ದಿಯಾ ಮಿರ್ಜಾ  
ದೇಶ

ಇದು ಅಷ್ಟೊಂದು ಕಷ್ಟದ ಕೆಲಸವೇ?, ಬಾಯ್ಬಿಡಲು 47 ದಿನ ಬೇಕಾಯಿತೇ?; ಮೋದಿ ವಿರುದ್ಧ ದಿಯಾ ಮಿರ್ಜಾ ಕಿಡಿ!

ಗುರುವಾರ ಬೆಳಿಗ್ಗೆ 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಲು 'ಫಾಸ್ಟ್-ಟ್ರ್ಯಾಕ್' ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಮೋದಿ ಘೋಷಿಸಿದರು.

ನವದೆಹಲಿ: ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆಯನ್ನು ಪ್ರಶ್ನಿಸಿ ನಟಿ ದಿಯಾ ಮಿರ್ಜಾ ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದ ಬಾಧಿತರಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳು ಜೂನ್ 20 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಗುರುವಾರ ಬೆಳಿಗ್ಗೆ 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಲು 'ಫಾಸ್ಟ್-ಟ್ರ್ಯಾಕ್' ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಮೋದಿ ಘೋಷಿಸಿದರು.

ಆ ವಿಡಿಯೋಗೆ ಪ್ರತಿಕ್ರಿಯೆಯಾಗಿ ಮಿರ್ಜಾ, 'ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರಿಗಾಗಲಿ, ಮೃತಪಟ್ಟ ಮಕ್ಕಳಿಗಾಗಲಿ, ತಮ್ಮ ಹಕ್ಕುಗಳಿಗಾಗಿ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳ ಅಸಾಧಾರಣ ಛಲಕ್ಕಾಗಲಿ ಅಥವಾ ವಾರಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಸೋನಮ್ ಜೀ ಮತ್ತು ವಿದ್ಯಾರ್ಥಿಗಳಿಗಾಗಲಿ... ಇವರಾರ ಬಗ್ಗೆಯೂ ನಿಮ್ಮಲ್ಲಿ ಕಿಂಚಿತ್ತೂ ಸಹಾನುಭೂತಿಯ ಮಾತುಗಳಿಲ್ಲ' ಎಂದು ಅವರು ಬರೆದಿದ್ದಾರೆ.

'ಸರ್, ಇದೇನು ಅಷ್ಟೊಂದು ಕಷ್ಟದ ಕೆಲಸವೇ? ನೀವು ಏನನ್ನಾದರೂ ಹೇಳಲು 47 ದಿನಗಳನ್ನೇ ತೆಗೆದುಕೊಂಡಿರಿ. ಕೊನೆಗೂ ನೀವು ಮಾತನಾಡಿದಾಗಲೂ, ಏನನ್ನೂ ಹೇಳಲಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಒಡೆದಿರುವ ಹೃದಯಗಳಿಗೆ ಸಾಂತ್ವನ ನೀಡುವಂತಹ ಮಾತುಗಳನ್ನಂತೂ ಖಂಡಿತಾ ಆಡಲಿಲ್ಲ' ಎಂದು ಕಿಡಿಕಾರಿದ್ದಾರೆ.

ಮಿರ್ಜಾ ಈ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.

'ನಾನು ಈ ದೇಶದ ವಿದ್ಯಾರ್ಥಿಗಳ ಪರವಾಗಿದ್ದೇನೆ. ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ನಾನು ಬೆಂಬಲಿಸುತ್ತೇನೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸುಧಾರಣೆಗಳಿಗಾಗಿ ಇರುವ ಬೇಡಿಕೆಗೆ ನಾನು ಬೆಂಬಲ ನೀಡುತ್ತೇನೆ' ಎಂದು ಅವರು ತಮ್ಮ ಹಿಂದಿನ ಪೋಸ್ಟ್‌ನಲ್ಲಿ ಬರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

Nepal floods: 4 ಅಂತಸ್ತಿನ ಕಟ್ಟಡದ ಮೇಲೆ ಪ್ರವಾಹದ ರುದ್ರನರ್ತನ, ಸಾವಿನ ಸಂಖ್ಯೆ 1,365ಕ್ಕೆ ಏರಿಕೆ, 5,326 ಮಂದಿ ಇನ್ನೂ ನಾಪತ್ತೆ, ಹೊಸ Video ವೈರಲ್!

ಭಾರತದಲ್ಲೆಲ್ಲೂ ಕಾಣದ ಒರಾಂಗುಟನ್‌ಗಳು ಒಡಿಶಾದ ಅರಣ್ಯದಲ್ಲಿ ಪತ್ತೆ; 5 ಮರಿಗಳ ರಕ್ಷಣೆ, ಕಳ್ಳಸಾಗಣೆ ಶಂಕೆ!

ಯಲ್ಲಾಪುರದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಭಾರೀ ಪ್ರಮಾಣದ ವನ್ಯಜೀವಿ ವಸ್ತುಗಳ ವಶ, ಇಬ್ಬರ ಬಂಧನ! Video

ಸೌದಿ ಮೇಲೆ ಕ್ಷಿಪಣಿ ದಾಳಿ; Houthi ಉಗ್ರರ ವಿರುದ್ಧ ಸಿಡಿದೆದ್ದ ಭಾರತ, 'ನೌಕಾಯಾನ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ದಾಳಿ ಒಪ್ಪಲ್ಲ' ಎಂದು ಗುಡುಗು