ಸಾಂದರ್ಭಿಕ ಚಿತ್ರ 
ದೇಶ

ಅಮೆರಿಕ-ಇರಾನ್ ಯುದ್ಧ: 11 ದೇಶಗಳ ವಾಯು ಪ್ರದೇಶ ಬಳಸದಂತೆ ಭಾರತದ ವಿಮಾನಯಾನ ಸಂಸ್ಥೆಗಳಿಗೆ DGCA ಸೂಚನೆ

ಅನೇಕ ವಾಯುಪ್ರದೇಶಗಳನ್ನು ಈಗಾಗಲೇ ಮುಚ್ಚಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯಕ್ಕೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ.

ನವದೆಹಲಿ: ಇರಾನ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ 11 ದೇಶಗಳ ವಾಯು ಪ್ರದೇಶವನ್ನು ಮಾರ್ಚ್ 2 ರವರೆಗೆ ಬಳಸದಂತೆ DGCA ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.

ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್, ಲೆಬನಾನ್, ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಓಮನ್, ಇರಾಕ್, ಜೋರ್ಡಾನ್, ಕುವೈತ್ ಮತ್ತು ಕತಾರ್ ನಲ್ಲಿನ ವಾಯು ಪ್ರದೇಶವನ್ನು ಬಳಸದಂತೆ ಸೂಚಿಸಲಾಗಿದೆ.

ಅನೇಕ ವಾಯುಪ್ರದೇಶಗಳನ್ನು ಈಗಾಗಲೇ ಮುಚ್ಚಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯಕ್ಕೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ.ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳು ಮತ್ತು ಯುರೋಪಿಯನ್ ಯೂನಿಯನ್ ಏವಿಯೇಷನ್ ​​​​ಸೇಫ್ಟಿ ಏಜೆನ್ಸಿಯ ಸಂಘರ್ಷ ವಲಯ ಮಾಹಿತಿ ಬುಲೆಟಿನ್ (CZIB) ಗೆ ಅನುಗುಣವಾಗಿ ಈ ಸಲಹೆಯನ್ನು ನೀಡಲಾಗಿದೆ ಎಂದು ನಿಯಂತ್ರಕ ಸಂಸ್ಥೆ DGCA ತಿಳಿಸಿದೆ.

ಯುದ್ಧ ಪೀಡಿತ ದೇಶಗಳು ಮತ್ತು ರಾಷ್ಟ್ರೀಯ ಅಧಿಕಾರಿಗಳು ಹೊರಡಿಸಿದ ಎಲ್ಲಾ ಪರಿಷ್ಕೃತ ಏರೋನಾಟಿಕಲ್ ಮಾಹಿತಿ ಪ್ರಕಟಣೆಗಳು (AIP ಗಳು) ಮತ್ತು ಏರ್‌ಮೆನ್‌ಗಳಿಗೆ ಸೂಚನೆ (NOTAM ಗಳು) ಗಳನ್ನು ಮೇಲ್ವಿಚಾರಣೆ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಈ ಸಲಹೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಮುಂದಿನ ಬೆಳವಣಿಗೆಗಳಿಂದ ಪರಿಶೀಲಿಸದಿದ್ದರೆ ಅಥವಾ ಅದನ್ನು ರದ್ದುಗೊಳಿಸದ ಹೊರತು ಮಾರ್ಚ್ 02, 2026 ರವರೆಗೆ ಮಾನ್ಯವಾಗಿರುತ್ತದೆ" ಎಂದು DGCA ಸಲಹೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ: ಈ ಮೂರು ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ!

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

‘ರಜಾಕರ್‌ಗಳಿಂದ ನಮ್ಮನ್ನು ರಕ್ಷಿಸಿದ್ದು RSS ಅಲ್ಲ, ಭಾರತೀಯ ಸೇನೆ’: BL ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

Hockey World Cup 2026: ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತ ಶುಭಾರಂಭ, ವೇಲ್ಸ್ ವಿರುದ್ಧ 3-1 ಅಂತರದ ಭರ್ಜರಿ ಜಯ

India vs Sri Lanka 1st Test: ಕೆ.ಎಲ್. ರಾಹುಲ್ ಹೊಡೆದ ಸ್ವೀಪ್ ಶಾಟ್ ಗೆ ಆಸ್ಪತ್ರೆ ಸೇರಿದ ಲಂಕಾ ಫೀಲ್ಡರ್‌! Video