ಬಿಟ್‌ಚಾಟ್ - ಮೆಸೇಜಿಂಗ್ ಅಪ್ಲಿಕೇಶನ್ Online Desk
ದೇಶ

ಜಂತರ್ ಮಂತರ್‌ನಲ್ಲಿ CJP ಹೋರಾಟದ ಬೆನ್ನಲ್ಲೇ, Bitchat App ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು?

ಟ್ವಿಟರ್ ಮಾಜಿ ಸಿಇಒ ಜ್ಯಾಕ್ ಡೋರ್ಸಿ ಅಭಿವೃದ್ಧಿಪಡಿಸಿರುವ, ಗಿಟ್‌ಹಬ್ ಒಡೆತನದ ಈ ಬಿಟ್‌ಚಾಟ್ ಎಂಬ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಜುಲೈ 20ರಂದು ರಾಷ್ಟ್ರ ರಾಜಧಾನಿಯಲ್ಲಿ NEET ಪ್ರಶ್ನೆಪತ್ರಿಕೆ ಸೋರಿಕೆ ಕಾರಣ, Cockroach Janata Partyಯ ಹೋರಾಟದ ವೇಳೆ ಕೇಂದ್ರ ಸರ್ಕಾರವು ಜಂತರ್ ಮಂತರ್ ಸುತ್ತಮುತ್ತಲೂ ಇಂಟರ್ನೆಟ್ ನಿಷೇಧ ಮಾಡಿತ್ತು; ಆದರೂ ಕೂಡ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳು ತಮ್ಮ ಸಂವಹನವನ್ನು ಆಪ್ ಮೂಲಕ ಸುಲಭವಾಗಿಯೇ ನಡೆಸಿದರು. ಇದರ ಹಿಂದೆ ಇದ್ದದು ಬಿಟ್‌ಚಾಟ್ ಎಂಬ ಮೆಸೇಜಿಂಗ್ ಅಪ್ಲಿಕೇಶನ್! ಇದರ ಬೆನ್ನೆಲ್ಲೇ ಕೇಂದ್ರ ಸರ್ಕಾರ ಆ ಆಪ್ ಅನ್ನೇ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಟ್ವಿಟರ್ ಮಾಜಿ ಸಿಇಒ ಜ್ಯಾಕ್ ಡೋರ್ಸಿ ಅಭಿವೃದ್ಧಿಪಡಿಸಿರುವ, ಗಿಟ್‌ಹಬ್ ಒಡೆತನದ ಈ ಬಿಟ್‌ಚಾಟ್ ಎಂಬ ಮೆಸೇಜಿಂಗ್ ಅಪ್ಲಿಕೇಶನ್ ಯಾವುದೇ ರೀತಿಯ ಇಂಟರ್ನೆಟ್ ಅಥವಾ ನೆಟ್ವರ್ಕ್ ಇಲ್ಲದೆಯೂ ಚಾಟ್ ಮಾಡಬಹುದಾದ ಅಪ್ಲಿಕೇಶನ್ ಆಗಿದೆ. ಅದರಂತೆ, ಇದೇ ಆಪ್ ಬಳಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನಿರಂತರ ಸಂಪರ್ಕ ಸಾಧಿಸಿದ್ದರು.

ಹಾಗಾದ್ರೆ, ಬಿಟ್‌ಚಾಟ್ ಹೇಗೆ ವರ್ಕ್ ಆಗುತ್ತೆ?

ಬಿಟ್‌ಚಾಟ್ ಸಂಪೂರ್ಣವಾಗಿ ಆಫ್‌ಲೈನ್ ಆಗಿ ಕಾರ್ಯನಿರ್ವಹಿಸುವ ಒಂದು ಪೀರ್-ಟು-ಪೀರ್ (P2P) ಮೆಶ್ ನೆಟ್‌ವರ್ಕ್ ತಂತ್ರಜ್ಞಾನವಾಗಿದೆ. ಅದರಂತೆ, ಈ ಆಪ್ ಇಂಟರ್ನೆಟ್ ಬದಲಿಗೆ ಮೊಬೈಲ್‌ನಲ್ಲಿರುವ ಬ್ಲೂಟೂತ್ ಮತ್ತು ವೈ-ಫೈ ಡೈರೆಕ್ಟ್ ವೈಶಿಷ್ಟ್ಯಗಳನ್ನು ಬಳಸುತ್ತದೆ. ಇದರೊಂದಿಗೆ, ನಿಮ್ಮ ಫೋನ್‌ನಿಂದ ಹೊರಡುವ ಸಿಗ್ನಲ್ ಮತ್ತೊಂದು ಫೋನ್‌ಗೆ ಸಂಪರ್ಕಗೊಳ್ಳುತ್ತದೆ. ಹೀಗೆ ಹಲವು ಫೋನ್‌ಗಳು ಸೇರಿ ತಮ್ಮದೇ ಆದ ಒಂದು ಸ್ವತಂತ್ರ ನೆಟ್‌ವರ್ಕ್ ಅನ್ನು ಸೃಷ್ಟಿಸುತ್ತವೆ.

ಉದಾಹರಣೆಗೆ: ನೀವು A ಎಂಬ ವ್ಯಕ್ತಿ, ಮತ್ತು C ಎಂಬ ವ್ಯಕ್ತಿಗೆ ಸಂದೇಶ ಕಳುಹಿಸಬೇಕು. ಆದರೆ C ನಿಮ್ಮ ಬ್ಲೂಟೂತ್ ವ್ಯಾಪ್ತಿಯಿಂದ ದೂರವಿದ್ದಾನೆ. ಆಗ ನಿಮ್ಮ ಸಂದೇಶವು ನಿಮ್ಮ ಹತ್ತಿರವಿರುವ B ಎಂಬ ವ್ಯಕ್ತಿಯ ಫೋನ್‌ಗೆ ಹೋಗುತ್ತದೆ. ಆ B ಫೋನ್ ಮೂಲಕ C ಗೆ ತಲುಪುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮಧ್ಯದಲ್ಲಿರುವ B ವ್ಯಕ್ತಿಗೆ ನೀವು ಕಳುಹಿಸಿದ ಸಂದೇಶ ಏನೆಂಬುದು ತಿಳಿಯುವುದಿಲ್ಲ (ಅದು ಎನ್‌ಕ್ರಿಪ್ಟ್ ಆಗಿರುತ್ತದೆ), ಆದರೆ ಆತನ ಫೋನ್ ಕೇವಲ ಒಂದು ಬ್ರಿಡ್ಜ್ ಆಗಿ ಕೆಲಸ ಮಾಡುತ್ತದೆ.

ನಿಷೇಧಕ್ಕೆ ಕಾರಣವೇನು?

ಕೇಂದ್ರ ಗೃಹ ಸಚಿವಾಲಯವು, "ಬಿಟ್‌ಚಾಟ್ ಯಾವುದೇ ಸೆಂಟ್ರಲೈಜ್ಡ್ ಸರ್ವರ್ ಅಥವಾ ಮೊಬೈಲ್ ನೆಟ್‌ವರ್ಕ್ ಬಳಸದೆ, ನೇರವಾಗಿ ಫೋನ್‌ಗಳ ನಡುವೆ ಕಾರ್ಯನಿರ್ವಹಿಸುವುದರಿಂದ ತನಿಖಾ ಸಂಸ್ಥೆಗಳಿಗೆ ಮೇಲ್ವಿಚಾರಣೆ ನಡೆಸುವುದು ಸಾಧ್ಯವಿಲ್ಲ" ಜೊತೆಗೆ ಈ ಆಪ್ ಬಳಸಲು ಯಾವುದೇ ಫೋನ್ ನಂಬರ್ ಅಥವಾ ಇಮೇಲ್ ಐಡಿ ನೋಂದಣಿ ಅಗತ್ಯವಿಲ್ಲ. ಅದರಂತೆ, ಇದು ಬಳಕೆದಾರರ ಗುರುತನ್ನು ಪತ್ತೆಹಚ್ಚುವುದನ್ನು ತಡೆಯುತ್ತದೆ ಎಂದು ನಿಷೇಧ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!

ಮಹತ್ವದ ಬೆಳವಣಿಗೆಯಲ್ಲಿ ಆಪ್ ಮಾಜಿ ವಕ್ತಾರೆ ಪ್ರಿಯಾಂಕಾ, ಮಾಜಿ ಶಾಸಕ ಶ್ಯಾಮ್ ಸುಂದರ್ ಸೇರಿ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ!

Asian Games 2026: 'ಈಗ ಮಾಡು ಡಾಕ್ಯುಮೆಂಟರಿ': ಬುಮ್ರಾ ವೇಗದ ಹೊಡೆತಕ್ಕೆ ಪತರುಗುಟ್ಟಿದ ಪಾಕ್ ನಾಯಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!