ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ಪ್ರತಿಭಟನೆ 
ದೇಶ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಅನೇಕ ಜನ ತಲೆಕೆಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಎದೆ ಬಡಿದುಕೊಳ್ಳುತ್ತಿದ್ದಾರೆ.

ಸಂಭಾಲ್: ವಿದೇಶಿ ಸಂಘರ್ಷಗಳು ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರಬಾರದು ಮತ್ತು ಅಂತಹ ಘಟನೆಗಳಿಂದ ತೊಂದರೆಗೊಳಗಾದವರು ಇಲ್ಲಿ ಅಶಾಂತಿಯನ್ನು ಸೃಷ್ಟಿಸಬಾರದು ಎಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಬರುವ ಅಲ್ವಿದಾ ಪ್ರಾರ್ಥನೆ ಮತ್ತು ಈದ್‌ಗಾಗಿ ಸಂಭಾಲ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಪರಿಶೀಲನಾ ಸಭೆಯಲ್ಲಿ ವೃತ್ತ ಅಧಿಕಾರಿ ಕುಲದೀಪ್ ಸಿಂಗ್ ಅವರು ಈ ರೀತಿ ಹೇಳಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

"ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಅನೇಕ ಜನ ತಲೆಕೆಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಎದೆ ಬಡಿದುಕೊಳ್ಳುತ್ತಿದ್ದಾರೆ. ಬ್ರದರ್, ನಿಮಗೆ ತುಂಬಾ ತೊಂದರೆ ಆಗಿದ್ದರೆ, ನೀವು ವಿಮಾನ ಹತ್ತಿ ಇರಾನ್‌ಗೆ ಹೋಗಿ ಇರಾನ್ ಪರವಾಗಿ ಹೋರಾಡಬೇಕು" ಎಂದು ಅಧಿಕಾರಿ ಹೇಳಿದ್ದಾರೆ.

ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ ಸಿಂಗ್, ತಮ್ಮ ಹೇಳಿಕೆ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು.

"ವಿದೇಶಿ ನೆಲದಲ್ಲಿ ನಡೆಯುತ್ತಿರುವ ಘಟನೆಗಳು ಇಲ್ಲಿನ ವಾತಾವರಣವನ್ನು ಹಾಳು ಮಾಡಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶ" ಎಂದು ಅವರು ತಿಳಿಸಿದರು.

ಸಭೆಯಲ್ಲಿ, ಪ್ರಾರ್ಥನೆಯ ಸಮಯದಲ್ಲಿ ಯಾವುದೇ ಇತರ ದೇಶವನ್ನು ಬೆಂಬಲಿಸಿ ಅಥವಾ ವಿರುದ್ಧವಾಗಿ ಘೋಷಣೆಗಳನ್ನು ಕೂಗಬಾರದು ಅಥವಾ ಫಲಕಗಳನ್ನು ಪ್ರದರ್ಶಿಸಬಾರದು ಎಂದು ಸಿಂಗ್ ಜನರಿಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಇಂದಿರಾ, ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್!

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ನೀವು ಮಿತಿ ಮೀರಿದ್ದೀರಿ: ಕನ್ನಡದಲ್ಲೇ ಎಚ್ಚರಿಕೆ ಕೊಟ್ಟ ರಶ್ಮಿಕಾ; ಸಂಕಷ್ಟದ ಸಮಯದಲ್ಲಿ ಕನ್ನಡವೇ ಬೇಕಾಯ್ತಾ? ಎಂದ ನೆಟ್ಟಿಗರು!

ಬಂಡೀಪುರ, ನಾಗರಹೊಳೆ ಸಫಾರಿ ತಾತ್ಕಾಲಿಕ ಸ್ಥಗಿತ ಸಮರ್ಥಿಸಿಕೊಂಡ ಖಂಡ್ರೆ; ಷರತ್ತುಬದ್ಧ ಆರಂಭ

SCROLL FOR NEXT