ಭಾರತದಲ್ಲಿ ಎರಡು ದಿನಗಳ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತದೆ, ಒಂದು ಸ್ವಾತಂತ್ರ್ಯ ದಿನ ಮತ್ತೊಂದು ಗಣರಾಜ್ಯೊತ್ಸವ ದಿನ. ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರೆ, ರಾಷ್ಟ್ರಪತಿಗಳು ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ.
ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳೇ ಏಕೆ ಧ್ವಜಾರೋಹಣ ನೆರವೇರಿಸುತ್ತಾರೆ, ಪ್ರಧಾನಮಂತ್ರಿಗಳೇಕೆ ಹಾರಿಸುವುದಿಲ್ಲ ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡುವುದುಂಟು. ಈ ಬಗ್ಗೆ ಈ ಸುದ್ದಿಯಲ್ಲಿ ಮಾಹಿತಿಯಿದೆ...
ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಮತ್ತು ಜನವರಿ 26 ನಮ್ಮ ಭಾರತೀಯ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಆಗಸ್ಟ್ 15 ಸ್ವಾತಂತ್ರ್ಯ ದಿನವೆಂದೂ ಮತ್ತು ಜನವರಿ 26ರಂದು ಗಣರಾಜ್ಯೋತ್ಸವ ಎಂದು ಕರೆಯಲಾಗುತ್ತದೆ.
ಮಾತ್ರವಲ್ಲ ಈ ಎರಡು ದಿನಗಳು ಕೂಡ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಹಾಗಾದರೆ, ನಿಮಗೆ ಈ ಎರಡು ದಿನಗಳ ನಡುವಿನ ವ್ಯತ್ಯಾಸವೇನೆಂಬುದು ನಿಮಗೆ ಗೊತ್ತಾ?
ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು, ಧ್ವಜವನ್ನು ಕೆಳಗಿನಿಂದ ಹಗ್ಗದಿಂದ ಎಳೆಯಲಾಗುತ್ತದೆ, ನಂತರ ಅದನ್ನು ತೆರೆಯಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. 15 ಆಗಸ್ಟ್ 1947 ರ ಐತಿಹಾಸಿಕ ಘಟನೆಯನ್ನು ಗೌರವಿಸಲು ಇದನ್ನು ಮಾಡಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ.
ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ, ನಂತರ ಅದನ್ನು ಎಳೆಯುವ ಮೂಲಕ ಹಾರಿಸಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಫ್ಲ್ಯಾಗ್ ಅನ್ ಫರ್ಲಿಂಗ್ ಎಂದು ಕರೆಯಲಾಗುತ್ತದೆ.
ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಧ್ವಜಾರೋಹಣ ಮಾಡುತ್ತಾರೆ, ಏಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನದಲ್ಲಿ ಭಾರತದ ಸಂವಿಧಾನವು ಜಾರಿಗೆ ಬರಲಿಲ್ಲ. ರಾಷ್ಟ್ರಪತಿಗಳು (ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರು) ಅಲ್ಲಿಯವರೆಗೆ ಅಧಿಕಾರ ವಹಿಸಿಕೊಂಡಿರಲಿಲ್ಲ.ಹೀಗಾಗಿ, ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ಪ್ರಧಾನಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ.
ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ದೇಶದಲ್ಲಿ ಸಂವಿಧಾನದ ಅನುಷ್ಠಾನದ ನೆನಪಿಗಾಗಿ ಜನವರಿ 26 ಅನ್ನು ಆಚರಿಸಲಾಗುತ್ತದೆ. ಈ ದಿನ ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ.
ಆಗಸ್ಟ್ 15, 1947 ರಂದು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ್ದರು. ಜನವರಿ 26, 1950 ರಂದು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಧ್ವಜಾರೋಹಣ ಮಾಡಿದ್ದರು. ಅಂದಿನಿಂದ, ಪ್ರತಿ ವರ್ಷ ಆಗಸ್ಟ್ 15 ರಂದು ಪ್ರಧಾನಿ ಮತ್ತು ಜನವರಿ 26 ರಂದು ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ.