ಸಂಜಯ್ ರಾವತ್, ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು: ಸಂಜಯ್ ರಾವತ್

ಪ್ರಧಾನಿ ನರೇಂದ್ರ ಮೋದಿ ಅವರು 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಹೇಳಿದ್ದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಹೇಳಿದ್ದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಔರಂಗಜೇಬನ ನಾಡಿನಿಂದ ಬಂದವರು ಹೇಳುವ ಮೂಲಕ ರಾವತ್, ಮೋದಿ ಮತ್ತು ಗುಜರಾತ್ ಎರಡನ್ನೂ ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ವಿರೋಧ ಪಕ್ಷದ ಹತಾಶೆ ಹೊಸ ಮಟ್ಟವನ್ನು ತಲುಪಿದೆ. ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾವತ್, ರಾಜಕೀಯದಲ್ಲಿ ಅಂತಹ 'ಅಘೋರಿ'ಯನ್ನು ತಾನು ಎಂದಿಗೂ ನೋಡಿಲ್ಲ. ಮೋದಿಯವರ ವ್ಯಕ್ತಿತ್ವವೇ ಭಯವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದರು.

ಈ ದೇಶದ ರಾಜಕೀಯದಲ್ಲಿ ಅಂತಹ 'ಅಘೋರಿ' ವ್ಯಕ್ತಿ ಹಿಂದೆಂದೂ ಹುಟ್ಟಿಲ್ಲ ಎಂದು ರಾವತ್ ಹೇಳಿದರು. ಇಂತಹ ಕ್ರೂರ ವ್ಯಕ್ತಿ ಹಿಂದೆಂದೂ ಕಾಣಿಸಿಲ್ಲ. ಈ ದೇಶವು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹ ರಾವ್, ರಾಜೀವ್ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರಂತಹ ಮಹಾನ್ ನಾಯಕರನ್ನು ಸೃಷ್ಟಿಸಿದೆ. ಆದರೆ ನಾವು ಮೋದಿಯವರ ಸಂಪೂರ್ಣ ವ್ಯಕ್ತಿತ್ವವನ್ನು ನೋಡಿದಾಗ ಅದು ಭಯಾನಕವಾಗಿದೆ. ಅಂತಹ ವ್ಯಕ್ತಿ ಎಲ್ಲಿಂದ ಬಂದರು? ಅವರು ಔರಂಗಜೇಬ್‌ನಂತೆಯೇ ಅದೇ ಮಣ್ಣಿನಿಂದ ಬಂದರು. ಯಾಕಂದರೆ ಔರಂಗಜೇಬ್ ಹುಟ್ಟಿದ್ದು ಗುಜರಾತ್ ನಲ್ಲಿ ಅಲ್ಲವೇ ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ, ಈ ಹೇಳಿಕೆಗಳು ಪ್ರತಿಪಕ್ಷಗಳು 'ಹತಾಶೆಯ ಹೊಸ ಮಟ್ಟವನ್ನು' ತಲುಪಿವೆ. ಈಗ ಮೋದಿಯನ್ನು ಮಾತ್ರವಲ್ಲದೆ ಗುಜರಾತ್ ಅನ್ನು ಗುರಿಯಾಗಿಸಿಕೊಂಡಿವೆ ಈಗ ಪ್ರಧಾನಿ ಮೋದಿ ಮತ್ತು ಸಾಂವಿಧಾನಿಕ ಹುದ್ದೆಯ ವಿರುದ್ಧ ಮಾತ್ರವಲ್ಲದೆ ಇಡೀ ಗುಜರಾತ್ ರಾಜ್ಯದ ವಿರುದ್ಧವೂ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಪೂನಾವಾಲಾ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಿಂದೆ ಮೋದಿ ವಿರುದ್ಧ ಪದೇ ಪದೇ ಅವಹೇಳನಕಾರಿ ಭಾಷೆಯನ್ನು ಬಳಸಿವೆ. ರಾಜಕೀಯ ಹತಾಶೆಯಿಂದ ಅದನ್ನು ಮುಂದುವರಿಸುತ್ತಿವೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಎಲ್ಲಾ ಮಿತಿಗಳನ್ನು ಮೀರಿವೆ. ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಅವರು ಪ್ರಧಾನಿ ವಿರುದ್ಧ 150ಕ್ಕೂ ಹೆಚ್ಚು ನಿಂದನೀಯ ಪದಗಳನ್ನು ಬಳಸಿದ್ದಾರೆ. ಈಗ ಕಾಂಗ್ರೆಸ್ ಮಿತ್ರಪಕ್ಷ ಸಂಜಯ್ ರಾವತ್ ಕೂಡ ಪ್ರಧಾನಿ ವಿರುದ್ಧ ಅತ್ಯಂತ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಅವರು ಇನ್ನೂ ಮುಂದೆ ಹೋಗಿ ಗುಜರಾತ್ ರಾಜ್ಯವನ್ನು ಔರಂಗಜೇಬನ ನಾಡು ಎಂದು ಕರೆದು ಅವಮಾನಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾನಿರತ ವಿದ್ಯಾರ್ಥಿ ವಿರುದ್ಧ ಪೆಲೆಟ್ ಗನ್ ಬಳಕೆ ವಿವಾದ; ಸಿಬ್ಬಂದಿಗಳ ಬೆನ್ನಿಗೆ ನಿಂತ CRPF ಮುಖ್ಯಸ್ಥ; ‘ನಿರ್ಭಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ..!

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿಗೆ ಸರ್ಕಾರ ಶಾಕ್: ಸಭಾಪತಿ ಸ್ಥಾನ ರಾಜೀನಾಮೆ ನೀಡುವಂತೆ ಸೂಚನೆ, ಸಂಘರ್ಷ ಫಿಕ್ಸ್..!

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!