ಸಾಂದರ್ಭಿಕ ಚಿತ್ರ 
ದೇಶ

ವಾಹನ ಸವಾರರಿಗೆ ಗುಡ್ ನ್ಯೂಸ್: E20 ಪೆಟ್ರೋಲ್‌ನಿಂದ ಎಂಜಿನ್ ಹಾಳಾಗಲ್ಲ, ಮೈಲೇಜೂ​ ಕಮ್ಮಿಯಾಗಲ್ಲ; IIT ಸಂಶೋಧನೆ

ಕಳೆದ ವಾರ ಇಂಧನ ಸಚಿವಾಲಯವು, E20 ಬಳಕೆಯಿಂದ ಕೆಲವು ವಾಹನಗಳಲ್ಲಿ ಮೈಲೇಜ್ ಅನ್ನು ಶೇಕಡಾ 5 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿತ್ತು.

ಕಾನ್ಪುರ: ದೇಶದಲ್ಲಿ E20 ಪೆಟ್ರೋಲ್(ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್) ಮಾರಾಟ ಕಡ್ಡಾಯ ಮಾಡುವುದಕ್ಕೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅದರಿಂದ ಎಂಜಿನ್ ಹಾಳಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿರುವ ಐಐಟಿ ಕಾನ್ಪುರದ ಸಂಶೋಧಕರು, ತಮ್ಮ ಅಧ್ಯಯನಗಳು ಇಂಧನ ದಕ್ಷತೆಯಲ್ಲಿ ಯಾವುದೇ ಗಮನಾರ್ಹ ಕುಸಿತವನ್ನು ತೋರಿಸಿಲ್ಲ ಮತ್ತು E20 ಎಂಜಿನ್‌ಗಳಿಗೆ ಹಾನಿ ಮಾಡುತ್ತದೆ ಎಂಬುದಕ್ಕೆ 'ಯಾವುದೇ ಪುರಾವೆ ಇಲ್ಲ' ಎಂದು ಹೇಳಿದ್ದಾರೆ.

ಕಳೆದ ವಾರ ಇಂಧನ ಸಚಿವಾಲಯವು, E20 ಬಳಕೆಯಿಂದ ಕೆಲವು ವಾಹನಗಳಲ್ಲಿ ಮೈಲೇಜ್ ಅನ್ನು ಶೇಕಡಾ 5 ರಷ್ಟು ಕಡಿಮೆ ಮಾಡಬಹುದು ಎಂದು ಸ್ಪಷ್ಟಪಡಿಸಿದ ನಂತರ ಈ ಸಂಶೋಧನಾ ವರದಿ ಬಂದಿದೆ.

ಐಐಟಿ ಕಾನ್ಪುರದಿಂದ E20 ಸಂಶೋಧನೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಂಜಿನ್ ಸಂಶೋಧನಾ ಪ್ರಯೋಗಾಲಯದ ಯೋಜನಾ ವಿಜ್ಞಾನಿ ಧ್ರುವ್ ರಾಜ್ ಕರಣಾ ಅವರು, E20 ಪೆಟ್ರೋಲ್​ ಬಳಕೆಯಿಂದ ಎಂಜಿನ್​ ದಕ್ಷತೆಗೆ ಯಾವುದೇ ಪೆಟ್ಟು ಬೀಳುವುದಿಲ್ಲ ಎಂದು ಹೇಳಿದ್ದಾರೆ.

ಶೇ.5ರಷ್ಟು ಮೈಲೇಜ್​ ಕಡಿಮೆಯಾಗಲಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಶುದ್ಧ ಪೆಟ್ರೋಲ್​ ಬಳಕೆಯಲ್ಲೂ ಹೀಗೆ ಆಗುತ್ತದೆ. ವಾಹನದ ಬಳಕೆ ರೀತಿ ಮತ್ತು ಅದರ ದಕ್ಷತೆಯಿಂದಾಗಿ ಮೈಲೇಜ್​ ಇಳಿಕೆಯಾಗುತ್ತದೆಯೇ ಹೊರತು, E20 ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

E20 ಇಂಧನದಿಂದ ಎಂಜಿನ್​​ಗೆ ಹಾನಿ, ತುಕ್ಕು ಅಥವಾ ಇತರ ತಾಂತ್ರಿಕ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ನಮ್ಮ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಕರಣಾ ಹೇಳಿದ್ದಾರೆ.

E20 ಇಂಧನ ವಾಹನಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ವದಂತಿಗಳಿಗೆ ಯಾವುದೇ ವೈಜ್ಞಾನಿಕವಾಗಿ ಆಧಾರಗಳಿಲ್ಲ. ಪರಿಶೀಲಿಸದ ಆನ್‌ಲೈನ್ ಪೋಸ್ಟ್‌ಗಳ ಬದಲಿಗೆ ವಾಹನ ಚಾಲಕರು ತಮ್ಮ ವಾಹನ ತಯಾರಕರ ಕೈಪಿಡಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆದಿಚುಂಚನಗಿರಿ ಮಠಕ್ಕೆ ಸೇರಿದ 100 ಕೋಟಿ ರೂ. ಮೌಲ್ಯದ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ: 6 ಸರ್ಕಾರಿ ಅಧಿಕಾರಿಗಳು ಸೇರಿ 11 ಜನರ ಬಂಧನ!

968 ದಿನಗಳ ಬಳಿಕ ಐತಿಹಾಸಿಕ ತ್ರಿವಳಿ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ; ಈ ಸಾಧನೆ ಮಾಡಿದ ಜಗತ್ತಿನ 3ನೇ ಬೌಲರ್!

ಸೇಲ್ ಆಗದೇ ಉಳಿದಿದ್ದ ಕೊನೆ ಟಿಕೆಟ್‌ನಿಂದ ಖುಲಾಯಿಸ್ತು ಅದೃಷ್ಟ! ಮೈ ತುಂಬಾ ಸಾಲ ಮಾಡಿಕೊಂಡಿದ್ದ ರೈತನಿಗೆ ಜಾಕ್‌ಪಾಟ್!

ಪುಟ್ಬಾಲ್ ಪ್ರೇಮಿಗಳಿಗೆ ಗುಡ್ ನ್ಯೂಸ್: Fifa Worldcup ಅಂತಿಮ ಪಂದ್ಯಗಳಿಗೆ ಬೆಳಗಿನ ಜಾವ 3.30ರವರೆಗೆ ಹೋಟೆಲ್, ರೆಸ್ಟೋರೆಂಟ್ ಓಪನ್!

ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುವವರನ್ನು ಸುಮ್ಮನೆ ಬಿಡಬಾರದು; ಆಮಿರ್ ಖಾನ್ ಕೊಂದವರಿಗೆ' 5 ಕೋಟಿ' ರೂ. ಬಹುಮಾನ ಘೋಷಿಸಿದ ಜಗದ್ಗುರು ಪರಮಹಂಸ! Video