ರಾಜ್ ಠಾಕ್ರೆ 
ದೇಶ

ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ...: BMC ಸೋಲಿನ ಬಗ್ಗೆ ರಾಜ್ ಠಾಕ್ರೆ

ಇಂದು ಬಿಎಂಸಿ ಚುನಾವಣೆ ಸೋಲಿನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ ಠಾಕ್ರೆ, ಬಿಎಂಸಿ ಚುನಾವಣೆ "ಶಿವಶಕ್ತಿ ಮತ್ತು ಹಣಬಲದ " ನಡುವಿನ ಹೋರಾಟವಾಗಿತ್ತು ಎಂದಿದ್ದಾರೆ.

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಶನಿವಾರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದು, ಮರಾಠಿಗರಿಗಾಗಿ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಇಂದು ಬಿಎಂಸಿ ಚುನಾವಣೆ ಸೋಲಿನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ ಠಾಕ್ರೆ, ಬಿಎಂಸಿ ಚುನಾವಣೆ "ಶಿವಶಕ್ತಿ ಮತ್ತು ಹಣಬಲದ " ನಡುವಿನ ಹೋರಾಟವಾಗಿತ್ತು ಎಂದಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಈ ಹಿನ್ನಡೆಯಿಂದ ಉತ್ಸಾಹ ಕಳೆದುಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.

"ಎಂಎನ್‌ಎಸ್ ನಿರೀಕ್ಷಿತ ಫಲಿತಾಂಶ ಪಡೆಯದಿರುವುದು ನನಗೆ ಬೇಸರ ತಂದಿದೆ, ಆದರೆ ಯಾರೂ ನಿರಾಶೆಗೊಳ್ಳಬಾರದು. ನಮ್ಮ ಕಾರ್ಪೊರೇಟರ್‌ಗಳು ಮರಾಠಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದರೆ ಅಧಿಕಾರದಲ್ಲಿರುವವರನ್ನು ಖಂಡಿತವಾಗಿಯೂ ಖಂಡಿಸುತ್ತಾರೆ" ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

"ಈ ಹೋರಾಟ ನಮ್ಮ ಅಸ್ತಿತ್ವ. ಅಂತಹ ಹೋರಾಟಗಳು ದೀರ್ಘಕಾಲೀನವಾಗಿವೆ ಎಂದು ನೀವು ತಿಳಿದಿರಬೇಕು" ಎಂದು ಅವರು ಹೇಳಿದ್ದಾರೆ.

"ಮರಾಠಿ ಮನುಷ್ಯನ ಪರವಾಗಿ ದೃಢವಾಗಿ ನಿಲ್ಲಿರಿ. ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ನಮ್ಮ ಉಸಿರು ಇರುವವರೆಗೆ ಮರಾಠಿಯನ್ನು ಎಂದಿಗೂ ಮರೆಯಬೇಡಿ. ಪಕ್ಷ ಮತ್ತು ಸಂಘಟನೆಯನ್ನು ಪುನರ್ನಿರ್ಮಿಸಲು ಪಕ್ಷದ ಕಾರ್ಯಕರ್ತರು ಕೆಲಸಕ್ಕೆ ಮರಳಬೇಕೆಂದು" ಎಂದು ಅವರು ಮನವಿ ಮಾಡಿದ್ದಾರೆ.

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಎಂಸಿ ಚುನಾವಣೆಗಾಗಿ 20 ವರ್ಷಗಳ ನಂತರ ತಮ್ಮ ಸೋದರಸಂಬಂಧಿ ಶಿವಸೇನೆ-ಯುಬಿಟಿ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದರು ಮತ್ತು ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಮೇಲೆ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು ಈ ಜೋಡಿ ತಮ್ಮನ್ನು ತಾವು ಮರಾಠಿ ರಕ್ಷಕರು ಎಂದು ಬಿಂಬಿಸಿಕೊಂಡಿದ್ದರು.

ಸುಮಾರು ಮೂರು ದಶಕಗಳಿಂದ ಠಾಕ್ರೆ ಕುಟುಂಬದ ಭದ್ರಕೋಟೆಯಾಗಿದ್ದ ಬಿಎಂಸಿ ಚುನಾವಣೆಯಲ್ಲಿ ಶಿವಸೇನೆ-ಯುಬಿಟಿ ಕೇವಲ 65 ಸ್ಥಾನಗಳನ್ನು ಗೆದ್ದಿದ್ದು, ಅದರ ಮಿತ್ರ ಪಕ್ಷ ಎಂಎನ್‌ಎಸ್ ಕೇವಲ ಆರು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

RCB ಅಭಿಮಾನಿಗಳಿಗೆ ಸಿಹಿ ಸುದ್ದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಅನುಮತಿ

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!

ಯಾವುದೇ ದೇವಸ್ಥಾನ ಕೆಡವಿಲ್ಲ; ಕಾಶಿಗೆ ಕಳಂಕ ತರಲು ಕಾಂಗ್ರೆಸ್ ನಿಂದ AI ಬಳಕೆ: UP ಸಿಎಂ ಯೋಗಿ

ಬೆಂಗಳೂರು: ದೇವನಹಳ್ಳಿ ಬಳಿ ಭೀಕರ ಅಪಘಾತ; ಒಂದೇ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವು

ದೇಶದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ

SCROLL FOR NEXT