ಅಜಿತ್ ಪವಾರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್(ಸಂಗ್ರಹ ಚಿತ್ರ) 
ದೇಶ

ಯಾರು ಈ ಕ್ಯಾಪ್ಟನ್ ಶಾಂಭವಿ ಪಾಠಕ್? ಮಹಾರಾಷ್ಟ್ರ DCM ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನದಲ್ಲಿ ಅಂತ್ಯ ಕಂಡ ಪೈಲಟ್!

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಟೇಕ್ ಆಫ್ ಆದ ವಿಮಾನ ಪುಣೆಯ ಬಾರಾಮತಿಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪತನಗೊಂಡು ಬೆಂಕಿ ಹತ್ತಿಕೊಂಡು ಉರಿದು ಅದರೊಳಗಿದ್ದವರು ಸಜೀವ ದಹನಗೊಂಡಿದ್ದಾರೆ.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಮಹಾರಾಷ್ಟ್ರದ ಬಾರಾಮತಿಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಟೇಕ್ ಆಫ್ ಆದ ವಿಮಾನ ಪುಣೆಯ ಬಾರಾಮತಿಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪತನಗೊಂಡು ಬೆಂಕಿ ಹತ್ತಿಕೊಂಡು ಉರಿದು ಅದರೊಳಗಿದ್ದವರು ಸಜೀವ ದಹನಗೊಂಡಿದ್ದಾರೆ. ಅಜಿತ್ ಪವಾರ್ ಜೊತೆಗೆ, ಅವರ ಪಿಎಸ್ಒ, ಪೈಲಟ್‌ಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ಪೈಲಟ್‌ಗಳಲ್ಲಿ ಒಬ್ಬರು ಕ್ಯಾಪ್ಟನ್ ಶಾಂಭವಿ ಪಾಠಕ್.

ಯಾರು ಈ ಶಾಂಭವಿ ಪಾಠಕ್?

ದುರದೃಷ್ಟಕರ ಲಿಯರ್‌ಜೆಟ್ 45 ರ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ಆಗಿದ್ದವರು ಶಾಂಭವಿ ಪಾಠಕ್. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ದುರಂತವಾಗಿ ಪ್ರಾಣ ಕಳೆದುಕೊಂಡ ಐವರಲ್ಲಿ ಒಬ್ಬರು.

ಲಿಂಕ್ಡ್‌ಇನ್ ಸೋಷಿಯಲ್ ಮೀಡಿಯಾ ಸೈಟ್ ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಶಾಂಭವಿ ಪಾಠಕ್ ವಾಯುಪಡೆಯ ಬಾಲ ಭಾರತಿ ಶಾಲೆಯಲ್ಲಿ ಅಧ್ಯಯನ ಮಾಡಿದರು, ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಬಿಎಸ್ಸಿ, ಏರೋನ್ಯೂಟಿಕ್ಸ್/ಏವಿಯೇಷನ್/ಏರೋಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ಪದವಿ ಪಡೆದರು, ನಂತರ ನ್ಯೂಜಿಲೆಂಡ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ಪ್ರವೇಶ ಪಡೆದುಕೊಂಡಿದ್ದರು.

ಶಾಂಭವಿ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ಸುಮಿತ್ ಕಪೂರ್ ಜೊತೆಗೆ ವಿಮಾನದಲ್ಲಿ ಕರ್ತವ್ಯನಿರತರಾಗಿದ್ದರು. ದೆಹಲಿ ಮೂಲದ ಚಾರ್ಟರ್ ಸಂಸ್ಥೆ ವಿಎಸ್ಆರ್ ನಿರ್ವಹಿಸುತ್ತಿದ್ದ ವಿಮಾನದಲ್ಲಿ ಅಜಿತ್ ಪವಾರ್ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿ ವಿಧಿತ್ ಜಾಧವ್ ಮತ್ತು ಸಹಾಯಕ ಪಿಂಕಿ ಮಾಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದರು.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಜೊತೆಗೆ, ವಿಮಾನದ ಪೈಲಟ್ ಆಗಿದ್ದ ಯುವ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಕೂಡ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರು ಒಬ್ಬ ಅದ್ಭುತ ವಿದ್ಯಾರ್ಥಿನಿ, ಒಳ್ಳೆಯ ಮಗಳು, ಪ್ರೀತಿಯ ಸಹೋದರಿ ಮತ್ತು ತುಂಬಾ ಒಳ್ಳೆಯ ಸ್ನೇಹಿತೆಯಾಗಿದ್ದರು. ಆಕೆ ನನ್ನ ಮಗಳ ಸ್ನೇಹಿತೆಯಾಗಿರುವುದರಿಂದ ನನಗೆ ತುಂಬಾ ದುಃಖವಾಗಿದೆ ಎಂದು ಸುಧೀರ್ ಎನ್ನುವವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ: DCM ಅಜಿತ್‌ ಪವಾರ್‌ ಸೇರಿ ಐದು ಮಂದಿ ದುರ್ಮರಣ; Video

ವೈರಲ್ ಆಗುತ್ತಿದೆ ವಿಮಾನ ಪತನದ ಕೆಲವೇ ಗಂಟೆಗಳ ಮೊದಲು ಅಜಿತ್ ಪವಾರ್ ಹಂಚಿಕೊಂಡ ಕೊನೆಯ X ಪೋಸ್ಟ್ !

Baramati plane crash: ಅಜಿತ್ ಪವಾರ್ ಸಾವು; ವಿಮಾನ ಅಪಘಾತ ತನಿಖಾ ಬ್ಯೂರೋದಿಂದ ತನಿಖೆ

ಅಜಿತ್ ಪವಾರ್ ಸಾವು ಆಘಾತಕಾರಿ: ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು; ಡಿ.ಕೆ. ಶಿವಕುಮಾರ್

ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣ: ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್‌ ಮಮ್‌ಕೂತಥಿಲ್‌‌ಗೆ ಜಾಮೀನು

SCROLL FOR NEXT