ಐವರು IAF ಸಿಬ್ಬಂದಿ ಸಾವು 
ದೇಶ

ಅಸ್ಸಾಂನಲ್ಲಿ AN-32 ಸಾರಿಗೆ ವಿಮಾನ ಪತನ: ಐವರು IAF ಸಿಬ್ಬಂದಿ ಸಾವು; ತನಿಖೆಗೆ ಆದೇಶ

'ಅಸ್ಸಾಂನ ಜೋರ್ಹತ್‌ನಲ್ಲಿ ನಡೆದ AN-32 ಅಪಘಾತದಲ್ಲಿ ಐದು ಸಿಬ್ಬಂದಿಯನ್ನು ಕಳೆದುಕೊಂಡಿದ್ದಕ್ಕೆ ಭಾರತೀಯ ವಾಯುಪಡೆ (IAF) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜೋರ್ಹಾಟ್ ವಾಯುನೆಲೆ: ಭಾರತೀಯ ವಾಯುಪಡೆಯ(IAF) ಎಎನ್-32 ಸಾರಿಗೆ ವಿಮಾನವೊಂದು ಶನಿವಾರ ಬೆಳಗ್ಗೆ ಅಸ್ಸಾಂನ ಜೋರ್ಹಾಟ್ ವಾಯುನೆಲೆಯಲ್ಲಿ ಪತನಗೊಂಡು ಬೆಂಕಿಗಾಹುತಿಯಾಗಿದೆ.

ವಿಮಾನ ಪತನ ದುರಂತದಲ್ಲಿ ಭಾರತೀಯ ವಾಯುಪಡೆಯ ಐದು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಅಸ್ಸಾಂನ ಜೋರ್ಹತ್‌ನಲ್ಲಿ ನಡೆದ AN-32 ಅಪಘಾತದಲ್ಲಿ ಐದು ಸಿಬ್ಬಂದಿಯನ್ನು ಕಳೆದುಕೊಂಡಿದ್ದಕ್ಕೆ ಭಾರತೀಯ ವಾಯುಪಡೆ (IAF) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲಿಂಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ವಾಯು ಖೇಮಾರಾಮ್ ಕುಮಾವತ್ ಮತ್ತು ಅಗ್ನಿವೀರ್ ವಾಯು ಡ್ಯಾನಿಶ್ ಆಲಂ ಕರ್ತವ್ಯದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ' ಎಂದು IAF ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಏತನ್ಮಧ್ಯೆ, ಶನಿವಾರ ಅಸ್ಸಾಂನ ಜೋರ್ಹತ್ ವಾಯುಪಡೆ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದ ಕಾರಣವನ್ನು ಕಂಡುಹಿಡಿಯಲು ಕೋರ್ಟ್ ಆಫ್ ಎನ್ಕ್ವೈರಿಗೆ ಆದೇಶಿಸಲಾಗಿದೆ.

ಜೋರ್ಹತ್ ಜಿಲ್ಲೆಯ ರೌರಿಯಾ ಪ್ರದೇಶದಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಇಳಿಯುವಾಗ ಎಎನ್ -32 ವಿಮಾನ ಪತನಗೊಂಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

AN-32 ಒಂದು ಅವಳಿ-ಎಂಜಿನ್ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ಇದನ್ನು ಭಾರತೀಯ ವಾಯುಪಡೆಯು ಎತ್ತರದ ಮತ್ತು ದೂರದ ಪ್ರದೇಶಗಳು ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್, ಸರಕು ಸಾಗಣೆ ಮತ್ತು ಕಾರ್ಯಾಚರಣೆಯ ಬೆಂಬಲಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!

ದೆಹಲಿ: ವೀಸಾ ನಿಯಮಗಳನ್ನು ಉಲ್ಲಂಘನೆ; 6 ​​ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಹಿಂದೂರಾಷ್ಟ್ರವಾಗಿ ನೇಪಾಳ ಘೋಷಣೆಗೆ ಆಗ್ರಹ: ಪ್ರತಿಭಟನಾ ನಿರತ ಹಿಂದೂ ಸಾಮ್ರಾಟ್ ಸೇನಾ ಜೊತೆ ಸರ್ಕಾರದ ಮಾತುಕತೆ; 19 ಅಂಶಗಳ ಒಪ್ಪಂದ

ಇದು ಅತ್ಯಗತ್ಯ: ಭಾರತದಲ್ಲಿ UCC ಅನುಷ್ಠಾನಕ್ಕೆ ತಸ್ಲೀಮಾ ನಸ್ರೀನ್ ಬೆಂಬಲ