ದೇಶ

ಅರೆಂಜ್ ಮ್ಯಾರೇಜ್‌ ತಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡ ಯುವತಿ; ವಿಡಿಯೋ ವೈರಲ್​!

"ನನ್ನ ತಾಯಿ ನನಗೆ ಮದುವೆ ಮಾಡಲು ಯೋಜಿಸಿದ್ದರು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವ್ಯಾಪಕ ಗಮನ ಸೆಳೆದಿದೆ.

ಯುವತಿಯೊಬ್ಬಳು ಅರೆಂಜ್ ಮ್ಯಾರೇಜ್ ಕಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.

ಸ್ವತಃ ಯುವತಿಯೇ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಿತ್ರ ಘಟನೆಯ ವಿಡಿಯೋ ಹಂಚಿಕೊಂಡಿದ್ದಾರೆ. ಕೀರ್ತನಾ ಮೆನನ್ ಎಂಬ ಯುವತಿ ಕ್ಷೌರಿಕನ ಕುರ್ಚಿಯಲ್ಲಿ ಕುಳಿತು ತಮ್ಮ ಉದ್ದನೆಯ ಕೂದಲನ್ನು ಸಂಪೂರ್ಣವಾಗಿ ನುಣ್ಣಗೆ ಬೋಳಿಸಿಕೊಂಡಿದ್ದಾರೆ.

ಕೀರ್ತನಾ ಮೆನನ್​ ಎಂಬ ಯುವತಿ ಹಂಚಿಕೊಂಡಿರುವ ವಿಡಿಯೋನಲ್ಲಿ, ಆಕೆಯ ಮನೆಯಲ್ಲಿ ಅರೆಂಜ್​ ಮ್ಯಾರೇಜ್​ ಮಾಡುವ ಯೋಜನೆ ರೂಪಿಸಿದ್ದರಂತೆ. ಆದರೆ ಈ ಮದುವೆ ಕೀರ್ತನಾಗೆ ಇಷ್ಟವಿರದ ಕಾರಣ, ಆಕೆ ತನ್ನ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ.

"ನನ್ನ ತಾಯಿ ನನಗೆ ಮದುವೆ ಮಾಡಲು ಯೋಜಿಸಿದ್ದರು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವ್ಯಾಪಕ ಗಮನ ಸೆಳೆದಿದೆ. ಕ್ಲಿಪ್‌ನಾದ್ಯಂತ, ಕ್ಷೌರಿಕ ತಲೆಯನ್ನು ಬೋಳಿಸಿಕೊಳ್ಳುತ್ತಿರುವಾಗ ಕೀರ್ತನಾ ಸಂಯಮದಿಂದ ಕೂಳಿತಿದ್ದು, ಒಂದು ಲೈನ್ ಶೀರ್ಷಿಕೆಯನ್ನು ಬಿಟ್ಟು ಬೇರೆ ಯಾವುದೇ ವಿವರಣೆಯನ್ನು ನೀಡಿಲ್ಲ.

ಕೀರ್ತನಾಳ ತಲೆ ಬೋಳಿಸಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.

ಕೆಲವರು ಈ ಯುವತಿ ತನ್ನ ತಲೆ ಕೂದಲನ್ನೇ ತೆಗೆಸಿಕೊಂಡಿದ್ದಾಳೆಂದರೆ ಮನೆಯಲ್ಲಿ ಮದುವೆ ಬಗ್ಗೆ ಎಷ್ಟು ಹಿಂಸೆ ಮಾಡಿದ್ದಾರೆಂದು ತಿಳಿಯುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ತನಗೆ ಮದುವೆ ಬೇಡ ಎಂದು ತನ್ನ ಹೆತ್ತವರನ್ನೇ ಒಪ್ಪಿಸಲಾಗದವಳು, ಸಂಸಾರವನ್ನು ಹೇಗೆ ಮಾಡುವಳೋ? ಎಂದು ಕೀರ್ತನಾಳ ನಡೆಯನ್ನು ಪ್ರಶ್ನಿಸಿದ್ದಾರೆ.

ಮದುವೆ ಎನ್ನುವುದು ಕೇವಲ ಸಂಪ್ರದಾಯ ಮಾತ್ರವಲ್ಲ, ಇದು ನಿಸರ್ಗದ ನಿಯಮ. ಇಕೆ ತಲೆ ಬೋಳಿಸಿಕೊಳ್ಳುವುದು, ಬಿಡುವುದು ಆಕೆಯ ವೈಯಕ್ತಿಕ ಅಭಿಪ್ರಾಯ. ಆದರೆ ಎಲ್ಲರೂ ಇಕೆಯಂತೆ ಮದುವೆ ಬೇಡ ಎಂದರೆ, ಮಾನವ ಸಂಕುಲದ ನಾಶ ಖಂಡಿತ ಎಂದು ಮತ್ತೊಬ್ಬರು ನೀತಿ ಪಾಠವನ್ನು ಬೋಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ