ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್: ಫಿರೋಜ್‌ಪುರದಲ್ಲಿ ಟ್ರಕ್‌ಗೆ ಪಿಕಪ್ ವಾಹನ ಡಿಕ್ಕಿ; ಏಳು ಮಂದಿ ದುರ್ಮರಣ!

ಸುಮಾರು 25 ಜನರು ಪಿಕಪ್ ವಾಹನದಲ್ಲಿ ಅಮೃತಸರದ ಜಲಾಲಾಬಾದ್‌ನಿಂದ ಬಿಯಾಸ್‌ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್: ಟ್ರಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಏಳು ಮಂದಿ ದುರ್ಮರಣ ಹೊಂದಿರುವ ಘಟನೆ ಪಂಜಾಬಿನ ಫಿರೋಜ್ ಪುರದಲ್ಲಿ ಶನಿವಾರ ನಡೆದಿದೆ.

ಈ ದುರ್ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫಿರೋಜ್‌ಪುರ-ಫಜಿಲ್ಕಾ ರಸ್ತೆಯ ಜಂಗವಾಲಾ ಮೋರ್ ಬಳಿ ಈ ಅಪಘಾತ ಸಂಭವಿಸಿದೆ.

ಸುಮಾರು 25 ಜನರು ಪಿಕಪ್ ವಾಹನದಲ್ಲಿ ಅಮೃತಸರದ ಜಲಾಲಾಬಾದ್‌ನಿಂದ ಬಿಯಾಸ್‌ಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಫಿರೋಜ್‌ಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಫರೀದ್‌ಕೋಟ್‌ನ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರೀಕ್ಷಾ ವ್ಯವಸ್ಥೆ ಸುಧಾರಣೆ, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ- ಪ್ರಧಾನಿ ಮೋದಿ ಘೋಷಣೆ! Video

ಭಾರತದಲ್ಲಿ ಮುಸ್ಲಿಮರು PM, CM ಆಗದಿರುವುದಕ್ಕೆ ಕಾರಣ ಏನು ಗೊತ್ತ? Owaisi ಮುಸ್ಲಿಮರ ದೊಡ್ಡ ಶತ್ರು: ಮೌಲಾನಾ ಸಾಜಿದ್

'ಪ್ರಧಾನ್ ರಾಜೀನಾಮೆಯಿಂದ ಭಾರತ ಅಸ್ಥಿರಗೊಳಿಸುವ ವಿದೇಶಿ ಶಕ್ತಿಗಳ ಸಂಚು ವಿಫಲ': ಕೈಲಾಶ್ ವಿಜಯವರ್ಗೀಯ

UP ಚುನಾವಣೆ: ಈಗಲೇ ಮೈತ್ರಿ ಮಾತುಕತೆ ಆರಂಭಿಸೋಣ; ಚುನಾವಣೆ ಬಳಿಕ ಅತ್ತರೆ ಪ್ರಯೋಜನ ಇಲ್ಲ- ಅಖಿಲೇಶ್ ಗೆ ಓವೈಸಿ ಆಫರ್!

ಮಹಾ'ಸಂಚಲನ: ರಾಷ್ಟ್ರ ರಾಜಕಾರಣಕ್ಕೆ ದೇವೇಂದ್ರ ಫಡ್ನವಿಸ್ ಶಿಫ್ಟ್?