ಕೋಲ್ಕತಾ: ನರಭೇಟೆಯಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಭೀತಿ ಮೂಡಿಸಿದ್ದ ನರಭಕ್ಷಕ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನರನ್ನು ಕೊಂದು ಮೃತದೇಹವನ್ನು ಎಳೆದುಕೊಂಡು ಹೋಗಿ ತಿನ್ನುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಫಿರ್ದೌಸ್ ಆಲಂ ಎಂದು ಗುರುತಿಸಲಾಗಿದ್ದು. ಆರೋಪಿ ಫಿರ್ದೋಸ್ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ಅವನ ಮಾಂಸವನ್ನು ತಿನ್ನಲು ದೇಹವನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ದಿನ್ಹಾಟಾ ಉಪಜಿಲ್ಲಾ ಪೊಲೀಸ್ ಅಧಿಕಾರಿ ಧಿಮಾನ್ ಮಿತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಜನವರಿ 10 ರಂದು, ದಿನ್ಹಾಟಾ ಗಡಿಗೆ ಹೊಂದಿಕೊಂಡಿರುವ ಕುರ್ಷಾ ಹ್ಯಾಟ್‌ನಲ್ಲಿರುವ ದೂರದ ಸ್ಮಶಾನದಿಂದ ಪೊಲೀಸರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಶವವನ್ನು ವಶಪಡಿಸಿಕೊಂಡಿದ್ದಾರೆ.
ಮೃತದೇಹದ ಕುತ್ತಿಗೆ ಮತ್ತು ಭುಜಗಳ ಮೇಲೆ ಆಳವಾದ ಗಾಯಗಳಿದ್ದವು. ಅದರ ನಂತರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಅದರ ನಂತರ, ಆರೋಪಿ ಫಿರ್ದೌಸ್ ಆಲಂನನ್ನು ಬಂಧಿಸಲಾಯಿತು.
ನರಭಕ್ಷಣೆ: ಬೆಚ್ಚಿ ಬಿದ್ದ ಪೊಲೀಸರು
ಆರೋಪಿಯನ್ನು ವಿಚಾರಣೆ ನಡೆಸಿದಾಗ, ಒಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಈತ ನರಭಕ್ಷಣೆ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಈ ಮಾತು ಕೇಳಿದ ಪೊಲೀಸರೇ ಹೌಹಾರಿದ್ದು, ಆರೋಪಿ ಯುವಕ ಫಿರ್ದೋಸ್ ಕೊಲೆಯ ನಂತರ ಆ ವ್ಯಕ್ತಿಯ ಶವವನ್ನು ತನ್ನ ಮನೆಗೆ ಕರೆತರುತ್ತಿದ್ದ. ನಂತರ ಅವನು ದೇಹವನ್ನು ಸ್ವಚ್ಛಗೊಳಿಸಿ. ಮೃತ ದೇಹದ ಮಾಂಸವನ್ನು ತಿನ್ನುತ್ತಿದ್ದ ಎಂದು ಹೇಳಿಕೊಂಡಿದ್ದಾನೆ.
ಪ್ರಸ್ತುತ ಆತನನ್ನು ಬಂಧಿಸಿರುವ ಪೊಲೀಸರು ಈಗಾಗಲೇ ಆರೋಪಿಯನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಆರೋಪಿಯು ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ದೇಹ ತಿನ್ನುವುದಕ್ಕಾಗಿಯೇ ಆತ ಕೊಲೆ ಮಾಡಿದ್ದಾನೆ.
ಕೊಲೆಯ ನಂತರ, ಅವನು ಶವವನ್ನು ಮನೆಗೆ ತಂದಿದ್ದಾನೆ ಎಂದು ತಿಳಿದುಬಂದಿದೆ. ನಂತರ ಅವನು ಅದನ್ನು ಅಡುಗೆಮನೆಯಲ್ಲಿ ಸ್ವಚ್ಛಗೊಳಿಸಿದ್ದಾರೆ. ಶವವನ್ನು ತಿನ್ನುವುದೇ ಅವನ ಉದ್ದೇಶ ಎಂದು ಸಾಕ್ಷಿಗಳಿಂದ ನಮಗೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪರೂಪದಲ್ಲೇ ಅಪರೂಪ
ಆ ನರಭಕ್ಷಕ ಫಿರ್ದೋಸ್ ಸ್ಮಶಾನದಿಂದ ಸಿಕ್ಕ ಅಪರಿಚಿತ ದೇಹದ ಮಾಂಸವನ್ನು ತಿನ್ನಲು ಯೋಜನೆ ಹಾಕಿಕೊಂಡಿದ್ದನು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಪೊಲೀಸರು ಹೇಳುತ್ತಾರೆ.