ಯುದ್ಧ ನೌಕೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 
ದೇಶ

ರಕ್ಷಣಾ ಕ್ಷೇತ್ರದಲ್ಲಿ ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲ್ಲ: ಪ್ರಧಾನಿ ಮೋದಿ

ಈ ಮೂರು ನೌಕೆಗಳು ಭಾರತದ ಮೂರು ಮಹತ್ವದ ಸಂಕಲ್ಪಗಳ ಸಂಕೇತಗಳಾಗಿವೆ. ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲು ಬಯಸುವುದಿಲ್ಲ ..

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ.

ನೌಕಾಪಡೆಗೆ ಇಂದು ಮೂರು ಸ್ವದೇಶಿ ನಿರ್ಮಿತ ನೌಕೆಗಳಾದ INS ದುನಗಿರಿ, INS ಸನ್ಶೋಧಕ್ ಹಾಗೂ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆ ಅಗ್ರಾಯ್ ಅನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡದ ಪ್ರಧಾನಿ ಮೋದಿ, "ಈ ಮೂರು ನೌಕೆಗಳು ಭಾರತದ ಮೂರು ಮಹತ್ವದ ಸಂಕಲ್ಪಗಳ ಸಂಕೇತಗಳಾಗಿವೆ. ಭಾರತ ಇನ್ನು ಮುಂದೆ ಕೇವಲ ಖರೀದಿದಾರ ರಾಷ್ಟ್ರವಾಗಿ ಉಳಿಯಲು ಬಯಸುವುದಿಲ್ಲ ಎಂದು ಹೇಳಿದರು.

ಈ ಮೂರು ನೌಕೆಗಳು ಭಾರತದಲ್ಲೇ ನಿರ್ಮಾಣಗೊಂಡಿದ್ದು, ಭಾರತದಲ್ಲೇ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಕೈಗಾರಿಕೆಗಳ ಪ್ರತಿಭೆ, ಭಾರತೀಯ ಎಂಜಿನಿಯರ್‌ಗಳ ಕೌಶಲ್ಯ ಮತ್ತು ಭಾರತೀಯ ಕಾರ್ಮಿಕರ ಶ್ರಮದ ಫಲವೇ ಇವು.

ಹೊಸ ಭಾರತದ ಅತಿದೊಡ್ಡ ಶಕ್ತಿ ಇದೇ. ಇಂದು ಭಾರತ ರಕ್ಷಣಾ ಕ್ಷೇತ್ರದಲ್ಲಿ ಕೇವಲ ಖರೀದಿದಾರನಾಗಿ ಉಳಿಯಲು ಬಯಸುವುದಿಲ್ಲ. ನಮ್ಮ ಸೇನಾ ಸಾಮರ್ಥ್ಯ ವಿಶ್ವಕ್ಕೆ ಮಾರುಕಟ್ಟೆಯಾಗಬಾರದು. ನಮ್ಮ ಶಕ್ತಿಯ ವ್ಯಾಖ್ಯಾನ ವಿಶ್ವದ ಮಾರುಕಟ್ಟೆಯಾಗುವುದರಲ್ಲಿ ಇಲ್ಲ; ಸ್ವಾವಲಂಬಿಯಾಗುವುದರಲ್ಲಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಸಮುದ್ರ ಶಕ್ತಿ ಬಲವಾಗಿದ್ದರೆ, ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವೂ ಬಲವಾಗಿರುತ್ತದೆ

ಇದೇ ವೇಳೆ "ಯಾವ ದೇಶದ ಸಮುದ್ರಶಕ್ತಿ ಬಲವಾಗಿರುತ್ತದೆಯೋ, ಅದರ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವೂ ಬಲವಾಗಿರುತ್ತದೆ. ಭಾರತ ಈ ವಾಸ್ತವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಕೆಲವು ವರ್ಷಗಳ ಹಿಂದೆ ನಾವು ಐಎನ್‌ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದಾಗ, ಭಾರತದ ಸಮುದ್ರಶಕ್ತಿಯ ಹೊಸ ಅಧ್ಯಾಯವನ್ನು ಜಗತ್ತಿಗೆ ಘೋಷಿಸಿದ್ದೆವು.

ಐಎನ್‌ಎಸ್ ವಿಕ್ರಾಂತ್‌ನಿಂದ ಇಂದಿನವರೆಗಿನ ಪಯಣವು ಕೇವಲ ಹೊಸ ಯುದ್ಧನೌಕೆಗಳ ಪಯಣವಲ್ಲ; ಅದು ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯ ಪಯಣವೂ ಆಗಿದೆ. ಇಂದು ಐಎನ್‌ಎಸ್ ಅಗ್ರಾಯ್, ಐಎನ್‌ಎಸ್ ದುನಗಿರಿ ಮತ್ತು ಐಎನ್‌ಎಸ್ ಸಂಶೋಧಕ್ ಯುದ್ಧ ನೌಕೆಗಳು ಆ ಪಯಣಕ್ಕೆ ಹೊಸ ವೇಗವನ್ನು ನೀಡಿವೆ," ಎಂದು ಪ್ರಧಾನಿ ಮೋದಿ ಹೇಳಿದರು.

ಅಂದಹಾಗೆ ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್. ಎನ್. ರವಿ, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಹಾಗೂ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಸ್ವದೇಶಿ ನಿರ್ಮಿತ INS ದುನಗಿರಿ, ಸಂನ್ಶೋಧಕ್, ಅಗ್ರಾಯ್ ಯುದ್ಧನೌಕೆಗಳು ಲೋಕಾರ್ಪಣೆ

International Yoga Day 2026: ವಯಸ್ಸನ್ನು ಮೀರಿಸುವ ಆರೋಗ್ಯದ ಮಂತ್ರ ಯೋಗ, 50ಕ್ಕಿಂತ 70ರ ವಯಸ್ಸಿನಲ್ಲಿ ಹೆಚ್ಚು ಆರೋಗ್ಯವಂತರಾಗೋಣ: ಪ್ರಧಾನಿ ಮೋದಿ

Hormuz ಜಲಸಂಧಿಯಲ್ಲಿ ಅಮೆರಿಕಾ ಹೊಸ ಷರತ್ತು: ಭದ್ರತೆ ಬೇಕಾದರೆ ಸುಂಕ ಕಟ್ಟಿ, ಇಲ್ಲದಿದ್ದರೆ ನಿಮ್ಮ ಹಡಗುಗಳ ನೀವೇ ರಕ್ಷಿಸಿಕೊಳ್ಳಿ; ಹೊಸ ತೆರಿಗೆ ಬಾಂಬ್ ಸಿಡಿಸಿದ ಟ್ರಂಪ್

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ದಾಖಲೆಯ ಶತಕ ಮಿಸ್, ಕೆಣಕ್ಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi

ಹೈಟೆಕ್ ಭ್ರಷ್ಟಾಚಾರ; PhonePe ಮೂಲಕ ಲಂಚ ಪಡೆದ EPFO ಸಿಬ್ಬಂದಿಗೆ 3 ವರ್ಷ ಕಠಿಣ ಜೈಲು, ದುಬಾರಿ ದಂಡ: CBI ವಿಶೇಷ ಕೋರ್ಟ್ ಮಹತ್ವದ ತೀರ್ಪು