ಎನ್ ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್‌ವಾನಿ ಗೆಲುವು 
ದೇಶ

ಜಾರ್ಖಂಡ್ ರಾಜ್ಯಸಭಾ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಗೆ ಭಾರಿ ಹೊಡೆತ; NDA ಬೆಂಬಲಿತ ಅಭ್ಯರ್ಥಿ ಗೆಲುವು!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಇಂಡಿಯಾ ಮೈತ್ರಿಕೂಟದ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ ಎನ್ ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್‌ವಾನಿ ಗೆಲುವು ಸಾಧಿಸಿದ್ದಾರೆ.

ರಾಂಚಿ: ಜಾರ್ಖಂಡ್ ನಲ್ಲಿ ಇಂಡಿಯಾ ಒಕ್ಕೂಟದ ಆಡಳಿತವಿದ್ದರೂ ರಾಜ್ಯಸಭಾ ಚುನಾವಣೆಯಲ್ಲಿ NDA ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಗೆ ಭಾರಿ ಹೊಡೆತ ಬಿದ್ದಿದೆ.

ಹೌದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಇಂಡಿಯಾ ಮೈತ್ರಿಕೂಟದ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ ಎನ್ ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್‌ವಾನಿ ಗೆಲುವು ಸಾಧಿಸಿದ್ದಾರೆ.

ಇದು ಆಡಳಿತಾರೂಢ ಮೈತ್ರಿಕೂಟದಲ್ಲಿ ಅಡ್ಡಮತದಾನದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಹೇಮಂತ್ ಸೋರೆನ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿ ಬೈದ್ಯನಾಥ್ ರಾಮ್ ಕೂಡ ಒಂದು ಸ್ಥಾನವನ್ನು ಗೆದ್ದರೆ, ಕಾಂಗ್ರೆಸ್ ಅಭ್ಯರ್ಥಿಯ ಸೋಲು ವಿರೋಧ ಪಕ್ಷಗಳ ಮೈತ್ರಿಕೂಟದ ಆಡಳಿತವಿರುವ ರಾಜ್ಯದಲ್ಲಿ NDAಯ ಪ್ರಗತಿಯನ್ನು ಸೂಚಿಸುತ್ತದೆ.

ಜಾರ್ಖಂಡ್‌ನಲ್ಲಿ ಎರಡು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಪರಿಮಳ್ ನಾಥ್‌ವಾನಿ 28 ಮತಗಳೊಂದಿಗೆ ಗೆಲುವು ಸಾಧಿಸಿದರು. ಜೆಎಂಎಂ ಅಭ್ಯರ್ಥಿ ಬೈದ್ಯನಾಥ್ ರಾಮ್ 31 ಮತಗಳೊಂದಿಗೆ ಗೆಲುವು ಸಾಧಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪ್ರಣವ್ ಝಾ 19 ಮತಗಳನ್ನು ಪಡೆದು ಸೋತರು. ಮೂರು ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು.

ಈ ಫಲಿತಾಂಶವನ್ನು JMM ನೇತೃತ್ವದ ಮತ್ತು ಕಾಂಗ್ರೆಸ್, RJD ಮತ್ತಿತರ ಪಕ್ಷಗಳ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿರುವ INDIA ಬಣಕ್ಕೆ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಈ ಫಲಿತಾಂಶವು ಆಡಳಿತ ಮೈತ್ರಿಕೂಟದ ಸ್ಥಿರತೆಗೆ ವ್ಯಾಪಕ ಪರಿಣಾಮಗಳನ್ನು ಬೀರಬಹುದು ಎಂದು ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ.

ಅಡ್ಡ ಮತದಾನದ ಅನುಮಾನ: ಚುನಾವಣಾ ಲೆಕ್ಕಚಾರಗಳು ಅಡ್ಡ ಮತದಾನದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ, ರಾಜ್ಯಸಭೆಗೆ ಕಳುಹಿಸಲು ಅಭ್ಯರ್ಥಿಗೆ 28 ​​ಮತಗಳು ಬೇಕಾಗಿದ್ದವು.

NDA ತನ್ನದೇ ಆದ 24 ಮತಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಆದರೆ 28 ಮತಗಳೊಂದಿಗೆ ನಾಥ್ವಾನಿ ಗೆದ್ದಿದ್ದು, ನಾಲ್ಕು ಶಾಸಕರು ಅಡ್ಡ ಮತದಾನ ಚಲಾಯಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ವಿಧಾನಸಭೆಯಲ್ಲಿ 34 JMM ಶಾಸಕರು, 16 ಕಾಂಗ್ರೆಸ್ ಶಾಸಕರು, RJD ಯ ನಾಲ್ವರು ಮತ್ತು CPI(ML) ನ ಇಬ್ಬರು ಸೇರಿದ್ದಾರೆ. ಬಿಜೆಪಿ 21 ಶಾಸಕರನ್ನು ಹೊಂದಿದ್ದರೆ, AJSU ಪಕ್ಷವು ಒಬ್ಬ ಸದಸ್ಯರನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka MLC Election Results: ಅಡ್ಡ ಮತದಾನದ ನಡುವೆಯೇ ಕಾಂಗ್ರೆಸ್ 5, ಬಿಜೆಪಿಗೆ ತೆಕ್ಕೆಗೆ 2 ಸ್ಥಾನ, JDS ಆಘಾತಕಾರಿ ಸೋಲು

ಫಲಿಸಿದ ಡಿಕೆ ಶಿವಕುಮಾರ್ ತಂತ್ರ: Jds-BJP ಅಡ್ಡ ಮತದಾನ, ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಗೆಲುವು!

Ranchi: ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆತ, ಮೂವರು ಆರೋಪಿಗಳ ಬಂಧನ, ಪಾಕ್ ಉಗ್ರರೊಂದಿಗೆ ನಂಟಿನ ಶಂಕೆ! Video

NEET UG ಮರು ಪರೀಕ್ಷೆ: 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ಹೇಗೆ ಮೊಟಕುಗೊಳಿಸುತ್ತೀರಾ? ಟೆಲಿಗ್ರಾಮ್ ಬ್ಯಾನ್ ಪ್ರಶ್ನಿಸಿದ ಹೈಕೋರ್ಟ್!

Horrific: ಮಹಿಳೆ ಮೇಲೆ ನಿರಂತರ ಅತ್ಯಾಚಾರ, ಸೆ** ಬಳಿಕ ಮೂ** ಕುಡಿಸಿದ ಸ್ವಯಂ ಘೋಷಿತ ದೇವಮಾನವ!

SCROLL FOR NEXT