ಆಶಿಕ್ ಹುಸೇನ್ 
ದೇಶ

ಅನಂತ್‌ನಾಗ್‌: ಉಗ್ರರಿಂದ ಗುಂಡಿನ ದಾಳಿ; ಪೊಲೀಸ್ ಅಧಿಕಾರಿ ಹುತಾತ್ಮ; ಶೋಧ ಕಾರ್ಯಾಚರಣೆ ಆರಂಭ; Video

ಅನಂತನಾಗ್‌ನ ಲಾಲ್ ಚೌಕ್‌ನಲ್ಲಿ ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದು, ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಆಶಿಕ್ ಹುಸೇನ್ ಅವರು ಹುತಾತ್ಮರಾಗಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಪಟ್ಟಣದಲ್ಲಿ ಬುಧವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತನಾಗ್‌ನ ಲಾಲ್ ಚೌಕ್‌ನಲ್ಲಿ ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದು, ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಆಶಿಕ್ ಹುಸೇನ್ ಅವರು ಹುತಾತ್ಮರಾಗಿದ್ದಾರೆ.

ಗುಂಡಿನ ದಾಳಿಯಲ್ಲಿ ಹುಸೇನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ನಂತರ, ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಲಷ್ಕರ್-ಎ-ತೈಬಾದ ಸಹ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಈ ವರ್ಷ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಮೇಲೆ ನಡೆದ ಮೊದಲ ಉಗ್ರರ ದಾಳಿ ಇದಾಗಿದೆ.

ಜುಲೈ 8 ರಂದು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೈಬಾ ಉಗ್ರ ಝಾಕಿರ್ ಗನೈ ಹತ್ಯೆಯಾದ ಹದಿನೈದು ದಿನಗಳ ನಂತರ ಈ ದಾಳಿ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video