ಕಪಿಲ್ ಸಿಬಲ್ 
ದೇಶ

ಭಗವಾನ್ ರಾಮನನ್ನೇ 'ಲೂಟಿ' ಮಾಡಿದ 'ಫಾರ್ಜಿ ಹಿಂದೂಗಳು': BJP, VHP, ಬಜರಂಗ ದಳವನ್ನು ಟೀಕಿಸಿದ ಕಪಿಲ್ ಸಿಬಲ್

ತಪ್ಪಿತಸ್ಥರೆಂದು ಸಾಬೀತಾದವರಿಗೆ ಮಾದರಿಯಾಗುವಂತಹ ಶಿಕ್ಷೆಯನ್ನು ವಿಧಿಸಲಾಗುವುದು ಮತ್ತು ತ್ವರಿತ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನವದೆಹಲಿ: ರಾಮ ಮಂದಿರ ದೇಣಿಗೆ ದುರುಪಯೋಗದ ಆರೋಪದ ಮೇಲೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಗುರುವಾರ ಬಿಜೆಪಿ, ಬಜರಂಗದಳ ಮತ್ತು ವಿಎಚ್‌ಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು ಭಗವಾನ್ ರಾಮನನ್ನೇ 'ಲೂಟಿ' ಮಾಡಿದ 'ಫಾರ್ಜಿ ಹಿಂದೂಗಳು' ಎಂದು ಕರೆದಿದ್ದಾರೆ.

ಹಿರಿಯ ವಕೀಲರಾದ ಸಿಬಲ್, ಆ ಸಂಘಟನೆಗಳು ಶ್ರೀರಾಮನ ಹೆಸರಿನಲ್ಲಿ ಮತ ಯಾಚಿಸಿದವು ಎಂದು ಆರೋಪಿಸಿದರು.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಬಲ್, 'VHP, BJP, Bajrang Dal - 'ರಾಮ್ ಕೆ ನಾಮ್ ಪೆ ವೋಟ್ ತೋ ಲೇಂಗೆ, ಫಿರ್ ರಾಮ್ ಕೋ ಹಿ ವೋ ಲೂಟೇಂಗೆ (ಅವರು ರಾಮನ ಹೆಸರಿನಲ್ಲಿ ಮತಗಳನ್ನು ಕೇಳುತ್ತಾರೆ ಮತ್ತು ನಂತರ ರಾಮನನ್ನೇ ಲೂಟಿ ಮಾಡುತ್ತಾರೆ). ಅಸ್ಲಿ ಹಿಂದೂ ಯೇ ಕ್ಯಾ ಜಾನೆ, ಯೇ ತೋ ಫರ್ಜಿ ಹಿಂದೂ ಹೈ (ನಿಜವಾದ ಹಿಂದೂಗಳ ಬಗ್ಗೆ ಅವರಿಗೆ ಏನು ಗೊತ್ತು, ಅವರು ನಕಲಿ ಹಿಂದೂಗಳು)' ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವು (SIT) ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ನಂತರ ದೇಣಿಗೆ ದುರುಪಯೋಗ ಪ್ರಕರಣ ಬೆಳಕಿಗೆ ಬಂದಿತು; ಇದರ ಬೆನ್ನಲ್ಲೇ ಜೂನ್ 25 ರಂದು ಎಫ್‌ಐಆರ್ (FIR) ದಾಖಲಿಸಲಾಯಿತು.

ನಂತರ ಎಂಟು ಆರೋಪಿಗಳನ್ನು ಬಂಧಿಸಲಾಯಿತು ಮತ್ತು ಅವರ ಪೈಕಿ ಆರು ಮಂದಿಯಿಂದ ಸುಮಾರು ₹80 ಲಕ್ಷ ರೂಪಾಯಿ ನಗದು ಹಾಗೂ ಸ್ವಲ್ಪ ವಿದೇಶಿ ಕರೆನ್ಸಿಯನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ತನಿಖೆ ಮುಂದುವರಿದಿದೆ. ತಪ್ಪಿತಸ್ಥರೆಂದು ಸಾಬೀತಾದವರಿಗೆ ಮಾದರಿಯಾಗುವಂತಹ ಶಿಕ್ಷೆಯನ್ನು ವಿಧಿಸಲಾಗುವುದು ಮತ್ತು ತ್ವರಿತ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಪ್ರಕರಣವು ಕಾನೂನಿನ ಪ್ರಕಾರವೇ ಮುಂದುವರಿಯಲಿದೆ ಎಂದು ಬಿಜೆಪಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!