ಮನೋಜ್ ತಿವಾರಿ 
ದೇಶ

ಮುಂಬೈ: BJP ಸಂಸದ ಮನೋಜ್ ತಿವಾರಿ ಮನೆಯಲ್ಲಿ ಕಳ್ಳತನ

ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದೆ.

ಮುಂಬೈ: ಬಿಜೆಪಿ ಸಂಸದ ಮನೋಜ್ ತಿವಾರಿ ನಿವಾಸದಲ್ಲಿ ದರೆಡೆ ನಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದೆ.

ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ನಡೆಸಿರುವ, ಕಳ್ಳರು 5.40 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮಾಜಿ ಕೆಲಸಗಾರನೊಬ್ಬನನ್ನು ಬಂಧನಕ್ಕೊಳಪಡಿಸಿದ್ದಾರೆ.

ಮನೋಜ್ ತಿವಾರಿ ಅವರ ಮ್ಯಾನೇಜರ್ ಪ್ರಮೋದ್ ಜೋಗೇಂದ್ರ ಪಾಂಡೆ ಈ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುರೇಂದ್ರ ಕುಮಾರ್ ದೀನನಾಥ್ ಶರ್ಮಾ ಎಂಬುವವರನ್ನು ಬಂಧಿಸಿದ್ದಾರೆ. ಈತನನ್ನು ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ. ತನಿಖೆಯಲ್ಲಿ ಆರೋಪಿಗಳು ಕಳ್ಳತನಕ್ಕೆ ನಕಲಿ ಕೀಲಿಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮೋದ್ ಪಾಂಡೆ ಕಳೆದ 20 ವರ್ಷಗಳಿಂದ ಮನೋಜ್ ತಿವಾರಿ ಅವರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗೋಲ್ಡನ್ ಟೆಂಪಲ್‌ನ ಕೊಳದಲ್ಲಿ ಕೈ, ಕಾಲು ತೊಳೆದು ಬಾಯಿ ಮುಕ್ಕಳಿಸಿ ಅಪವಿತ್ರಗೊಳಿಸಿದ Muslim ವ್ಯಕ್ತಿ, Video!

Guillain-Barré Syndrome ಗೆ ಮಧ್ಯಪ್ರದೇಶದಲ್ಲಿ 2 ಸಾವು! ಏನಿದು ಸೋಂಕು? ಹೇಗೆ ಹರಡುತ್ತದೆ?

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ, ಮೂವರ ಬಂಧನ!

ಮೊಟ್ಟೆಯಿಡುವ ಸಮಯ! ಆಲಿವ್ ರಿಡ್ಲಿಗಳ ಆತಿಥ್ಯಕ್ಕೆ ಸಿದ್ಧವಾದ ಕುಂದಾಪುರ!

SCROLL FOR NEXT