ಪ್ರಧಾನ ಮಂತ್ರಿ ನರೇಂದ್ರ ಮೋದಿ  
ದೇಶ

ಪ್ರಧಾನಿ ಮೋದಿ ಮತ್ತೊಂದು ದಾಖಲೆ: YouTube channel ಗೆ 3 ಕೋಟಿಗೂ ಹೆಚ್ಚು ಸಬ್ಸ್ಕ್ರೈಬರ್‌, ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವ ನಾಯಕ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಏಳು ಪಟ್ಟು ಹೆಚ್ಚು ಸಬ್ಸ್ಕ್ರೈಬರ್‌ಗಳನ್ನು ಮೋದಿ ಹೊಂದಿರುವುದು ಅವರ ಜಾಗತಿಕ ಹಾಗೂ ಡಿಜಿಟಲ್ ತಲುಪುವಿಕೆಯ ಪ್ರಮಾಣವನ್ನು ತೋರಿಸುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಈಗ 3 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದು, ಈ ಮೈಲಿಗಲ್ಲು ಅವರನ್ನು ಯೂಟ್ಯೂಬ್ ಚಾನೆಲ್ ವೇದಿಕೆಯಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವ ನಾಯಕರಾಗಿ ಮತ್ತಷ್ಟು ಜನಪ್ರಿಯಗೊಳಿಸಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಏಳು ಪಟ್ಟು ಹೆಚ್ಚು ಸಬ್ಸ್ಕ್ರೈಬರ್‌ಗಳನ್ನು ಮೋದಿ ಹೊಂದಿರುವುದು ಅವರ ಜಾಗತಿಕ ಹಾಗೂ ಡಿಜಿಟಲ್ ತಲುಪುವಿಕೆಯ ಪ್ರಮಾಣವನ್ನು ತೋರಿಸುತ್ತದೆ. ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಎರಡನೇ ಅತಿ ಹೆಚ್ಚು ಸಬ್ಸ್ಕ್ರೈಬರ್‌ಗಳನ್ನು ಹೊಂದಿದ್ದರೂ, ಅವರ ಸಂಖ್ಯೆ ಮೋದಿ ಅವರಿಗಿಂತ ಸುಮಾರು ನಾಲ್ಕನೇ ಭಾಗದಷ್ಟೇ ಇದೆ.

ಭಾರತದಲ್ಲಿ, ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗಿಂತ ಮೂರು ಪಟ್ಟು ಹೆಚ್ಚು ಸಬ್ಸ್ಕ್ರೈಬರ್‌ಗಳಿದ್ದು, Indian National Congress ಮತ್ತು Aam Aadmi Party ಪಕ್ಷಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ. 3 ಕೋಟಿಗೂ ಅಧಿಕ ಸಬ್ಸ್ಕ್ರೈಬರ್‌ಗಳೊಂದಿಗೆ, ಮೋದಿ ಅವರ ಯೂಟ್ಯೂಬ್ ಖಾತೆ ಜಾಗತಿಕವಾಗಿ ಅತಿ ಹೆಚ್ಚು ಸಬ್ಸ್ಕ್ರೈಬ್ ಮಾಡಲ್ಪಟ್ಟ ಚಾನೆಲ್ ಆಗಿದೆ.

ಕಳೆದ ವಾರ, ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ 10 ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿದ ಮೊದಲ ವಿಶ್ವ ನಾಯಕ ಮತ್ತು ರಾಜಕಾರಣಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಅವರು ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಮುಂದಿನ ಐದು ಪ್ರಮುಖ ಜಾಗತಿಕ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯೂ ಮೋದಿ ಅವರ ವೈಯಕ್ತಿಕ ಅನುಯಾಯಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ.

2025ರ ಡಿಸೆಂಬರ್ ವೇಳೆಗೆ, ಆಯ್ದ ಜಾಗತಿಕ ನಾಯಕರಲ್ಲಿ ಮೋದಿ ಅವರಿಗೆ ಅತಿ ಹೆಚ್ಚು ಅನುಮೋದನೆ (approval rating) ದೊರೆತಿದೆ. Statista ಮಾಹಿತಿ ಪ್ರಕಾರ, ಮೋದಿ ಅವರಿಗೆ 70 ಶೇಕಡಾ ಅನುಮೋದನೆ ದೊರೆತು ಅವರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅಮೆರಿಕಾ ಮೂಲದ ವ್ಯವಹಾರ ಗುಪ್ತಚರ ಸಂಸ್ಥೆ Morning Consult ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ 67 ಶೇಕಡಾ ಅನುಮೋದನೆ ದರದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಈ ಸಂಸ್ಥೆಯ ವಿಶ್ಲೇಷಣೆ ಫೆಬ್ರವರಿ 2ರಿಂದ ಫೆಬ್ರವರಿ 8ರವರೆಗೆ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

Jharkhand: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ, ನೇಮಕಾತಿ ಪರೀಕ್ಷೆ ವಿವಾದ ಬಗೆಹರಿಸಿ: ಸಿಎಂ ಸೊರೆನ್‌ಗೆ ರಾಹುಲ್ ಗಾಂಧಿ ಮನವಿ

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!