ಪ್ರಧಾನಿ ಮೋದಿ 
ದೇಶ

ನಕ್ಸಲ್ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಕಾಂಗ್ರೆಸ್ಸಿನವರಿಗೆ ಧೈರ್ಯವೇ ಇರಲಿಲ್ಲ- ಪ್ರಧಾನಿ ಮೋದಿ ವಾಗ್ದಾಳಿ

"ರಿಪಬ್ಲಿಕ್ ಶೃಂಗಸಭೆ 2026" ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮಾತ್ರವಲ್ಲದೆ, ವಿಶ್ವಾಸಾರ್ಹ ಜಾಗತಿಕ ಶಕ್ತಿಯಾಗಿದೆ ಮತ್ತು ದೇಶವು ಮುಂದಿನ 1,000 ವರ್ಷಗಳ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದರು.

ನವದೆಹಲಿ: ದಶಕಗಳ ನಕ್ಸಲ್ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈಗ ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವವರಿಗೆ ನಕ್ಸಲ್ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಧೈರ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ರಿಪಬ್ಲಿಕ್ ಶೃಂಗಸಭೆ 2026" ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮಾತ್ರವಲ್ಲದೆ, ವಿಶ್ವಾಸಾರ್ಹ ಜಾಗತಿಕ ಶಕ್ತಿಯಾಗಿದೆ ಮತ್ತು ದೇಶವು ಮುಂದಿನ 1,000 ವರ್ಷಗಳ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಆಡಳಿತಗಳೊಂದಿಗೆ ತಮ್ಮ ಸರ್ಕಾರದ ವಿಧಾನವನ್ನು ವ್ಯತಿರಿಕ್ತವಾಗಿ ಹೇಳಿದ ಮೋದಿ, ನಕ್ಸಲ್ ಹಿಂಸಾಚಾರದಿಂದ ಹಿಂದುಳಿದಿದ್ದ ಪ್ರದೇಶಗಳು ಈಗ ಅಭಿವೃದ್ಧಿಯಾಗುತ್ತಿವೆ. ಎನ್‌ಡಿಎ ಸರ್ಕಾರವು ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳಾಗಿ ಬದಲಾಯಿಸಿದ್ದು, ಅವು ಈಗ ಪ್ರಾದೇಶಿಕ ಅಭಿವೃದ್ಧಿಗೆ ಚಾಲನೆ ನೀಡುತ್ತಿವೆ ಎಂದರು.

ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಡತನವು ವ್ಯಾಪಕವಾಗಿತ್ತು. ಆದರೆ ಅಭಿವೃದ್ಧಿ ಪ್ರಯತ್ನಗಳು ಜೀವನ ಪರಿಸ್ಥಿತಿ ಸುಧಾರಿಸಲು ಸಹಾಯ ಮಾಡಿವೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವಲ್ಲಿ ಮತ್ತು ಹಿಂದೆ ನಕ್ಸಲಿಸಂನಿಂದ ಪ್ರಭಾವಿತವಾದ ಪ್ರದೇಶಗಳ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.

2004 ಮತ್ತು 2014 ರ ನಡುವೆ, ಮಾವೋವಾದಿ ಭಯೋತ್ಪಾದನೆಯಿಂದಾಗಿ 17,000 ಕ್ಕೂ ಹೆಚ್ಚು ಹಿಂಸಾತ್ಮಕ ಘಟನೆಗಳು ಸಂಭವಿಸಿವೆ ಮತ್ತು ಸುಮಾರು 7,000 ಜೀವಗಳು ಬಲಿಯಾಗಿವೆ. 2014 ರ ನಂತರ, ಪರಿಸ್ಥಿತಿಯನ್ನು ಬದಲಾಯಿಸಲು ನಾವು 'ನೇಷನ್ ಫಸ್ಟ್' ಎಂಬ ಸಂಕಲ್ಪದೊಂದಿಗೆ ಮುಂದುವರೆದಿದ್ದೇವೆ ಎಂದು ತಿಳಿಸಿದರು.

ಇಂದು, ದೇಶದಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟಹಾಕಿದ್ದೇವೆ. ಇಂದು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವವರು ಕೈ ಆಗ ಸಂವಿಧಾನವನ್ನು ತೋರಿಸಲು ಸಹ ನಡುಗುತ್ತಿದ್ದವು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!