ಮುಸ್ಕಾನ್ ಸೋನಿ ಮತ್ತು ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ 
ದೇಶ

Ketan Agarwal ಹತ್ಯೆ ಕುರಿತು ಅವಹೇಳನಕಾರಿ ವಿಡಿಯೋ: ಮುಸ್ಕಾನ್ ಸೋನಿ ಅಮಾನತು, ಕೊನೆಗೂ ಕ್ಷಮೆ ಕೇಳಿದ ದಂತ ವೈದ್ಯೆ!

ಮೃತ ಕೇತನ್ ಅಗರ್ವಾಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಮುಸ್ಕಾನ್ ಸೋನಿಯನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ.

ಪುಣೆ: ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮತ್ತು ಅಪಹಾಸ್ಯ ಮಾಡಿ ವಿಡಿಯೋ ಮಾಡಿದ್ದ ದಂತ ವೈದ್ಯೆ ಮುಸ್ಕಾನ್ ಸೋನಿ ಎಂಬಾಕೆಯನ್ನು 5 ವರ್ಷ ಅಮಾನತುಗೊಳಿಸಲಾಗಿದೆ.

ಹೌದು.. ಮೃತ ಕೇತನ್ ಅಗರ್ವಾಲ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಮುಸ್ಕಾನ್ ಸೋನಿಯನ್ನು ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ದಂತ ಶಸ್ತ್ರಚಿಕಿತ್ಸಕರ ಸಂಘ (AIDSA) ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ.

ಮುಸ್ಕಾನ್ ಸೋನಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮೃತ ಕೇತನ್ ಅಗರ್ವಾಲ್ ಬಗ್ಗೆ ಅವಹೇಳನಕಾರಿ ಹಾಗೂ ಅಸಂವೇದನಾಶೀಲವಾಗಿ ಮಾತನಾಡಿರುವುದಾಗಿ ಹಲವರು ಟೀಕಿಸಿದ್ದರು.

ಈ ಪ್ರಕರಣ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ದಂತ ವೈದ್ಯೆಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ದಂತ ಶಸ್ತ್ರಚಿಕಿತ್ಸಕರ ಸಂಘ (AIDSA) 5 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ.

ಕೊನೆಗೂ ಕ್ಷಮೆಯಾಚನೆ

ಇನ್ನು ಈ ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ನಡೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ ಇತ್ತ ಮುಸ್ಕಾನ್ ಸೋನಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವ ಮುಸ್ಕಾನ್ ಸೋನಿ ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ್ದು, ಕೇತನ್ ಅಗರ್ವಾಲ್ ಅವರ ಕುಟುಂಬ ಸದಸ್ಯರು ಹಾಗೂ ತಮ್ಮ ಮಾತಿನಿಂದ ನೋವಾಗಿರುವ ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಆದಾಗ್ಯೂ, ಅವರ ಕ್ಷಮಾಪಣೆಯನ್ನು ಪರಿಗಣಿಸಿದರೂ, ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ದಂತ ಶಸ್ತ್ರಚಿಕಿತ್ಸಕರ ಸಂಘವು ಐದು ವರ್ಷಗಳ ಅಮಾನತು ಶಿಕ್ಷೆಯನ್ನು ಮುಂದುವರಿಸಿದೆ. ವೃತ್ತಿಪರ ನೈತಿಕತೆ, ಸಂಘದ ಮೌಲ್ಯಗಳು ಹಾಗೂ ದಂತ ವೈದ್ಯಕೀಯ ವೃತ್ತಿಯ ಘನತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.

ಅಸಂವೇದನಾಶೀಲ ನಡವಳಿಕೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೃತ್ತಿಪರರು ಮಾಡುವ ಹೇಳಿಕೆಗಳ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಪರಿಶೀಲನೆ ಮತ್ತು ಹೊಣೆಗಾರಿಕೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಅಸಂವೇದನಾಶೀಲ ಅಥವಾ ಅನೈತಿಕವೆಂದು ಪರಿಗಣಿಸಲ್ಪಡುವ ವರ್ತನೆಗಳ ವಿರುದ್ಧ ವೃತ್ತಿಪರ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಈ ಘಟನೆಯಿಂದ ಸ್ಪಷ್ಟವಾಗಿದೆ.

ಇದೇ ವೇಳೆ, ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿರುವ ಪೊಲೀಸರು, ಕೊಲೆ ಮತ್ತು ಸಂಚು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!