ಕೋಝಿಕ್ಕೋಡ್ (ಕೇರಳಂ): 2026ನೇ ಸಾಲಿನ ಫಿಫಾ ವಿಶ್ವಕಪ್ ಫೈನಲ್ ಮುಗಿದಿದೆ. ಅದ್ರಂತೆ, ಸ್ಪೇನ್ ತಂಡವು ಅರ್ಜೆಂಟೀನಾವನ್ನು 1–0 ಗೋಲುಗಳ ಅಂತರದಿಂದ ಸೋಲಿಸಿ ಜಾಗತಿಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಸ್ಪೇನ್ ಮುಡಿಗೇರಿಸಿಕೊಂಡ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಆದ್ರೆ, ನಮ್ಮ ಪಕ್ಕದ ರಾಜ್ಯ ಕೇರಳಂನಲ್ಲಿ ಅರ್ಜೆಂಟೀನಾ ಫೈನಲ್ ಪ್ರವೇಶಕ್ಕೂ ಮುನ್ನ ಬ್ರೆಜಿಲ್ ಜೊತೆಗಿನ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ವಾಗ್ವಾದ ನಡೆಡಿದ್ದು, ಹಿಂಸಾಚಾರಕ್ಕೆ ಕಾರಣರಾದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ವಿಶ್ವಕಪ್ 2026 ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿ ಬ್ರೆಜಿಲ್ ತಂಡದ ಸೋಲಿನ ನಂತರ ಎರಡೂ ತಂಡಗಳ ಅಭಿಮಾನಿಗಳ ನಡುವೆ ಮೆಸೇಜ್ ಮೂಲಕವೇ ವಾಗ್ವಾದ ನಡೆದಿತ್ತು. ಈ ವಾಗ್ವಾದದ ಮುಂದುವರಿದ ಭಾಗವಾಗಿ, ಜುಲೈ 16 ರಂದು ರಾತ್ರಿ 10:30 ರ ಸುಮಾರಿಗೆ ಅರ್ಜೆಂಟೀನಾ ಅಭಿಮಾನಿಗಳು ಬ್ರೆಜಿಲ್ ಬೆಂಬಲಿಗನ ಬಾಡಿಗೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ.
ಬ್ರೆಜಿಲ್ ಅಭಿಮಾನಿಯಾದ 22 ವರ್ಷದ ಮುಹಮ್ಮದ್ ಶಾನಿಸ್ ಮತ್ತು ಆತನ ಸ್ನೇಹಿತನಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ, ಮನೆಯ ಹೊರಗೆ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳನ್ನು ಮತ್ತು ಮನೆಯ ಕಿಟಕಿ ಗಾಜುಗಳನ್ನು ಪುಡಿಮಾಡಲಾಗಿದ್ದು, ಸುಮಾರು ₹25,000 ದಷ್ಟು ಆಸ್ತಿ ಹಾನಿ ಮಾಡಲಾಗಿದೆ. ಘಟನೆ ನಡೆದ ನಂತರ ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತರಿಗೆ ದಾಳಿಕೋರರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮುಂದುವರೆದು, ಪ್ರಕರಣ ದಾಖಲಿಸಿಕೊಂಡ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರು ಅರ್ಜೆಂಟೀನಾ ಅಭಿಮಾನಿಗಳಾದ ನಿಖಿಲ್ ಮತ್ತು ರೆಂಜಿತ್ ಎಂಬುವವರ ವಿರುದ್ಧ ಕೇಸ್ ಹಾಕಲಾಗಿದೆ. ಆದರೆ, ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಪೊಲೀಸರು ಇನ್ನು ಯಾರನ್ನೂ ಬಂಧಿಸಿಲ್ಲ.