ಲವರ್ ವಿನಯ್ ನಿಂದ ಹತ್ಯೆಯಾದ ಹೆಚ್ ಆರ್ ಮ್ಯಾನೇಜರ್  
ದೇಶ

ಆಗ್ರಾದಲ್ಲಿ ಪೈಶಾಚಿಕ ಕೃತ್ಯ: ಲವರ್ ನಿಂದ 'ಹೆಚ್ ಆರ್ ಮ್ಯಾನೇಜರ್' ಹತ್ಯೆ, ದೇಹವನ್ನು ತುಂಡಾಗಿಸಿ, ತಲೆಯನ್ನು ಚರಂಡಿಗೆ ಎಸೆದ ಕಟುಕ!

ವಿನಯ್ ಮಿಂಕಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಆಕೆ ನಿರಾಕರಿಸಿದ್ದಾರೆ. ಇದು ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ವಾಗ್ವಾದದ ನಂತರ ತೆಂಗಿನಕಾಯಿ ಕತ್ತರಿಸಲು ಬಳಸುವ ಚಾಕುವಿನಿಂದ ಪದೇ ಪದೇ ಚುಚ್ಚಿದ್ದು, ಆಕೆಯ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ

ಆಗ್ರಾ (ಯುಪಿ): ಉತ್ತರ ಪ್ರದೇಶದ ಆಗ್ರಾದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. 30 ವರ್ಷದ ವ್ಯಕ್ತಿಯೊಬ್ಬ HR ಮ್ಯಾನೇಜರ್ ಆಗಿದ್ದ ತನ್ನ ಲವರ್ ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ತಲೆಯನ್ನು ಚೀಲವೊಂದರಲ್ಲಿ ಕಾಲುವೆಗೆ ಎಸೆದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ತಲೆಯ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿ ಹತ್ಯೆಯಾದ ಯುವತಿಯನ್ನು ಮಿಂಕಿ ಶರ್ಮಾ (30) ಎಂದು ಗುರುತಿಸಲಾಗಿದೆ. ಆಗ್ರಾದ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಹೆಚ್ ಆರ್ ಮ್ಯಾನೇಜರ್ ಆಗಿದ್ದರು. ಅದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ತಿಳಿದುಬಂದಿದೆ ಎಂದು ಡಿಸಿಪಿ (ನಗರ) ಸೈಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ.

ವಿನಯ್ ಮಿಂಕಿಯನ್ನು ಮದುವೆಯಾಗಲು ಬಯಸಿದ್ದ, ಆದರೆ ಆಕೆ ನಿರಾಕರಿಸಿದ್ದಾರೆ. ಇದು ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ವಾಗ್ವಾದದ ನಂತರ ತೆಂಗಿನಕಾಯಿ ಕತ್ತರಿಸಲು ಬಳಸುವ ಚಾಕುವಿನಿಂದ ಪದೇ ಪದೇ ಚುಚ್ಚಿದ್ದು, ಆಕೆಯ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಪಾರ್ಸೆಲ್ ಟೇಪ್‌ನಿಂದ ಮುಚ್ಚಿದ್ದಾನೆ. ತಲೆಯನ್ನು ಪ್ರತ್ಯೇಕ ಗೋಣಿಚೀಲದಲ್ಲಿ ಇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 24 ರ ತಡರಾತ್ರಿ ಈ ಘಟನೆ ನಡೆದಿದ್ದು, ತದನಂತರ ಆರೋಪಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಯಮುನಾ ನದಿಗೆ ಎಸೆಯಲು ಹೊರಟಿದ್ದಾನೆ. ಆದರೆ ಅದನ್ನು ಸೇತುವೆಯ ಮೇಲೆ ಬಿಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತುಂಡು ತುಂಡಾಗಿದ್ದ ತಲೆಯನ್ನು ಕಪ್ಪು ಪ್ಯಾಕೆಟ್‌ನಲ್ಲಿಟ್ಟು ಕಾಲುವೆಯಲ್ಲಿ ಎಸೆದಿದ್ದು, ಅದನ್ನು ಪತ್ತೆ ಹಚ್ಚಲು ಮುಳುಗು ತಜ್ಞರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹಲವು ಸಿಸಿಟಿವಿ ದೃಶ್ಯಗಳು ಮತ್ತು ಕಚೇರಿಯಲ್ಲಿ ದೊರೆತ ಪುರಾವೆಗಳ ಆಧಾರದ ಮೇಲೆ ಪೊಲೀಸರು ಜನವರಿ 25 ರಂದು ವಿನಯ್‌ನನ್ನು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103 (1) (ಕೊಲೆ) ಮತ್ತು 238 (ಅಪರಾಧದ ಪುರಾವೆಗಳು ಕಣ್ಮರೆಯಾಗುವುದು ಅಥವಾ ಅಪರಾಧವನ್ನು ತೆರೆಯಲು ತಪ್ಪು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧಕ್ಕೆ ಬಳಸಿದ ಚಾಕು ಮತ್ತು ಸ್ಕೂಟರ್ ಮತ್ತು ಬಟ್ಟೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Baramati plane crash: ಅಜಿತ್ ಪವಾರ್ ಸಾವು; ವಿಮಾನ ಅಪಘಾತ ಬ್ಯೂರೋದಿಂದ ತನಿಖೆ

ಅಜಿತ್ ಪವಾರ್ ಸಾವು: ಇತರ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ, 'ಸುಪ್ರೀಂ' ಮೇಲ್ವಿಚಾರಣೆಯಲ್ಲಿ ವಿಮಾನ ಪತನ ತನಿಖೆಗೆ ಮಮತಾ ಆಗ್ರಹ

ಬೆಂಗಳೂರು: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ. ಚಿನ್ನಾಭರಣ ಕದ್ದು ಮನೆಗೆಲಸದ ದಂಪತಿ ಪರಾರಿ!

EU ವ್ಯಾಪಾರ ಒಪ್ಪಂದದಲ್ಲಿ ಭಾರತ 'ಬಿಗ್ ವಿನ್ನರ್': ಅಮೆರಿಕ ಒಪ್ಪಿಕೊಳ್ತಾ?

'ನನ್ನ ಸರ್ಕಾರ ನಿಜವಾದ ಸಾಮಾಜಿಕ ನ್ಯಾಯಕ್ಕೆ ಬದ್ಧ': ಸಂಸತ್ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

SCROLL FOR NEXT