ಸಾಂದರ್ಭಿಕ ಚಿತ್ರ 
ದೇಶ

ಜಮ್ಮು: ಎಲ್‌ಒಸಿ ಬಳಿ ಒಳನುಸುಳುವಿಕೆ ಯತ್ನ ವಿಫಲ; ಓರ್ವ ಉಗ್ರನ ಹತ್ಯೆ

ಒಳನುಸುಳುಕೊರರೊಂದಿಗೆ ನಡೆದ ಸಂಕ್ಷಿಪ್ತ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದೆ.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ನೌಶೇರಾದ ಝಂಗಾರ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇಬ್ಬರು ಭಯೋತ್ಪಾದಕರ ಚಲನವಲನ ಪತ್ತೆಯಾದ ನಂತರ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸುವ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿವೆ.

ಖಚಿತ ಮಾಹಿತಿಯ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಭದ್ರತಾ ಪಡೆಗಳು, ಒಳನುಸುಳುಕೊರರೊಂದಿಗೆ ನಡೆದ ಸಂಕ್ಷಿಪ್ತ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದೆ.

ಎರಡನೇ ಭಯೋತ್ಪಾದಕನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಸಮಗ್ರ ಭೂ ಮತ್ತು ವೈಮಾನಿಕ ಮೇಲ್ವಿಚಾರಣೆಯೊಂದಿಗೆ ಭದ್ರತಾ ಪಡೆಗಳು, ಈ ವಲಯದಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮನೆಗಳಿಗೆ ಎಲ್‌ಪಿಜಿ, ವಾಹನಗಳಿಗೆ ಸಿಎನ್‌ಜಿ ಪೂರೈಕೆ 100 ಪರ್ಸೆಂಟ್ ಗ್ಯಾರಂಟಿ: ಕೇಂದ್ರ ಭರವಸೆ

'TMC ಬೆಂಬಲಿಸದವರಿಗೆ ಬಂಗಾಳದಲ್ಲಿ ಇರುವ ಯಾವುದೇ ಹಕ್ಕಿಲ್ಲ': Mahua Moitra

T20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಭಾರತಕ್ಕೆ ಶಾಕ್ ಕೊಟ್ಟ ICC, ಸ್ಟಾರ್ ಆಟಗಾರನಿಗೆ ದುಬಾರಿ ದಂಡ.. ಕಾರಣ ಏನು ಗೊತ್ತಾ?

'ನಾವಿರೋದ್ರಿಂದ ಹಿಂದೂಗಳು ಸುರಕ್ಷಿತ.. ಇಲ್ಲ ಅಂದ್ರೆ ಆ ಸಮುದಾಯದವ್ರು ಮುಗಿಸಿಬಿಡುತ್ತಿದ್ದರು': Mamata Banerjee ವಿವಾದಾತ್ಮಕ ಹೇಳಿಕೆ, ಬಿಜೆಪಿ ಕಿಡಿ

ಹುಷಾರ್...: ಡೊನಾಲ್ಡ್ ಟ್ರಂಪ್‌ಗೆ ಇರಾನ್‌ನ ಉನ್ನತ ಭದ್ರತಾ ಅಧಿಕಾರಿ ಬೆದರಿಕೆ

SCROLL FOR NEXT