ಲುಧಿಯಾನ: ಪಂಜಾಬ್ ನ ಲುಧಿಯಾನದ ಖನ್ನಾದಲ್ಲಿ ಸೋಮವಾರ ಉದ್ಯಮಿಯೊಬ್ಬರ ನಿವಾಸದ ಮೇಲೆ ಮೋಟಾರ್ ಸೈಕಲ್‌ನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ, ಹೊರಗೆ ನಿಂತಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯಲ್ಲಿ ಕಾರು ಭಾಗಶಃ ಹಾನಿಯಾಗಿದೆ.
ದಾಳಿಕೋರರು ತಮ್ಮ ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದರು ಎಂದು ಖನ್ನಾ ಪೊಲೀಸ್ ವರಿಷ್ಠಾಧಿಕಾರಿ ಪವನ್‌ಜೀತ್ ಸಿಂಗ್ ಹೇಳಿದ್ದಾರೆ.
ಅಪರಾಧಿಗಳನ್ನು ಗುರುತಿಸಲು ಅಧಿಕಾರಿಗಳು ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
"ಆರೋಪಿಗಳನ್ನು ಬಂಧಿಸಲು ನಾವು ಎಂಟು ತಂಡಗಳನ್ನು ರಚಿಸಿದ್ದೇವೆ ಮತ್ತು ಗುಂಡು ಹಾರಿಸುವಿಕೆಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ" ಎಂದು ಸಿಂಗ್ ತಿಳಿಸಿದ್ದಾರೆ.