ಭಾರತೀಯ ವಾಯುಪಡೆಯ (IAF) ಎಎನ್-32 ಸಾರಿಗೆ ವಿಮಾನ ಅಸ್ಸಾಂನ ಜೋರ್ಹಾಟ್ ವಾಯುನೆಲೆಯಲ್ಲಿ ಪತನ 
ದೇಶ

ಅಸ್ಸಾಂ: ಜೋರ್ಹಾಟ್ ವಾಯುನೆಲೆಯಲ್ಲಿ AN-32 ಸಾರಿಗೆ ವಿಮಾನ ಪತನ; ಬೆಂಕಿಗಾಹುತಿ; Video

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ವಾಯುನೆಲೆಯ ಆವರಣದೊಳಗೇ ಪತನಗೊಂಡಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ.

ಜೋರ್ಹಾಟ್ ವಾಯುನೆಲೆ: ಭಾರತೀಯ ವಾಯುಪಡೆಯ (IAF) ಎಎನ್-32 ಸಾರಿಗೆ ವಿಮಾನವೊಂದು ಇಂದು ಶನಿವಾರ ಬೆಳಗ್ಗೆ ಅಸ್ಸಾಂನ ಜೋರ್ಹಾಟ್ ವಾಯುನೆಲೆಯಲ್ಲಿ ಪತನಗೊಂಡು ಬೆಂಕಿಗಾಹುತಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ವಾಯುನೆಲೆಯ ಆವರಣದೊಳಗೇ ಪತನಗೊಂಡಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಹಾಗೂ ಪರಿಸ್ಥಿತಿಯ ಮೌಲ್ಯಮಾಪನ ನಡೆಸಲು ತುರ್ತು ರಕ್ಷಣಾ ತಂಡಗಳನ್ನು ತಕ್ಷಣ ಸ್ಥಳಕ್ಕೆ ನಿಯೋಜಿಸಲಾಗಿದೆ.

ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬ ಮಾಹಿತಿ ಕೂಡ ಇನ್ನೂ ಸ್ಪಷ್ಟವಾಗಿಲ್ಲ.

ಘಟನೆಯನ್ನು ಭಾರತೀಯ ವಾಯುಪಡೆ ದೃಢಪಡಿಸಿದ್ದು, ಪರಿಸ್ಥಿತಿಯ ಸಂಪೂರ್ಣ ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದೆ. ಎಎನ್-32 ವಿಮಾನ ಪತನದ ಕುರಿತು ವಾಯುಪಡೆ ತನಿಖೆ ಆರಂಭಿಸಿದೆ.

ಸೋವಿಯತ್ ಒಕ್ಕೂಟದಲ್ಲಿ ಭಾರತಕ್ಕೆ ಅಗತ್ಯವಿರುವ ವಿಶೇಷ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಎಎನ್-32 ದ್ವಿ-ಎಂಜಿನ್ ಟರ್ಬೊಪ್ರಾಪ್ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಕಾರ್ಯಕುದುರೆ ಎಂದೇ ಕರೆಯಲಾಗುತ್ತದೆ. ಪ್ರಸ್ತುತ ವಾಯುಪಡೆಯು ಸುಮಾರು 100 ಎಎನ್-32 ವಿಮಾನಗಳನ್ನು ಬಳಸುತ್ತಿದೆ.

ಎತ್ತರದ ಪ್ರದೇಶಗಳ ವಾಯುನೆಲೆಗಳು ಹಾಗೂ ಉಷ್ಣವಲಯದ ಹವಾಮಾನದಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ವಿಮಾನವು 7.5 ಟನ್ ಸರಕು, 50 ಪ್ರಯಾಣಿಕರು ಅಥವಾ 42 ಪ್ಯಾರಾಟ್ರೂಪರ್‌ಗಳನ್ನು ಸಾಗಿಸಬಲ್ಲದು. ದೂರದ ಹಾಗೂ ದುರ್ಗಮ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಕೆಲವು ತಿಂಗಳುಗಳ ಹಿಂದೆ ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಎಸ್‌ಯು-30 ಎಂಕೆಐ ಯುದ್ಧವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

ಮಾರ್ಚ್ 5ರಂದು ಜೋರ್ಹಾಟ್ ವಾಯುನೆಲೆಯಿಂದ ನಿಯಮಿತ ಹಾರಾಟಕ್ಕಾಗಿ ಹೊರಟಿದ್ದ ದ್ವಿ-ಆಸನದ ಯುದ್ಧವಿಮಾನವು ಸಂಜೆ 7.42ರ ಸುಮಾರಿಗೆ ನೆಲದ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಸುಮಾರು 60 ಕಿ.ಮೀ ದೂರದ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ದುರ್ಗಮ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿರುವುದು ಪತ್ತೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖೈಬರ್ ಪಖ್ತುಂಖ್ವಾದಲ್ಲಿ "ಶಾಂತಿ ರ‍್ಯಾಲಿ"ಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವು

ರಸ್ತೆಗೆ ತಂದು ರಾಮಲಲ್ಲಾನಿಗೆ ಅಪಮಾನ: ಸಂಸದ ಪಪ್ಪು ಯಾದವ್ ಹತ್ಯೆಗೆ ಯತ್ನ ಆರೋಪ, Video!

ದೆಹಲಿ: ವೀಸಾ ನಿಯಮಗಳನ್ನು ಉಲ್ಲಂಘನೆ; 6 ​​ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಹಿಂದೂರಾಷ್ಟ್ರವಾಗಿ ನೇಪಾಳ ಘೋಷಣೆಗೆ ಆಗ್ರಹ: ಪ್ರತಿಭಟನಾ ನಿರತ ಹಿಂದೂ ಸಾಮ್ರಾಟ್ ಸೇನಾ ಜೊತೆ ಸರ್ಕಾರದ ಮಾತುಕತೆ; 19 ಅಂಶಗಳ ಒಪ್ಪಂದ

ಇದು ಅತ್ಯಗತ್ಯ: ಭಾರತದಲ್ಲಿ UCC ಅನುಷ್ಠಾನಕ್ಕೆ ತಸ್ಲೀಮಾ ನಸ್ರೀನ್ ಬೆಂಬಲ