ವಿಮಾನ ಪತನದಲ್ಲಿ ಮೃತಪಟ್ಟ ಪೈಲಟ್ ಗಳು 
ದೇಶ

ಅಸ್ಸಾಂ: ಭಾರತೀಯ ವಾಯುಪಡೆಯ Sukhoi-30 ಯುದ್ಧ ವಿಮಾನ ಪತನ! ಇಬ್ಬರು ಪೈಲಟ್ ದುರ್ಮರಣ; Video

ತರಬೇತಿಯಲ್ಲಿದ್ದ Su-30MKI ಯುದ್ಧ ವಿಮಾನ ಗುರುವಾರ ಜೋರ್ಹತ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.

ಅಸ್ಸಾಂ: ರಾಡಾರ್ ಸಂಪರ್ಕದಿಂದ ಕಡಿತಗೊಂಡು ನಾಪತ್ತೆಯಾಗಿದ್ದ ಸುಖೋಯ್ 30 ಎಂಕೆಐ ಯುದ್ಧ ವಿಮಾನ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಪತನ ಇಬ್ಬರು ಪೈಲಟ್‌ಗಳು ದುರ್ಮರಣ ಹೊಂದಿದ್ದಾರೆ ಎಂದು IAF ಶುಕ್ರವಾರ ತಿಳಿಸಿದೆ.

ತರಬೇತಿಯಲ್ಲಿದ್ದ Su-30MKI ಯುದ್ಧ ವಿಮಾನ ಗುರುವಾರ ಜೋರ್ಹತ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ "Sqn Ldr Anuj ಮತ್ತು ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ. ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುವುದಾಗಿ ಭಾರತೀಯ ವಾಯುಪಡೆ ಹೇಳಿದೆ. ರಷ್ಯಾ ಮೂಲದ ವಿಮಾನ ಜೊತೆಗಿನ ಸಂಪರ್ಕ ನಿನ್ನೆ ಸಂಜೆ 7:42 ಕ್ಕೆ ಸಂಪರ್ಕ ಕಡಿತಗೊಂಡಿತ್ತು.

Su-30MKI ಫೈಟರ್ ಜೆಟ್: Su-30MKI ರಷ್ಯಾದ ವಿಮಾನ ತಯಾರಕ ಸುಖೋಯ್ ಅಭಿವೃದ್ಧಿಪಡಿಸಿದ ಎರಡು ಆಸನಗಳ ಯುದ್ಧ ವಿಮಾನವಾಗಿದೆ. ಈಗ ಇದನ್ನು ಭಾರತೀಯ ವಾಯುಪಡೆಗೆ HAL ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಾಯುಪಡೆಯಲ್ಲಿ 260 ಕ್ಕೂ ಹೆಚ್ಚು ಸುಖೋಯ್ 30 ಯುದ್ಧ ವಿಮಾನಗಳಿವೆ.

ಈ ಹಿಂದೆ ಜೂನ್ 2024 ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸುಖೋಯ್ ಯುದ್ಧ ವಿಮಾನ ಪತನಗೊಂಡಿತ್ತು. ಮತ್ತೊಂದು ಸುಖೋಯ್-30 ಯುದ್ಧ ವಿಮಾನ ಜನವರಿ 2023 ರಲ್ಲಿ ಗ್ವಾಲಿಯರ್ ವಾಯುನೆಲೆಯಿಂದ ಟೇಕ್ ಆಫ್ ಆದ ನಂತರ ಪತನಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ಹಠಾತ್ ಪೊಲೀಸ್ ದಾಳಿ; ರಾತ್ರಿಯಿಡೀ ಶೋಧ

ಅಮೆರಿಕದೊಂದಿಗೆ ಒಪ್ಪಂದ ಹಿಂದೆಂದಿಗಿಂತಲೂ ಸಮೀಪದಲ್ಲಿದೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ; ಪೋಸ್ಟ್ ಹಂಚಿಕೊಂಡ ಡೊನಾಲ್ಡ್ ಟ್ರಂಪ್

ಬೆಂಗಳೂರು: ಕೆಂಗೇರಿ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿ; ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವು

MLC ಚುನಾವಣೆಯಲ್ಲಿ ಅಡ್ಡ ಮತದಾನ ತಡೆಯಲು ಕಸರತ್ತು: ಜೂನ್ 16 ರಂದು ವಂಡರ್‌ಲಾ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ!

ಕೇರಳ ಸಿಎಂ ಸತೀಶನ್, ಕುಟುಂಬಕ್ಕೆ 'ಕೊಲ್ಲುವುದಾಗಿ ಬೆದರಿಕೆ' ಹಾಕಿದ್ದ ವ್ಯಕ್ತಿಯ ಬಂಧನ!

SCROLL FOR NEXT