಲಲು ಇದನ್ನು ತರಿಸಿದ್ದಾಗಿ ಸುಳ್ಳು ಹೇಳಿದರೂ, ಸಮಯಪ್ರಜ್ಞೆ ಮೆರೆದ ಯುವಕ ಅದನ್ನು ನಂಬದೆ. "ನಿಜವಾಗಿಯೂ ಇಲಿ ಕಾಟವಿದ್ದರೆ ಸಂಜೆ ಅಥವಾ ಮರುದಿನ ಆರ್ಡರ್ ಮಾಡುತ್ತಿದ್ದಿರಿ, ಈ ಸಮಯದಲ್ಲಿ ಆರ್ಡರ್ ಮಾಡುವ ಅಗತ್ಯವಿರಲಿಲ್ಲ ಎಂದು ಪ್ರಶ್ನಿಸಿ ಆಕೆಯ ಮನವೊಲಿಸಿದ್ದಾರೆ.

ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಏನೋ ಒಂದು ದೊಡ್ಡ ಸಾಧನೆ ಮಾಡಿದ ತೃಪ್ತಿ ಇದೆ ಎಂದು ಬರೆದುಕೊಂಡಿದ್ದಾನೆ. ಸದ್ಯ ಈತನ ಈ ಕಾರ್ಯಕ್ಕೆ ನೆಟ್ಟಿಗರು 'ರಿಯಲ್ ಹೀರೋ' ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ