ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳ 
ದೇಶ

ಮೋದಿ ಮುಖವಾಡ ಧರಿಸಿ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳ: ₹5 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್‌ ಕಳ್ಳತನ; ಸಿಸಿಟಿವಿ ದೃಶ್ಯ ನೋಡಿ!

ಕಳ್ಳನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಮೊಬೈಲ್ ಫೋನ್ ಅಂಗಡಿಗೆ ನುಗ್ಗಿ, ಐದು ಲಕ್ಷ ರೂಪಾಯಿ ಮೌಲ್ಯದ 40 ಸ್ಮಾರ್ಟ್‌ಫೋನ್‌ಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.

ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕರೆಡಾ ಪಟ್ಟಣದಲ್ಲಿ ವಿಚಿತ್ರ ಹಾಗೂ ಆಘಾತಕಾರಿ ಕಳ್ಳತನ ಪ್ರಕರಣ ನಡೆದಿದೆ.

ಕಳ್ಳನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಮೊಬೈಲ್ ಫೋನ್ ಅಂಗಡಿಗೆ ನುಗ್ಗಿ, ಐದು ಲಕ್ಷ ರೂಪಾಯಿ ಮೌಲ್ಯದ 40 ಸ್ಮಾರ್ಟ್‌ಫೋನ್‌ಗಳನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಇದೀಗ ಎಲ್ಲರ ಗಮನ ಸೆಳೆದಿದೆ.

ಕರೇಡಾ ಬಸ್ ನಿಲ್ದಾಣದ ಸಮೀಪದ 'ಮಾತೇಶ್ವರಿ ಮೊಬೈಲ್' ಅಂಗಡಿಯಲ್ಲಿ ಸೋಮವಾರ ತಡರಾತ್ರಿ ಈ ಕಳತನ ನಡೆದಿದೆ.

ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ಅವರ ಪ್ರಕಾರ, ಸೋಮವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಮಂಗಳವಾರ ಬೆಳಗ್ಗೆ ಅವರಿಗೆ ವಿಷಯ ಗೊತ್ತಾಗಿದೆ. ಅವರು ಪ್ರತಿದಿನದಂತೆ ಇಂದು ಬೆಳಗ್ಗೆ ಬಂದು ತಮ್ಮ ಅಂಗಡಿಯನ್ನು ತೆರೆದಾಗ ಕಂಗಾಲಾಗಿದ್ದಾರೆ. ಅಂಗಡಿಯ ಒಳಗಿದ್ದ ಸಾಮಗ್ರಿಗಳೆಲ್ಲಾ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಬಾಕ್ಸ್‌ಗಳು ಖಾಲಿಯಾಗಿದ್ದವು.

"ನಾನು ಬೆಳಗ್ಗೆ ಬಂದು ಅಂಗಡಿಯನ್ನು ಪರಿಶೀಲಿಸಿದಾಗ, ಛಾವಣಿಯ ಮೇಲಿದ್ದ ಮೆಟ್ಟಿಲುಗಳ ಗೇಟ್‌ನ ಬೀಗ ಮುರಿದಿರುವುದು ಕಂಡುಬಂತು. ಕಳ್ಳರು ಇದೇ ಮಾರ್ಗವಾಗಿ ಅಂಗಡಿಯ ಒಳಗೆ ನುಗ್ಗಿದ್ದಾರೆ. ಬೇರೆ ಬೇರೆ ಪ್ರಮುಖ ಕಂಪನಿಗಳ ಬೆಲೆಬಾಳುವ ಸ್ಮಾರ್ಟ್‌ಫೋನ್‌ಗಳನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ" ಎಂದು ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ತಿಳಿಸಿದ್ದಾರೆ.

ಅಂಗಡಿ ಮಾಲೀಕ ನೀಡಿದ ದೂರಿನ ಮೇರೆಗೆ ಕರೇಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿಯ ಒಳಗೆ ಹಾಗೂ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಶಂಕಿತರಲ್ಲಿ ಒಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಮುಖವಾಡ ಧರಿಸಿರುವುದು ಪತ್ತೆಯಾಗಿದೆ. ತನ್ನ ಗುರುತನ್ನು ಮರೆಮಾಚಲು ಆತ ಈ ಮುಖವಾಡವನ್ನು ಬಳಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮ ಮಂದಿರ ದೇಣಿಗೆ ಲೂಟಿ: BJP, RSSಗೆ, 'ಡೊನೇಷನ್ ಫಸ್ಟ್', 'ದೇಶ ನಂತರ': ಮೋದಿ ಮೌನ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

Cabinet Expansion: ಇನ್ನು 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ; ಸಚಿವ ಎಂಬಿ ಪಾಟೀಲ್

ಭಾರತೀಯ ಸೈನಿಕರ ಸಾವಿನ ಬಗ್ಗೆ ಸಂಸತ್ ಗೆ ತಪ್ಪು ಮಾಹಿತಿ ಆರೋಪ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೋಟಿಸ್

ಚಪ್ಪಲಿ ಎಸೆತ ಪ್ರಕರಣ: ನನ್ನ ಕುಟುಂಬವನ್ನು ಕೀಳಾಗಿ ನಿಂದಿಸಿದರು; ಸಿದ್ದರಾಮಯ್ಯ ಮುಂದೆ ಪ್ರದೀಪ್ ಈಶ್ವರ್ ಕಣ್ಣೀರು!

ಬೆಂಗಳೂರಿನ ಗರುಡ ಮಾಲ್ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಕಟ್ಟಡ!