ಪ್ರತಿಭಟನೆ ವೇಳೆ ಅಶ್ರುವಾಯು ಪ್ರಯೋಗಿಸಿದ ಅಧಿಕಾರಿಗಳು. 
ದೇಶ

CJP ಪ್ರತಿಭಟನೆ ವೇಳೆ ಬಳಸಿದ್ದು Plastic pellets: ಪೊಲೀಸ್ ದಾಖಲೆಯಿಂದ ಸ್ಫೋಟಕ ಮಾಹಿತಿ ಬಹಿರಂಗ..!

ಡಿಸಿಪಿ ಸೂಚನೆಯಂತೆ ಪ್ರತಿಭಟನೆಯನ್ನು ನಿಯಂತ್ರಿಸಲು ಆರ್‌ಎಎಫ್ ಸಿಬ್ಬಂದಿ: 55 ನಾನ್-ಎಲೆಕ್ಟ್ರಿಕಲ್ ಶೆಲ್‌ಗಳು, 15 ಎಲೆಕ್ಟ್ರಿಕಲ್ ಶೆಲ್‌ಗಳು, 5 ಟಿಯರ್ ಸ್ಮೋಕ್ ಗ್ರೆನೇಡ್‌ಗಳು, ಗಲಭೆ ನಿಯಂತ್ರಣ ಗನ್‌ನಿಂದ 2 ಸುತ್ತು, 2 ಸುತ್ತು ಪ್ಲಾಸ್ಟಿಕ್ ಪೆಲೆಟ್‌ಗಳನ್ನು ಬಳಸಿದ್ದಾರೆ.

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಜುಲೈ 20ರಂದು ಜಂತರ್ ಮಂತರ್ ಸಮೀಪ ನಡೆದ 'ಸಂಸದ್ ಚಲೋ' ಪ್ರತಿಭಟನೆಯನ್ನು ಚದುರಿಸಲು ರಾಪಿಡ್ ಆಕ್ಷನ್ ಫೋರ್ಸ್ (RAF) ಪ್ಲಾಸ್ಟಿಕ್ ಪೆಲೆಟ್‌ಗಳು ಸೇರಿದಂತೆ ಹಲವು ಮಾರಕವಲ್ಲದ (Non-lethal) ಶಸ್ತ್ರಾಸ್ತ್ರಗಳನ್ನು ಬಳಸಿತ್ತು ಎಂಬ ಮಹತ್ವದ ಮಾಹಿತಿ ಪೊಲೀಸ್ ದಾಖಲೆಗಳಿಂದ ಬಹಿರಂಗವಾಗಿದೆ.

ಸೋಮವಾರ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಜುಲೈ 22ರಂದು ಮಧ್ಯಾಹ್ನ 1.24ಕ್ಕೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಜನರಲ್ ಡೈರಿಯಲ್ಲಿ ಈ ಕುರಿತು ದಾಖಲೆ ಮಾಡಲಾಗಿದೆ.

ಜಂತರ್ ಮಂತರ್‌ನ ವಲಯ-1ರಲ್ಲಿ ನಿಯೋಜನೆಗೊಂಡಿದ್ದ ಆರ್‌ಎಎಫ್ ಉಪ ಕಮಾಂಡೆಂಟ್, ದೆಹಲಿ ಪೊಲೀಸರ ಡಿಸಿಪಿ ಹುದ್ದೆಯ ಅಧಿಕಾರಿಯೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಅವರ ವರದಿಯ ಆಧಾರದ ಮೇಲೆ ಈ ದಾಖಲೆ ಮಾಡಲಾಗಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಡಿಸಿಪಿ ಸೂಚನೆಯಂತೆ ಪ್ರತಿಭಟನೆಯನ್ನು ನಿಯಂತ್ರಿಸಲು ಆರ್‌ಎಎಫ್ ಸಿಬ್ಬಂದಿ: 55 ನಾನ್-ಎಲೆಕ್ಟ್ರಿಕಲ್ ಶೆಲ್‌ಗಳು, 15 ಎಲೆಕ್ಟ್ರಿಕಲ್ ಶೆಲ್‌ಗಳು, 5 ಟಿಯರ್ ಸ್ಮೋಕ್ ಗ್ರೆನೇಡ್‌ಗಳು, ಗಲಭೆ ನಿಯಂತ್ರಣ ಗನ್‌ನಿಂದ 2 ಸುತ್ತು, 2 ಸುತ್ತು ಪ್ಲಾಸ್ಟಿಕ್ ಪೆಲೆಟ್‌ಗಳನ್ನು ಬಳಸಿದ್ದಾರೆಂದು ತಿಳಿದುಬಂದಿದೆ.

ಪ್ರತಿ ಪ್ಲಾಸ್ಟಿಕ್ ಪೆಲೆಟ್ ಸುತ್ತಿನಲ್ಲಿ ನಾಲ್ಕು ಪೆಲೆಟ್‌ಗಳಿರುತ್ತವೆ. ಇವು ಲೋಹದ ಪೆಲೆಟ್‌ಗಳಂತೆ ದೇಹವನ್ನು ಭೇದಿಸುವುದಿಲ್ಲ. ಗಾಯದ ತೀವ್ರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಈ ಪ್ಲಾಸ್ಟಿಕ್ ಪೆಲೆಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಾಹಿತಿ ಹೊರಬೀಳುತ್ತಿದ್ದಂತೆಯೇ ಪ್ರತಿಭಟನೆ ವೇಳೆ ಪೊಲೀಸರು ಬಲಪ್ರಯೋಗ ನಡೆಸಿದ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಪ್ರತಿಭಟನಾಕಾರರ ವಿರುದ್ಧ ಪೆಲೆಟ್‌ಗಳನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ವೇಳೆ ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು.

ಪ್ರತಿಭಟನೆ ಸಂದರ್ಭದಲ್ಲಿ ಪೆಲೆಟ್ ತಗುಲಿ ಇಬ್ಬರು ಅಥವಾ ಮೂವರು ಪ್ರತಿಭಟನಾಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳೂ ಬಂದಿದ್ದವು.

ಆದರೆ, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೆಲೆಟ್‌ಗಳನ್ನು ಬಳಸಲಾಗಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತಿವೆ" ಎಂದು ದೆಹಲಿ ಪೊಲೀಸರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಇದೂವರೆಗೆ ಈ ವಿಚಾರವಾಗಿ ಸಿಆರ್‌ಪಿಎಫ್ ಹಾಗೂ ರ್ಯಾಪಿಡ್ ಆಕ್ಷನ್ ಫೋರ್ಸ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಸಿಆರ್‌ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್, "ಪ್ರತಿಭಟನೆ ಈಗ ಅಂತ್ಯಗೊಂಡಿದ್ದು, ಜನರು ಚದುರಿದ್ದಾರೆ. ಪ್ರತಿಯೊಂದು ದೊಡ್ಡ ಕಾರ್ಯಾಚರಣೆಯ ಬಳಿಕ ಮಾಡುವಂತೆ ಈ ಘಟನೆಯ ಬಗ್ಗೆಯೂ ವೃತ್ತಿಪರ ಮೌಲ್ಯಮಾಪನ ನಡೆಸಲಾಗುತ್ತದೆ. ನಂತರ ಪಡೆ ಮುಖ್ಯ ಕಚೇರಿಯ ಅಧಿಕೃತ ನಿಲುವನ್ನು ತಿಳಿಸುತ್ತೇವೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament Monsoon Session: ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲ, ಲೋಕಸಭೆ-ರಾಜ್ಯಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ..!

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ