ಮುಂಬೈ: ದೇಶದ ಅತಿ ಶ್ರೀಮಂತ ನಾಗರಿಕ ಸಂಸ್ಥೆ ಬೃಹನ್ ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆ ಫಲಿತಾಂಶ ಕುರಿತು ಶಿವಸೇನೆ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ದೇವರ ದಯೆಯಿದ್ದರೆ, ಮುಂಬೈಯಲ್ಲಿ ತಮ್ಮ ಪಕ್ಷದವರು ಮೇಯರ್ ಆಗಬಹುದು ಎಂದಿದ್ದಾರೆ. ಬಿಜೆಪಿ-ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಭರ್ಜರಿ ಗೆಲುವಿನ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಶಿವ ಸೇನಾ-ಯುಬಿಟಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಉದ್ಧವ್ ಠಾಕ್ರೆ, ಬಿಜೆಪಿಯವರು ಮುಂಬೈಯನ್ನು ಅಡಮಾನವಿಟ್ಟು ದ್ರೋಹ ಬಗೆದು ಚುನಾವಣೆಯಲ್ಲಿ ಗೆದ್ದಿದ್ದಾರೆ. ಮರಾಠಿಗರು ಈ ಪಾಪವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.
BMC ಚುನಾವಣೆಯಲ್ಲಿ 65 ವಾರ್ಡ್ ಗಳಲ್ಲಿ ಸೇನಾ-ಯುಬಿಟಿ ಗೆಲುವು ಸಾಧಿಸಿರುವುದನ್ನು ಉಲ್ಲೇಖಿಸಿದ ಉದ್ಧವ್ ಠಾಕ್ರೆ, ಮುಂಬೈನಲ್ಲಿ ಶಿವಸೇನೆ-ಯುಬಿಟಿಯ ಮೇಯರ್ ಮಾಡುವುದು ನನ್ನ ಕನಸು. ದೇವರ ದಯೆಯಿದ್ದರೆ, ಆ ಕನಸು ನನಸಾಗುತ್ತದೆ. ಬಿಜೆಪಿಯು ಶಿವಸೇನೆ-ಯುಬಿಟಿಯನ್ನು ಮುಗಿಸಿದೆ ಎಂಬುದಾಗಿ ತೋರಿಸಿಕೊಳ್ಳುತ್ತಿದೆ. ಆದರೆ ಅದು ಸಾಧ್ಯವಿಲ್ಲದ ಮಾತು. ಶಿವಸೇನಾ ನೆಲೆಯಲ್ಲಿ ಬಿಜೆಪಿಯಿಂದ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಂಬೈಯನ್ನು ಅಡಮಾನವಾಗಿಟ್ಟು, ದ್ರೋಹ ಬಗೆದು ಬಿಜೆಪಿಯವರು ಗೆದಿದ್ದಾರೆ. ಮರಾಠಿಗರು ಇದನ್ನು ಕ್ಷಮಿಸುವುದಿಲ್ಲ. ಹೋರಾಟ ಮುಗಿದಿಲ್ಲ. ಆದರೆ ಇದು ಈಗತಾನೇ ಆರಂಭ ಎಂದರು.
227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89, ಶಿವಸೇನಾ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಶಿವಸೇನಾ ಯುಬಿಟಿ (65) MNS (ಆರು) ಕಾಂಗ್ರೆಸ್ 24, ಎಐಎಂಐಎಂ 8, ಎನ್ ಸಿಪಿ 3, ಸಮಾಜವಾದಿ ಪಾರ್ಟಿ 2 ಮತ್ತು NCP (SP) ಕೇವಲ ಒಂದು ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ.