ವಿಶಾಖಾ ತಿಲ್ಕರ್ 
ದೇಶ

ಪತ್ನಿ ಮೇಲೆ ಕಣ್ಣಿಡಲು ಮನೆ ಒಳಗೆ, ಹೊರಗೆ ಸಿಸಿಟಿವಿ ಅಳವಡಿಸಿದ ವೈದ್ಯ ಪತಿ; ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ!

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಮುಂಬೈ ಬಳಿಯ ಥಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪತಿಯೊಂದಿಗೆ ವಾಸಿಸುತ್ತಿದ್ದ ವಿಶಾಖಾ, ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ ಕಾರಣಕ್ಕೆ ಅವರ ಅತ್ತೆ ಥಳಿಸಿದ್ದಾರೆ. ಆದರೆ ಕಿರುಕುಳ ಕೇವಲ ದೈಹಿಕವಾಗಿರಲಿಲ್ಲ ಎಂದು ಅವರ ಕುಟುಂಬ ಆರೋಪಿಸಿದೆ. ಅಂಬರ್ನಾಥ್‌ನಲ್ಲಿರುವ ದಂಪತಿ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳು ಇದ್ದವು ಮತ್ತು ಅವರ ಪತಿ ನಿತಿನ್ ತಿಲ್ಕರ್ ಪತ್ನಿಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದರು. ಅವರ ಗೌಪ್ಯತೆಯ ಪ್ರತಿಯೊಂದು ಅಂಶವನ್ನು ಕಸಿದುಕೊಳ್ಳುತ್ತಿದ್ದರು ಎಂದು ದೂರಿದ್ದಾರೆ.

ಏಪ್ರಿಲ್ 30 ರಂದು ದಂಪತಿ ವಿವಾಹವಾದರು. ಮದುವೆಗೆ ಮೊದಲು ಎಲ್ಲವೂ ಚೆನ್ನಾಗಿತ್ತು, ಆದರೆ ಶೀಘ್ರದಲ್ಲೇ ಪರಿಸ್ಥಿತಿ ಬದಲಾಯಿತು. ವಿವಾಹದ ಸಮಯದಲ್ಲಿ ಅವರು ಬಯಸಿದಷ್ಟು ಉಡುಗೊರೆಗಳು ಅಥವಾ 'ಗೌರವ'ದ ಮಟ್ಟ ಪಡೆಯದ ಕಾರಣ ಅವರ ಅತ್ತೆ ಅಸಮಾಧಾನಗೊಂಡಿದ್ದರು ಎಂದು ವಿಶಾಖಾ ಅವರ ಕುಟುಂಬ ಆರೋಪಿಸಿದೆ.

'ಹೆತ್ತವರ ಮನೆಯಿಂದ ಆಭರಣ ಮತ್ತು ಹಣವನ್ನು ತರುವಂತೆ ಆಕೆಯ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು' ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದರು.

'ನಿತಿನ್ ತಿಲ್ಕರ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದ. ಅವಳು ಯಾರೊಂದಿಗಾದರೂ ಮಾತನಾಡಿದಾಗಲೆಲ್ಲ, ಮನೆಗೆ ಹಿಂದಿರುಗಿ ಅವಳನ್ನು ಕ್ರೂರವಾಗಿ ಥಳಿಸಲಾಗುತ್ತಿತ್ತು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲು, ನೆರೆಹೊರೆಯ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ಅವಳನ್ನು ಥಳಿಸಲಾಯಿತು. ಹತಾಶೆಗೆ ಒಳಗಾದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಅವರು ಹೇಳಿದರು.

ಆತ್ಮಹತ್ಯೆಗೂ ಮುನ್ನ, ವಿಶಾಖಾ ತನ್ನ ತಾಯಿಗೆ ತಾನು ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಳು. ಆಕೆಯ ಪೋಷಕರು ಆಕೆಯನ್ನು ಮನೆಗೆ ಕರೆತರುವ ಪ್ರಕ್ರಿಯೆಯಲ್ಲಿದ್ದಾಗಲೇ ಆಕೆ ನೇಣು ಬಿಗಿದುಕೊಂಡಿದ್ದಾಳೆ ಎಂಬ ಸುದ್ದಿ ಅವರಿಗೆ ತಲುಪಿತು ಎಂದು ಕುಟುಂಬ ತಿಳಿಸಿದೆ.

ಅಂಬರ್‌ನಾಥ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ನಿತಿನ್ ತಿಲ್ಕರ್, ಅವರ ತಾಯಿ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಮಾನಸಿಕ ಮತ್ತು ದೈಹಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ನಿತಿನ್‌ನನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, ತಕ್ಷಣದಿಂದಲೇ Hormuz ಜಲಸಂಧಿ ಓಪನ್‌..!

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಪೈಪೋಟಿ -ಅಡ್ಡ ಮತದಾನದ ಭೀತಿ! 7ನೇ ಸ್ಥಾನ ಗೆಲ್ಲೋರು ಯಾರು?

ದೆಹಲಿಯಲ್ಲಿ ಡಿ.ಕೆ.ಶಿವಕುಮಾರ್ Power game: ವೈಯಕ್ತಿಕ ಪ್ರತಿನಿಧಿಯಾಗಿ ಜೋಬಿನ್ ಜೋಸೆಫ್ ನೇಮಕ, ಹಿಂದಿನ ರಾಜಕೀಯ ಲೆಕ್ಕಾಚಾರವೇನು..?

SCROLL FOR NEXT