ಸಾಂದರ್ಭಿಕ ಚಿತ್ರ 
ದೇಶ

ಹಳಿ ತಪ್ಪಿದ ಗೂಡ್ಸ್ ರೈಲು; ಸಂಚಾರ ಭಾರೀ ಅಸ್ತವ್ಯಸ್ತ: 85ಕ್ಕೂ ಹೆಚ್ಚು ರೈಲುಗಳು ರದ್ದು, ಮಾರ್ಗ ಬದಲಾವಣೆ!

ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಭಾರತೀಯ ರೈಲ್ವೆ 85ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ ಎಂದು ಉತ್ತರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ(ಸಿಪಿಆರ್‌ಒ) ಹಿಮಾಂಶು ಶೇಖರ್ ಉಪಾಧ್ಯಾಯ ಅವರು ತಿಳಿಸಿದ್ದಾರೆ.

ನವದೆಹಲಿ: ದೆಹಲಿ ವಿಭಾಗದ ಗಾಜಿಯಾಬಾದ್-ನವದೆಹಲಿ ವಿಭಾಗದಲ್ಲಿ ಮಂಗಳವಾರ ಗೂಡ್ಸ್ ರೈಲಿನ ಆರು ವ್ಯಾಗನ್‌ಗಳು ಹಳಿತಪ್ಪಿದ್ದು, ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಭಾರತೀಯ ರೈಲ್ವೆ 85ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ ಎಂದು ಉತ್ತರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ(ಸಿಪಿಆರ್‌ಒ) ಹಿಮಾಂಶು ಶೇಖರ್ ಉಪಾಧ್ಯಾಯ ಅವರು ತಿಳಿಸಿದ್ದಾರೆ.

ಡಿಆರ್‌ಎಂ, ಎಡಿಆರ್‌ಎಂ ಮತ್ತು ಇತರ ಹಿರಿಯ ಅಧಿಕಾರಿಗಳು ರೈಲು ಹಳಿ ತಪ್ಪಿದ ಸ್ಥಳಕ್ಕೆ ಧಾವಿಸಿದ್ದು, ಯಾವುದೇ ಸಾವುನೋವುಗಳು ಅಥವಾ ಗಾಯಗಳ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಘಟನೆಯ ನಂತರ ಹಲವಾರು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಅಥವಾ ನಿಯಂತ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿ-ನವದೆಹಲಿ ಮಾರ್ಗದ ಮೂಲಕ 24 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದ್ದು, 16 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.

ರದ್ದುಗೊಳಿಸಲಾದ ರೈಲುಗಳ ವಿವರ

ರೈಲು ಸಂಖ್ಯೆ 64437 ಗಾಜಿಯಾಬಾದ್- ದೆಹಲಿ

ರೈಲು ಸಂಖ್ಯೆ 64402 ದೆಹಲಿ-ಶಾಹಿಬಾಬಾದ್

ರೈಲು ಸಂಖ್ಯೆ 64411 ಶಹಿಬಾಬಾದ್- ದೆಹಲಿ

ರೈಲು ಸಂಖ್ಯೆ 64408 ದೆಹಲಿ-ಗಾಜಿಯಾಬಾದ್

ರೈಲು ಸಂಖ್ಯೆ 64423 ಗಾಜಿಯಾಬಾದ್-ನವದೆಹಲಿ

ರೈಲು ಸಂಖ್ಯೆ 64430 ನವದೆಹಲಿ-ಗಾಜಿಯಾಬಾದ್

ರೈಲು ಸಂಖ್ಯೆ 64425 ಗಾಜಿಯಾಬಾದ್-ನವದೆಹಲಿ

ರೈಲು ಸಂಖ್ಯೆ 64432 ನವದೆಹಲಿ-ಗಾಜಿಯಾಬಾದ್

ರೈಲು ಸಂಖ್ಯೆ 64417 ಗಾಜಿಯಾಬಾದ್- ದೆಹಲಿ

ರೈಲು ಸಂಖ್ಯೆ 64439 ಗಾಜಿಯಾಬಾದ್-ದೆಹಲಿ

ರೈಲು ಸಂಖ್ಯೆ 64406 ದೆಹಲಿ-ಗಾಜಿಯಾಬಾದ್

ರೈಲು ಸಂಖ್ಯೆ 64401 ಗಾಜಿಯಾಬಾದ್-ದೆಹಲಿ

ರೈಲು ಸಂಖ್ಯೆ 64434 ದೆಹಲಿ-ಗಾಜಿಯಾಬಾದ್

ರೈಲು ಸಂಖ್ಯೆ 64031 ಗಾಜಿಯಾಬಾದ್- ಸಾಹಿಬಾಬಾದ್

ರೈಲು ಸಂಖ್ಯೆ 64536 PNP-DLI

ರೈಲು ಸಂಖ್ಯೆ 64531 DLI-PNP

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ಸೌಜನ್ಯ ಕೇಸ್‌ ಮರು ತನಿಖೆಗೆ ಸುಪ್ರೀಂ ಆದೇಶ: ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದು ಏನು?

ಬೆಳಗಾವಿ: 6 ಮಂದಿ ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್; ವ್ಯಕ್ತಿ ಕೈಯಲ್ಲಿ ಬಕೆಟ್; CCTVಯಲ್ಲಿ ಸಿಕ್ತು ಸ್ಫೋಟಕ ತಿರುವು!

ಏಷ್ಯನ್ ಗೇಮ್ಸ್ 2026: ಎರಡನೇ ದಿನ ನಾಲ್ಕು ಪದಕ ಗೆದ್ದ ಭಾರತ, MMA ಸ್ಪರ್ಧೆಯಲ್ಲಿ ಕಂಚು ಗೆದ್ದು, ಇತಿಹಾಸ ಬರೆದ ಸುಚಿಕಾ ತರಿಯಾಲ್!

ಮಾಗಡಿ: ಚಕ್ರಬಾವಿ ಮರುಳಸಿದ್ದೇಶ್ವರ ಜಂಗಮ ಮಠದ ಸ್ವಾಮೀಜಿ ಲಿಂಗೈಕ್ಯ